Advertisement

ಜಪಾನುಷ್ಠಾನದಿಂದ ಗ್ರಹಣದ ಅನಿಷ್ಟ ದೂರ

12:35 AM Oct 22, 2022 | Team Udayavani |

ಗ್ರಹಣಕಾಲ ಬಂದಿದೆ ಎಂಬುದಾಗಿ ಯಾವ ದುಷ್ಟ ಯೋಚನೆಗಳನ್ನೂ ಮಾಡದೆ ಧನಾತ್ಮಕ ಚಿಂತನೆಗಳನ್ನು ಮಾಡಿ ದಾಗ ಅನಿಷ್ಟಗಳು ಖಂಡಿತವಾಗಿಯೂ ದೂರೀಕರಿ ಸಲ್ಪಡುತ್ತವೆ. ಅಷ್ಟೇ ಅಲ್ಲದೆ ಸರಿಯಾದ ರೀತಿಯಲ್ಲಿ ದೇವರ ನಾಮವನ್ನು ಜಪಿಸುವುದರಿಂದ ಅಷ್ಟೆ„ ಶ್ವರ್ಯದ ಸಿದ್ಧಿಯನ್ನು ಹೊಂದಲು ಸಾಧ್ಯ.

Advertisement

ಭಗವಾನ್‌ ಬಾದರಾಯಣರು ಆಗ ತಾನೇ ಬೆಳೆದ ಚಿಗುರು ಹುಲ್ಲನ್ನು ಗೋಮಾತೆ ಸ್ವತ್ಛಂದವಾಗಿ ಸೇವಿ ಸುವುದೇ ಆಕೆಗೆ ಉತ್ಸವ ಎಂಬುದಾಗಿ ಮಹಾ ಭಾರತದಲ್ಲಿ ಉಲ್ಲೇಖಿಸುತ್ತಾರೆ. “ಗಾವೋ ನವತೃಣೋತ್ಸವಾಃ’ ಎನ್ನುವುದು ವೇದವ್ಯಾಸರ ಭಣಿತಿ. ಅನುಷ್ಠಾನ ಪರರಿಗೆ ಅದರಂತೆ. ಅತ್ಯಂತ ಸಂತೋಷವನ್ನು ಅನುಭವಿಸಿ ಮಂತ್ರಾನುಷ್ಠಾನವನ್ನು ನಡೆಸುವ ಪರ್ವಕಾಲ ಅಂದರೆ ಸೂರ್ಯ ಅಥವಾ ಚಂದ್ರರ ಗ್ರಹಣ ಕಾಲವಾಗಿರುತ್ತದೆ.
ಮಹಾಭಾರತ ಯುದ್ಧಕ್ಕೂ ಮುನ್ನ ಇದೇ ರೀತಿ 15 ದಿನಗಳ ಅವಧಿಯಲ್ಲಿ ಸೂರ್ಯ-ಚಂದ್ರ ಗ್ರಹಣಗಳು ಸಂಭವಿಸಿದ್ದವು. ಈ ಸಂದರ್ಭದಲ್ಲಿ ಆ ಕಾಲದ ಜ್ಞಾನಿಗಳು ಮುಂದಿನ ದಿನಗಳಲ್ಲಿ ಬಲುದೊಡ್ಡ ಆಪತ್ತು ಕಾದಿದೆ ಎಂದು ಆತಂಕ ವ್ಯಕ್ತಪಡಿಸಿದುದನ್ನು ಕೂಡ ಬಾದರಾಯಣರು ಉಲ್ಲೇಖಿಸಿದ್ದರು.

ಗ್ರಹಣವೆಂದರೆ ಒಂದಿಷ್ಟು ಅನಿಷ್ಟ, ಆಪತ್ತು, ನಾಶ, ಹಾನಿ, ದೋಷಗಳು ಸಾಮಾನ್ಯ. ಹೀಗಾಗಿಯೇ ಗ್ರಹಣವೆಂದರೆ ಸಾಮಾನ್ಯರು ಹೆದರಿ ಮಾನಸಿಕ -ವೈಚಾಲ್ಯತೆಯನ್ನು ಹೊಂದುವುದಕ್ಕೆ ಅವಕಾಶವಿರುತ್ತದೆ. ಅಂದರೆ ನಮ್ಮ ನಕ್ಷತ್ರ-ರಾಶಿಗಳಲ್ಲಿ ಗ್ರಹಣ ಸಂಭವಿಸಿದಾಗ ನಮಗೆ ಭಾವೀ ಕಾಲದಲ್ಲಿ ಆಪತ್ತಿದೆ ಎನ್ನುವುದೇ ಜನಸಾಮಾನ್ಯರಲ್ಲಿ ಇರುವ ಭಾವನೆ. ಗ್ರಹಣ ಕಾಲದ ಸದುಪಯೋಗವನ್ನು ಮಾಡಿಕೊಂಡು ನಮ್ಮ ಸಾಮರ್ಥ್ಯವನ್ನು ಅನುಸರಿಸಿ ಜಪ-ಅನುಷ್ಠಾನ- ನಮಸ್ಕಾರಾದಿಗಳನ್ನು ಶ್ರದ್ಧೆಯಿಂದ ನಡೆಸಿದಾಗ ಆಪತ್ತನ್ನು ಪರಿಹರಿಸಿಕೊಳ್ಳುವ ಒಂದು ಸದವಕಾಶವೂ ಗ್ರಹಣಕಾಲದಲ್ಲಿದೆ. ಬೇರೆ ಸನ್ನಿವೇಶಗಳಲ್ಲಿ ಸತ್ಕರ್ಮಗಳಿಗೆ ಎಷ್ಟು ಫ‌ಲವೋ ಅದರ ಸಹಸ್ರೋತ್ತರ ಫ‌ಲಗಳು ಗ್ರಹಣ ಕಾಲದ ಅನುಷ್ಠಾನಕ್ಕೆ ಲಭ್ಯವಾಗುತ್ತವೆ. ಗ್ರಹಣ ಕಾಲಗತ ವಾದ ಅನಿಷ್ಟವನ್ನು ಸೂಚಿಸುವ ಜೋತಿಷ ಮತ್ತು ಧರ್ಮ ಶಾಸ್ತ್ರಗಳೇ ಪರಿಹಾರೋಪಾಯಗಳನ್ನು ಸೂಚಿಸಿವೆ.

“ವಚನಾತ್‌ ಪ್ರವೃತ್ತಿಃ, ವಚನಾತ್‌ ನಿವೃತ್ತಿಃ’ ಎನ್ನುವುದು ಆರ್ಷವಾಕ್ಯ. “ಪೂಜಾಸ್ತುತಿ ಪ್ರಣತಿಭಿಃ ಮುದಿತಾಃ ಗ್ರಹಾಸ್ತೇ ಕುರ್ವಂತಿ ಅನಿಷ್ಠಗತಯೋಪಿ ಜನಸ್ಯ ಲಕ್ಷ್ಮೀಂ’ ಎನ್ನುವ ಸಮಾಧಾನ ವಾಕ್ಯ ಶಾಸ್ತ್ರ ಪ್ರಣೀತವಾದುದು. ಯಾವುದೇ ವಿಧವಾದ ಗೊಂದಲಕ್ಕೀಡಾಗದೆ ಶ್ರದ್ಧೆಯಿಂದ ಜಪವನ್ನು ನಡೆಸುವುದು ಗ್ರಹಣ ಕಾಲದ ಮಹಾಪ್ರಾಯಶ್ಚಿತ್ತಗಳಲ್ಲೊಂದು. ಯಾರನ್ನೂ ಆಶ್ರಯಿ ಸದೆ ಸಮಯದ ಹೊಂದಾಣಿಕೆ ಮತ್ತು ಆಸಕ್ತಿ ಮೇಳೈಸಿ ದಾಗ ಜಪಾನುಷ್ಠಾನ ನಿವ್ಯìಯವಾದ ವಿಧಿಯಾಗಿದೆ. “ಜಕಾರಃ ಜನ್ಮ ವಿಚ್ಛೇದಃ ಪಕಾರ ಪಾಪ ನಾಶಕಃ’ ಎಂಬುದಾಗಿ ಜ್ಞಾನಿಗಳು ಜಪ ಪ್ರಕ್ರಿ ಯೆಯ ವುÂತ್ಪತ್ತಿಯನ್ನು ವಿವರಿಸಿದ್ದಾರೆ.”ಯಜ್ಞಾನಾಂ ಜಪ ಯಜೊಸ್ಮಿ’ ಎಂಬುದು ಗೀತಾಚಾರ್ಯರ ಮಾತು. ವರ್ಣ, ಆಶ್ರಮ ಗಳ ಎಲ್ಲೆಯನ್ನು ಬದಿಗಿಟ್ಟು ಸ್ತ್ರೀ- ಪುರುಷರೆಂಬ ಭೇದ ವಿಲ್ಲದೆ ಜಪಯಜ್ಞದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು. ಪರಮ ಪವಿತ್ರವಾದ ಪಂಚಾಕ್ಷರ ಮಂತ್ರ, ವಾಸುದೇವ ದ್ವಾದಶ ಅಕ್ಷರ ಮಂತ್ರ, ನಾಮತ್ರಯ ಮಂತ್ರ, ಶ್ರೀರಾಮ ಮಂತ್ರ ಗಳಂಥ ಸರ್ವಾ  ಭೀಷ್ಠಪ್ರದಗಳೆನಿಸಿದ ಜಪಾ ನು ಷ್ಠಾನ ಗಳನ್ನು ಭಗವದರ್ಪಣೆ ಗೊಳಿಸುವುದಕ್ಕೆ ಸುವರ್ಣ ಸಂದರ್ಭ.
ಇದೇ 25-10-2022ರ ಮಂಗಳವಾರದಿಂದ ಆರಂಭಿಸಿ ಅನಂತರದ ಹದಿನೈದನೇ ದಿವಸ 8-11-2022 ಮಂಗಳವಾರದ ಚಂದ್ರಗ್ರಹಣದವರೆಗೆ ಇರುವ ಅಪೂರ್ವ 16 ದಿವಸಗಳು ಯಾವ ಸತ್ಕರ್ಮ ಗಳಿಗೂ ಅಪೂರ್ವ ಫ‌ಲವನ್ನು ಕೊಡುವ ಸತ್ಕಾಲ.

ಶರದೃತುವಿನ ಮಹಾಲಕ್ಷ್ಮೀಯ ಸಾನ್ನಿಧ್ಯ ಭೂಯಿಷ್ಠವಾದ ಅಮಾವಾಸ್ಯೆಯಿಂದ ಮುಂದಿನ ಪೌರ್ಣಮಿಯ ಚಂದ್ರಗ್ರಹಣಾಂತ್ಯದ ವರೆಗೆ ಇರುವ ಈ ಕಾಲವನ್ನು ಸದುಪಯೋಗಪಡಿಸಿಕೊಳ್ಳುವುದು ನಮ್ಮ ವಿವೇಚನೆಗೆ ಬಿಟ್ಟ ವಿಚಾರ. ಅಮಾವಾಸ್ಯೆಯಂದು ಸೂರ್ಯ ಗ್ರಹಣಾರಂಭದ ಪೂರ್ವದಲ್ಲೇ ಬಲಿಪಾಡ್ಯಕ್ಕೆ ನಡೆಸಬೇಕಾದ ಕರ್ಮಗಳನ್ನೆಲ್ಲ ಸಮಾಪ್ತಿಗೊಳಿಸಬೇಕು. ಮರುದಿವಸ ಪಾಡ್ಯ ಲಭ್ಯವಾಗದೇ ಇರುವುದರಿಂದ ಬಲೀಂದ್ರ ಪೂಜೆಯನ್ನು ಗ್ರಹಣ ದಿವಸವೇ ಸಂಪನ್ನಗೊಳಿಸಬೇಕು. ಈ ಕಾಲದಲ್ಲಿ ನಡೆಸುವ ಸರ್ವಾನು ಷ್ಠಾನಗಳು ದೇವಹಿತವಾಗಿರುವಂತೆ ಪ್ರಯತ್ನಿಸಬೇಕು.

Advertisement

ದೇವಹಿತ ಸಿದ್ಧಿಸಿದಾಗ ದೇಶಹಿತ ತಾನಾಗಿಯೇ ಪ್ರಾಪ್ತಿಯಾಗುತ್ತದೆ. ದೇವಹಿತ, ದೇಶಹಿತದ ಪರಿಣಾಮ ವಾಗಿ ಶ್ರದ್ಧಾಭಕ್ತಿಯ ಆಚರಣೆಗಳ ಸತ#ಲವಾಗಿ ನಮ್ಮ ದೇಹಕ್ಕೂ ಹಿತ ತಾನಾಗಿಯೇ ಪ್ರಾಪ್ತಿಯಾಗುತ್ತದೆ. ದೇವಹಿತ, ದೇಶಹಿತ ಇವೆರಡನ್ನೂ ಚಿಂತಿಸಿದವನನ್ನು ದೇವರು ರಕ್ಷಿಸಿಯೇ ರಕ್ಷಿಸುತ್ತಾರೆ.

ಗ್ರಹಣಕಾಲ ಬಂದಿದೆ ಎಂಬುದಾಗಿ ಯಾವ ದುಷ್ಟ ಯೋಚನೆಗಳನ್ನೂ ಮಾಡದೆ ಧನಾತ್ಮಕ ಚಿಂತನೆಗಳನ್ನು ಮಾಡಿ ದಾಗ ಅನಿಷ್ಟಗಳು ಖಂಡಿತವಾಗಿಯೂ ದೂರೀಕರಿ ಸಲ್ಪಡುತ್ತವೆ. ಅಷ್ಟೇ ಅಲ್ಲದೆ ಸರಿಯಾದ ರೀತಿಯಲ್ಲಿ ದೇವರ ನಾಮವನ್ನು ಜಪಿಸುವುದರಿಂದ ಅಷ್ಟೆ„ ಶ್ವರ್ಯದ ಸಿದ್ಧಿಯನ್ನು ಹೊಂದಲು ಸಾಧ್ಯ. ಋಣಾತ್ಮಕವಾದ ಎಲ್ಲ ಯೋಚನೆಗಳನ್ನು ತ್ಯಜಿಸಿ ಯಥಾಶಕ್ತಿ ಭಗವದನುಗ್ರಹಕಾರಕವಾದ ಸತ್ಕರ್ಮಗಳತ್ತ ಆಸಕ್ತರಾಗೋಣ.
ನಮ್ಮೆಲ್ಲರ ಸತ್‌ಚಿಂತನೆಗಳು ಗ್ರಹಣಸೂಚಿತವಾದ ಅನಿಷ್ಟಗಳಿಂದ ದೇಶವನ್ನೂ ಮತ್ತು ನಮ್ಮೆಲ್ಲರನ್ನೂ ಸನ್ಮಾರ್ಗದತ್ತ ಹಾಗೂ ಸುರಕ್ಷತೆಯತ್ತ ಪ್ರೇರೇಪಿ ಸುವಂತೆ ಭಗವಂತನಲ್ಲಿ ಪ್ರಾರ್ಥಿಸೋಣ.

-ಪಂಜ ಭಾಸ್ಕರ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next