Advertisement

ಟಿ20: ಸ್ವಲ್ಪದರಲ್ಲೇ ಮೊದಲ ರ್ಯಾಂಕ್ ನಿಂದ ತಪ್ಪಿಸಿಕೊಂಡ ಸೂರ್ಯಕುಮಾರ್

05:20 PM Oct 05, 2022 | Team Udayavani |

ದುಬೈ: ಐಸಿಸಿ ಟಿ20 ರ್ಯಾಂಕಿಂಗ್ ಬಿಡುಗಡೆಯಾಗಿದ್ದು, ಭಾರತದ ಇನ್ ಫಾರ್ಮ್ ಆಟಗಾರ ಸೂರ್ಯಕುಮಾರ್ ಯಾದವ್ ಅವರು ಮತ್ತೆ ಮೊದಲ ರ್ಯಾಂಕ್ ನಿಂದ ತಪ್ಪಿಸಿಕೊಂಡಿದ್ದಾರೆ. ಸೂರ್ಯ ಮತ್ತೆ ದ್ವಿತೀಯ ರ್ಯಾಂಕ್ ನಲ್ಲಿದ್ದು ಮೊದಲ ಸ್ಥಾನದಲ್ಲಿ ಪಾಕಿಸ್ಥಾನದ ಕೀಪರ್ ಮೊಹಮ್ಮದ್ ರಿಜ್ವಾನ್ ಅವರಿದ್ದಾರೆ.

Advertisement

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಪಂದ್ಯದಲ್ಲಿ ಮಿಂಚಿದ್ದ ಸೂರ್ಯ ಅಂತಿಮ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದರು. ಹೀಗಾಗಿ ಮೊದಲ ಸ್ಥಾನಕ್ಕೇರಲಾಗಲಿಲ್ಲ. ಸೂರ್ಯಕುಮಾರ್ ಯಾದವ್ ಸದ್ಯ 838 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು, ಮೊದಲ ಸ್ಥಾನದಲ್ಲಿರುವ ರಿಜ್ವಾನ್ 854 ಅಂಕ ಹೊಂದಿದ್ದಾರೆ. ಮೂರನೇ ಸ್ಥಾನದಲ್ಲಿರುವ ಬಾಬರ್ ಅಜಂ 801 ಅಂಕ ಹೊಂದಿದ್ದಾರೆ.

ಇದನ್ನೂ ಓದಿ:ಮೈಸೂರಿನಲ್ಲಿ ವೈಭವದ ಜಂಬೂ ಸವಾರಿ: ಅರ್ಜುನನಿಗೆ ಜೈಕಾರ; ಹಲವು ತಂಡಗಳ ಕಲಾಪ್ರದರ್ಶನ

ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಆರಂಭಿಕ ಕೆಎಲ್ ರಾಹುಲ್ ತಲಾ 1 ಸ್ಥಾನಕ್ಕೆ ಕುಸಿದು ಕ್ರಮವಾಗಿ 16, 15 ಮತ್ತು 14 ನೇ ಸ್ಥಾನಗಳಲ್ಲಿದ್ದಾರೆ.

ದಕ್ಷಿಣ ಆಫ್ರಿಕಾದ ಮೂವರು ಆಟಗಾರರಾದ ಕ್ವಿಂಟನ್ ಡಿ ಕಾಕ್ (ಎಂಟು ಸ್ಥಾನ ಮೇಲೇರಿ 12ನೇ ಸ್ಥಾನಕ್ಕೆ), ರೈಲೀ ರೂಸ್ಸೋ (23 ಸ್ಥಾನ ಮೇಲೇರಿ 20ನೇ ಸ್ಥಾನಕ್ಕೆ) ಮತ್ತು ಡೇವಿಡ್ ಮಿಲ್ಲರ್ (10 ಸ್ಥಾನ ಮೇಲೇರಿ 29ನೇ ಸ್ಥಾನಕ್ಕೆ) ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next