Advertisement
ಉಡುಪಿ ಪೆರಂಪಳ್ಳಿಯ ಪಾಸ್‌ಕುದ್ರು ಪ್ರದೇಶಕ್ಕೆ ಭೇಟಿ ನೀಡಿದ ತಂಡವು ಹಾನಿಗೊಳಗಾದ ಪ್ರದೇಶ ವನ್ನು ಪರಿಶೀಲಿಸಿತು. ಅನಂತರ ಬಜೆ ಡ್ಯಾಂಗೆ ಭೇಟಿ ನೀಡಿ ನೆರೆ ಸಂದರ್ಭದಲ್ಲಿ ಪಂಪಿಂಗ್ ಸ್ಟೇಶನ್ ಮುಳು ಗಿದ್ದನ್ನು, ಡ್ಯಾಂ ಎತ್ತರ ಮತ್ತು ನೀರಿನ ಹರಿ ವಿನ ಪ್ರಮಾಣದ ಬಗ್ಗೆಯೂ ಪರಿಶೀಲನೆ ನಡೆಸಿತು. ಬೊಮ್ಮರಬೆಟ್ಟು ವ್ಯಾಪ್ತಿಯ ಮಾಣಾçಗೆ ಭೇಟಿ ನೀಡಿ ನೆರೆಯಿಂದ ಮೂರು ಮನೆಗಳು ಸಂಪೂರ್ಣ ಹಾಳಾಗಿದ್ದ ಪ್ರದೇಶವನ್ನು ವೀಕ್ಷಿಸಿತು.
Related Articles
ಸೆಪ್ಟಂಬರ್‌ನಲ್ಲಿ ಜಿಲ್ಲೆಯ ವಾಡಿಕೆ ಮಳೆ ಪ್ರಮಾಣ 40.5 ಸೆಂ.ಮೀ. ಆದರೆ ಕಳೆದ ಸೆಪ್ಟೆಂಬರ್‌ನಲ್ಲಿ ಸುರಿದ ಮಳೆ 102.2 ಸೆಂ.ಮೀ. ಅಂದರೆ ಶೇ.152ರಷ್ಟು ಅಧಿಕ ಮಳೆ ಸುರಿದಿದೆ. ಅ. 10ರಿಂದ 15ರ ವರೆಗೆ ವಾಡಿಕೆ ಮಳೆ 4 ಸೆಂ.ಮೀ. ಆಗಿದ್ದು, 26.3 ಸೆಂ.ಮೀ. ಮಳೆ ಅಂದರೆ, ಶೇ. 553 ಅಧಿಕ ಮಳೆ ಆಗಿತ್ತು. ಇದರಿಂದ ಜಿಲ್ಲೆಯಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ಒಟ್ಟು 77 ಗ್ರಾಮಗಳಲ್ಲಿ ಹಾನಿಯಾಗಿದ್ದು 827 ಕುಟುಂಬಗಳ 2,874 ಜನರನ್ನು ರಕ್ಷಿಸಲಾಗಿದೆ. 31 ಕಾಳಜಿ ಕೇಂದ್ರಗಳನ್ನು ತೆರೆದಿದ್ದು 1,201 ಮಂದಿಗೆ ಆಶ್ರಯ ನೀಡಲಾಗಿತ್ತು. ಒಟ್ಟು 3,694 ಮನೆಗಳಿಗೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಒಟ್ಟು 323.7 ಕೋ.ರೂ. ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಂಡಕ್ಕೆ ವಿವರಣೆ ನೀಡಿದರು.
Advertisement
ಸ್ಥಳೀಯರ ಪಾತ್ರಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ತಂಡಸಂತ್ರಸ್ತ ಪ್ರದೇಶಗಳಿಗೆ ಭೇಟಿ ನೀಡುವ ಮುನ್ನ ಕೇಂದ್ರದ ತಂಡ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿತು. ಜಿಲ್ಲೆಯಲ್ಲಿ ಪ್ರವಾಹದಿಂದ ಇದು ವರೆಗೆ ಆಗಿರುವ ಹಾನಿಯ ಕುರಿತು ಸಮಗ್ರ ವಿವರಗಳನ್ನು ಪಡೆದ ತಂಡವು, ವಿಕೋಪ ಸಂದರ್ಭದಲ್ಲಿ ಸ್ಥಳೀಯರು ಸಕಾಲಿಕ ಸೂಕ್ತ ನೆರವು ನೀಡಿದ ಕಾರಣ ಜೀವ ಹಾನಿಯಾಗುವುದನ್ನು ತಡೆದಿರುವ ಕುರಿತು ಗಮನಿಸಿತು. ಸಾರ್ವಜನಿಕರ ಸ್ಪಂದನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿತು. ಮಧ್ಯರಾತ್ರಿಯಲ್ಲಿ ಉಂಟಾದ ಪ್ರವಾಹ ಸಂದರ್ಭದಲ್ಲಿ ಸ್ಥಳೀಯರು ತೋರಿದ ಧೈರ್ಯ ಎಲ್ಲ ವಿಕೋಪ ಸಂದರ್ಭಗಳಲ್ಲೂ ಮಾದರಿ ಎಂದು ಅಧಿಕಾರಿಗಳು ಶ್ಲಾ ಸಿದರು.