Advertisement

ಸುರ್ಜೇವಾಲಾ ಸಂಧಾನ: ಭಿನ್ನಮತ ಮರೆಯಲು ಮುಂದಾದ ಡಿಕೆಶಿ- ಸಿದ್ದರಾಮಯ್ಯ

06:12 PM Jun 02, 2022 | Team Udayavani |

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನಡುವಿನ ತಿಕ್ಕಾಟಕ್ಕೆ ಇತಿಶ್ರೀ ಹಾಡುವುದಕ್ಕೆ ಈಗ ವೇದಿಕೆ ಸಿದ್ದವಾಗಿದ್ದು, ಇಬ್ಬರ ಮಧ್ಯೆ ಮೊದಲ‌ ಹಂತದ ಸಂಧಾನ ಸಭೆ ಗುರುವಾರ ನಡೆದಿದೆ.

Advertisement

ಬೆಂಗಳೂರಿನ‌‌ ಹೊರವಲಯದ ಖಾಸಗಿ ಹೊಟೇಲ್ ನಲ್ಲಿ ನಡೆಯುತ್ತಿರುವ ಚಿಂತನಾಸಭೆಯಲ್ಲೇ ಈ ಸಂಧಾನಸಭೆ ನಡೆದಿದೆ.  ಚುನಾವಣಾ ಹೊಸ್ತಿಲಲ್ಲಿ ಪಕ್ಷದ ಎರಡು ಧ್ರುವಗಳ ಮಧ್ಯೆ ಹೊಂದಾಣಿಕೆ ಸಮಸ್ಯೆ ಸೃಷ್ಟಿಯಾಗಬಾರದೆಂಬ ಕಾರಣಕ್ಕೆ ವರಿಷ್ಠರ ಸೂಚನೆ ಮೇರೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಈ ಸಭೆ ಆಯೋಜನೆಯಾಗಿತ್ತು ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.

ಸುರ್ಜೇವಾಲಾ, ದಿನೇಶ್ ಗುಂಡೂರಾವ್, ಚಲುವರಾಯಸ್ವಾಮಿ ಸಮ್ಮುಖದಲ್ಲಿ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಸಂಧಾನ ಸಭೆ ನಡೆದಿದೆ. ಸುಮಾರು ಒಂದು ಗಂಟೆಗಳ ಕಾಲ ಮಾತುಕತೆ ನಡೆದಿದೆ. ಸಣ್ಣಪುಟ್ಟ ಮನಸ್ತಾಪಗಳನ್ನು ಮರೆತು ಒಂದಾಗುವ ಪ್ರಸ್ತಾಪ ವ್ಯಕ್ತವಾಗಿದೆ. ಸಭೆಯ ಮಧ್ಯೆಯೇ ಇವರಿಬ್ಬರನ್ನು ಸುಮಾರು ಒಂದು ಗಂಟೆ ಕಾಲ ಆಚೆ ಕರೆದೊಯ್ದು ಚರ್ಚೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ರಾಜ್ಯಸಭಾ ಚುನಾವಣೆ ಎರಡನೇ ಅಭ್ಯರ್ಥಿಯನ್ನು ವಾಪಾಸ್ ತೆಗೆದುಕೊಳ್ಳುವ ಬಗ್ಗೆಯೂ ಮಾತುಕತೆಯಾಗಿದ್ದು ಸಿದ್ದರಾಮಯ್ಯ ಸಲಹೆ ಪ್ರಕಾರ ಜೆಡಿಎಸ್ ಜತೆ ಅಂತರ ಕಾಯ್ದುಕೊಳ್ಳುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next