Advertisement
ಕರ್ನಾಟಕ ಟೂರಿಸಂ ವಿಷನ್ ಗ್ರೂಫ್ (ಕೆಟಿವಿಜಿ) ಶಿಫಾರಸಿನ್ವಯ 2019- 20ನೇ ಸಾಲಿನ ಆಯವ್ಯಯ ಪತ್ರದಲ್ಲಿ ಮುಖ್ಯಮಂತ್ರಿಯವರು 10 ಕೋ.ರೂ. ವೆಚ್ಚದ ಈ ಯೋಜನೆಯನ್ನು ಘೋಷಿ ಸಿದ್ದು, ಕಳೆದ ಫೆಬ್ರವರಿ ತಿಂಗಳಿನಲ್ಲಿ ಆಡಳಿತಾತ್ಮಕ ಮಂಜರಾತಿ ನೀಡಿ ಪ್ರಥಮ ಕಂತಿನಲ್ಲಿ 5 ಕೋ.ರೂ.ಅನುದಾನ ಒದಗಿಸಲಾಗಿತ್ತು.
Related Articles
ಇದೀಗ ಕೊರೊನಾ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ನಿರ್ಬಂಧಗಳನ್ನು ಹಂತ ಹಂತವಾಗಿ ಹಿಂದೆಗೆದು ಕೊಳ್ಳಲಾಗುತ್ತಿದ್ದು, ಸರಕಾರ ದಿಂದ ಮಂಜೂರುಗೊಂಡಿರುವ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅನುಮತಿ ನೀಡಲಾಗುತ್ತಿದೆ. ಇದರಂತೆ ಸಸಿಹಿತ್ಲು ಸರ್ಫಿಂಗ್ ಸ್ಕೂಲ್ ಯೋಜ ನೆಗೂ ಶೀಘ್ರ ಅನುಮತಿ ಲಭಿಸಿ ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳುವ ನಿರೀಕ್ಷೆ ಇದೆ. ಸುಂದರ ಬೀಚ್‌ಗಳಲ್ಲೊಂದಾಗಿರುವ ಸಸಿಹಿತ್ಲು ಈಗಾಗಲೇ ಉತ್ತಮ ಸರ್ಫಿಂಗ್ ತಾಣವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ವಿಶ್ವ ಸರ್ಫ್ ಲೀಗ್‌ನ ಸ್ಟೀಪನ್ ರಾಬರ್ಟ್‌ಸ್ ಅವರು ಸಸಿಹಿತ್ಲು ಬೀಚ್ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದರು. ಸಸಿಹಿತ್ಲು ಕಡಲ ತೀರದಲ್ಲಿ 2016ರಲ್ಲಿ ಪ್ರಥಮ ಬಾರಿಗೆ ಜಿಲ್ಲಾಡಳಿತ, ಕೆನರಾ ವಾಟರ್ ಸ್ಫೋರ್ಟ್ಸ್ ಪ್ರಮೋಶನ್ ಕೌನ್ಸಿಲ್ ಹಾಗೂ ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾದ ಆಶ್ರಯ ದಲ್ಲಿ ರಾಷ್ಟ್ರೀಯ ಸರ್ಫಿಂಗ್ ಉತ್ಸವ ನಡೆದು ರಾಷ್ಟ್ರೀಯವಾಗಿ ಮಾತ್ರವಲ್ಲದೆ ಅಂತಾರಾಷ್ಟ್ರೀಯವಾಗಿ ಗಮನಸೆಳೆದಿತ್ತು. 2017ರಲ್ಲಿ ಎರಡು ದಿನಗಳ ಕಾಲ ಆಯೋಜನೆಗೊಂಡಿದ್ದ ರಾಷ್ಟ್ರೀಯ ಸರ್ಫಿಂಗ್ ಉತ್ಸವದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧಾ ಳುಗಳು ಸಹಿತ 120ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.
ರಾಷ್ಟ್ರೀಯ ಸರ್ಫಿಂಗ್ ಉತ್ಸವ ಆರಂಭಗೊಂಡಾಗ ಇದು ಮಂಗಳೂರಿ ನಲ್ಲಿ ಸಾಗರ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡುವ ಭರವಸೆ ಮೂಡಿಸಿತ್ತು.
Advertisement
ಪ್ರವಾಸಿತಾಣವಾಗಿ ಅಭಿವೃದ್ಧಿಸಸಿಹಿತ್ಲು ಕಡಲತೀರವನ್ನು ಸರ್ಫಿಂಗ್ ಕೇಂದ್ರವಾಗಿ ರೂಪಿಸುವುದು ಸರ್ಫಿಂಗ್ ಸ್ಕೂಲ್ ಯೋಜನೆಯ ಮೂಲ ಉದ್ದೇಶ. ರಾಷ್ಟ್ರೀಯ ಮಟ್ಟದ ಸರ್ಫಿಂಗ್ ತಾಣವಾಗಿ ರೂಪಿಸಿ ಪ್ರವಾಸಿಗರನ್ನು ಆಕರ್ಷಿಸುವುದು, ಸರ್ಫಿಂಗ್ ತರಬೇತಿ, ಉತ್ಸವ ಆಯೋಜನೆಗೆ ಪೂರಕ ವ್ಯವಸ್ಥೆ, ಮೂಲಸೌಕರ್ಯಗಳನ್ನು ಕಲ್ಪಿಸಿ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವುದು ಮುಂತಾದ ಅಂಶಗಳನ್ನು ಒಳಗೊಂಡಿವೆ. ಮೂಲ ಸೌಲಭ್ಯ ಸ್ಥಾಪನೆ
ಸಸಿಹಿತ್ಲುವಿನಲ್ಲಿ ಸರ್ಫಿಂಗ್ ಸ್ಕೂಲ್, ಪೂರಕ ಮೂಲ ಸೌಲಭ್ಯಗಳ ಸ್ಥಾಪನೆ ಪ್ರವಾ ಸೋದ್ಯಮ ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆ ಯಾಗಿದ್ದು, ಇದಕ್ಕೆ 10 ಕೋ.ರೂ. ಮೀಸಲಿರಿಸಲಾಗಿದೆ. ಯೋಜನೆಯು ಇಲಾಖೆಯ ಉಸ್ತುವಾರಿಯಲ್ಲಿ ಲೋಕೋಪಯೋಗಿ ಇಲಾಖೆಯು ಅನುಷ್ಠಾನಗೊಳಿಸಲಿದ್ದು, ಕಾಮಗಾರಿಗಳ ಕುರಿತಂತೆ ಆವ ಶ್ಯಕ ಪ್ರಕ್ರಿಯೆಗಳನ್ನು ನಡೆಸಲಿದೆ.
- ಸೋಮಶೇಖರ್ ಬಿ., ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರು – ಕೇಶವ ಕುಂದರ್