ಹೊಸದಿಲ್ಲಿ: ಬಾಡಿಗೆ ತಾಯ್ತನದ ಮೂಲಕ ಜನಿಸಿದ ಮಗುವಿನೊಂದಿಗೆ ಬಾಡಿಗೆ ತಾಯಿಯು ಆನುವಂಶಿಕ ಸಂಬಂಧ ಹೊಂದಿರಬೇಕಿಲ್ಲ ಎಂದು ಸುಪ್ರೀಂ ಕೋರ್ಟ್ಗೆ ಬುಧವಾರ ಕೇಂದ್ರ ಸರಕಾರ ತಿಳಿಸಿದೆ.
ನ್ಯಾ| ಜಯ್ ರಸ್ತೋಗಿ ನೇತೃತ್ವದ ನ್ಯಾಯಪೀಠ ಬಾಡಿಗೆ ತಾಯ್ತನ ಕುರಿತ ಅರ್ಜಿಗಳ ವಿಚಾರಣೆ ನಡೆಸಿತು. ಈ ವೇಳೆ, “ಮಹಿಳೆಯು ತನ್ನದೇ ಅಂಡಾಣು ನೀಡುವ ಮೂಲಕ ಬಾಡಿಗೆ ತಾಯಿ ಆಗಲು ಬಾಡಿಗೆ ತಾಯ್ತನ ಕಾಯ್ದೆ ಅವಕಾಶ ನೀಡುವುದಿಲ್ಲ,’ ಎಂದು ಕೇಂದ್ರ ಸ್ಪಷ್ಟಪಡಿಸಿತು.
“ಆದರೆ ಬಾಡಿಗೆ ತಾಯ್ತನದ ಮೂಲಕ ಜನಿಸಲಿರುವ ಮಗುವು, ತಾಯಿ ಆಗಲು ಬಯಸುವ ಮಹಿಳೆ(ವಿಧವೆ ಅಥವಾ ವಿಚ್ಛೇದಿತೆ) ಅಥವಾ ಮಗು ಹೊಂದಬೇಕೆಂದಿರುವ ದಂಪತಿ ಜತೆಗೆ ಆನುವಂಶಿಕ ಸಂಬಂಧ ಹೊಂದಿರಬೇಕು,’ ಎಂದು ಹೇಳಿತು.