Advertisement

ಟಿ 20 ರ‍್ಯಾಂಕಿಂಗ್‌;ಬಾಬರ್ ಅಜಮ್ 2ನೇ ಸ್ಥಾನಕ್ಕೆ: ಸೂರ್ಯಕುಮಾರ್ ಗೆ 4 ನೇ ಸ್ಥಾನ

04:33 PM Sep 07, 2022 | Team Udayavani |

ದುಬೈ: ಪಾಕಿಸ್ತಾನದ ವಿಕೆಟ್‌ಕೀಪರ್-ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಬುಧವಾರ (ಸೆ 7) ವಾರದ ನವೀಕರಣದ ನಂತರ ಐಸಿಸಿ ಪುರುಷರ ಟಿ 20 ಆಟಗಾರರ ಶ್ರೇಯಾಂಕದಲ್ಲಿ  ಬ್ಯಾಟ್ಸ್ ಮ್ಯಾನ್ ಗಳ ಪೈಕಿ ತಮ್ಮ ಆರಂಭಿಕ ಪಾಲುದಾರ ಮತ್ತು ನಾಯಕ ಬಾಬರ್ ಅಜಮ್ ಅವರನ್ನು ಹಿಂದಿಕ್ಕಿದ್ದಾರೆ.

Advertisement

ದುಬೈನಲ್ಲಿ ನಡೆದ ಸೂಪರ್ ಫೋರ್ ಪಂದ್ಯದಲ್ಲಿ ಭಾರತದ ವಿರುದ್ಧ 51 ಎಸೆತಗಳಲ್ಲಿ 71 ರನ್, ಗ್ರೂಪ್ ಎ ಪಂದ್ಯದಲ್ಲಿ 57 ಎಸೆತಗಳಲ್ಲಿ 78 ರನ್ ಗಳಿಸಿದ ರಿಜ್ವಾನ್ ಪ್ಲೇಯರ್ ಆಫ್ ದಿ ಮ್ಯಾಚ್ ಆಗುವ ಮೂಲಕ ಮೊದಲ ಬಾರಿಗೆ ಉನ್ನತ ಸ್ಥಾನವನ್ನು ಪಡೆದುಕೊಂಡರು.

ಒಟ್ಟು 1,155 ದಿನಗಳ ಕಾಲ ಅಗ್ರಸ್ಥಾನದಲ್ಲಿದ್ದ ಬಾಬರ್ ಮತ್ತು 313 ದಿನಗಳ ಕಾಲ ಅಗ್ರಸ್ಥಾನದಲ್ಲಿದ್ದ ಮಿಸ್ಬಾ-ಉಲ್-ಹಕ್ ನಂತರ ಟಿ20 ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಪಡೆದ ಪಾಕಿಸ್ತಾನದ ಮೂರನೇ ಬ್ಯಾಟ್ಸ್ ಮ್ಯಾನ್ ರಿಜ್ವಾನ್ ಅವರಾಗಿದ್ದಾರೆ.

ಏಷ್ಯಾಕಪ್‌ನಲ್ಲಿ ಕೆಲವು ಉತ್ತಮ ಪ್ರದರ್ಶನಗಳ ನಂತರ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನದ  ಆಟಗಾರರು ಉತ್ತಮ ಪ್ರಗತಿ ಸಾಧಿಸಿದ್ದು, ಭಾರತದ ಸೂರ್ಯಕುಮಾರ್ ಯಾದವ್ ನಾಲ್ಕನೇ ಸ್ಥಾನಕ್ಕೆ ಇಳಿದಿದ್ದಾರೆ.

ಬಾಬರ್ ಅಜಮ್ (ಪಾಕಿಸ್ತಾನ) – 794 ಪಾಯಿಂಟ್ಸ್ ಗಳೊಂದಿಗೆ 2 ನೇ ಸ್ಥಾನ, ದಕ್ಷಿಣ ಆಫ್ರಿಕಾದ ಐಡೆನ್ ಮಾರ್ಕ್ರಾಮ್ 792 ಪಾಯಿಂಟ್ಸ್ ಗಳೊಂದಿಗೆ 3 ನೇ ಸ್ಥಾನ, 775 ಪಾಯಿಂಟ್ಸ್ ಗಳೊಂದಿಗೆ ಸೂರ್ಯಕುಮಾರ್ ಯಾದವ್ 4 ನೇ ಸ್ಥಾನ, 731 ಪಾಯಿಂಟ್ಸ್ ಗಳೊಂದಿಗೆ ಇಂಗ್ಲೆಂಡ್ ನ ಡೇವಿಡ್ ಮಲಾನ್ 5ನೇ ಸ್ಥಾನದಲ್ಲಿದ್ದಾರೆ.

Advertisement

ಭಾರತ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ಸೂಪರ್ ಫೋರ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 72 ರನ್ ಗಳಿಸಿ ನಾಲ್ಕು ಸ್ಥಾನಗಳ ಮುಂದೆ ಬಂದು 13 ನೇ ಸ್ಥಾನಕ್ಕೆ ತಲುಪಿದ್ದಾರೆ ಮಾಜಿ ನಾಯಕ ವಿರಾಟ್ ಕೊಹ್ಲಿ ಪಾಕಿಸ್ತಾನ ವಿರುದ್ಧ 60 ರನ್ ಗಳಿಸಿ ನಾಲ್ಕು ಸ್ಥಾನಗಳನ್ನು ಗಳಿಸಿ ಪಟ್ಟಿಯಲ್ಲಿ 29 ನೇ ಸ್ಥಾನದಲ್ಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next