ಹಳೆಯಂಗಡಿ: ಇಲ್ಲಿನ ಸಸಿಹಿತ್ಲು ಕಡಲಿನಲ್ಲಿ ಗುರುವಾರ ಆರಂಭಗೊಂಡ ಇಂಡಿಯನ್ ಓಪನ್ ಸರ್ಫಿಂಗ್‌ನ ಮೊದಲ ದಿನ ಕರ್ನಾಟಕ ಮತ್ತು ತಮಿಳುನಾಡು ಸರ್ಫರ್‌ಗಳು ಪ್ರಾಬಲ್ಯ ಸಾಧಿಸಿದ್ದಾರೆ.
ಗ್ರೋಮ್ಸ್ ವಂಡರ್ ಬಾಯ್ ಎಂದೇ ಗುರುತಿಸಿಕೊಂಡಿರುವ ಕಿಶೋರ್ ಕುಮಾರ್ ಮೊದಲ ದಿನ ಸವಾಲಿನ ಪರಿಸ್ಥಿತಿಯನ್ನು ಎದುರಿಸಿ ಮಿಂಚಿದ್ದಾರೆ.
ಗ್ರೋಮ್ಸ್ (ಅಂಡರ್-16 ಒಳಗಿನ) ವಿಭಾಗದಲ್ಲಿ ಸ್ಪರ್ಧಿಸಿದ ಕಿಶೋರ್ ಕುಮಾರ್ ಮಳೆ ಮತ್ತು ಗಾಳಿಯ ಒತ್ತಡದ ನಡುವೆಯೂ ಸ್ಪರ್ಧಿಸಿ ಗರಿಷ್ಠ 12.67 ಅಂಕ ಗಳಿಸಲು ಯಶಸ್ವಿಯಾದರು. “ಇದು ನನ್ನ ಅತ್ಯುತ್ತಮ ಪ್ರದರ್ಶನವಾಗಿರಲಿಲ್ಲ, ಏಕೆಂದರೆ ಚೆನ್ನೈಗಿಂತ ಇಲ್ಲಿನ ಅಲೆಗಳ ವೇಗ ಸ್ವಲ್ಪಮಟ್ಟಿಗೆ ಭಿನ್ನವಾಗಿತ್ತುಎಂದು ಕಿಶೋರ್ ಹೇಳಿದರು.
ಕಿಶೋರ್ ಕುಮಾರ್ (12.67) ಅವರಲ್ಲದೇ ಪುರುಷರ ಮುಕ್ತ ವಿಭಾಗ ದಲ್ಲಿ ತಯಿನ್ ಅರುಣ್ (10.83) ದಿನದ ಅತಿ ಹೆಚ್ಚು ಸ್ಕೋರರ್ ಆಗಿ ಹೊರಹೊಮ್ಮಿದರಲ್ಲದೇ ಸೆಮಿಫೈನಲ್ ತಲುಪಿದರು. ಮಳೆಯ ಕಾರಣದಿಂದ ಮಹಿಳೆಯರ ಮುಕ್ತ ವಿಭಾಗದ ಸೆಮಿಫೈನಲ್ ಅನ್ನು ಶುಕ್ರವಾರಕ್ಕೆ ಮರು ನಿಗದಿಪಡಿಸಲಾಗಿದೆ. ತೀರ್ಪು ಗಾರರಿಂದ ಹೆಚ್ಚಿನ ಅಂಕಗಳನ್ನು ಪಡೆದ ಇತರ ಸಫìರ್‌ಗಳೆಂದರೆ ದಿನೇಶ್ ಸೆಲ್ವಮಣಿ (9.53), ಶೇಖರ್ ಪಚೈ (9.0) ಹರೀಶ್ ಪಿ. (8.63), ಸೆಲ್ವಂ ಎಂ. (8.53).
Related Articles
ಮೊದಲ ದಿನದ ಸುತ್ತಿನಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸರ್ಫರ್‌ಗಳು ಪುರುಷರ ಮುಕ್ತ ಮತ್ತು ಗ್ರೋಮ್ಸ್ ವಿಭಾಗಗಳೆರಡರಲ್ಲೂ ಪ್ರಾಬಲ್ಯ ಸಾಧಿ ಸಿದರು. ಪುರುಷರ ವಿಭಾಗದಲ್ಲಿ ರೌಂಡ್ 1 ರಿಂದ 12 ಸಫìರ್‌ಗಳು ಎರಡನೇ ಸುತ್ತಿಗೆ ಸಾಗಿದರು. ಅವರೆಲ್ಲ ಕಳೆದ ವರ್ಷ ತಮ್ಮ ಶ್ರೇಯಾಂಕದ ಆಧಾರದಲ್ಲಿ ಈಗಾಗಲೇ ಅರ್ಹತೆ ಪಡೆದಿರುವ 16 ಸರ್ಫರ್‌ಗಳೊಡನೆ ಸೆಣಸಲಿದ್ದಾರೆ.
ಗ್ರೋಮ್ಸ್ (16ರ ಹರೆಯದ ಒಳಗಿನ) ವಿಭಾಗವು ತಮಿಳುನಾಡು ಮತ್ತು ಕರ್ನಾಟಕದ ಸಫìರ್‌ಗಳಿಂದ ತೀವ್ರ ಪೈಪೋಟಿಯನ್ನು ಕಂಡಿತು, ಪ್ರತಿ ರಾಜ್ಯದಿಂದ 4 ಸರ್ಫರ್‌ಗಳು ಸೆಮಿಫೈನಲ್‌ಗೇರಿದ್ದಾರೆ.
ಗುರುವಾರ ಬೆಳಗ್ಗೆ 7ಕ್ಕೆ ಚೆಂಡೆಯ ನಿನಾದದ ಮೂಲಕ ಓಪನ್ ಸರ್ಫಿಂಗ್‌ಗೆ ಚಾಲನೆ ನೀಡಲಾಯಿತು. ಉದ್ಘಾಟನೆ ಮತ್ತು ಸಮುದ್ರ ಪೂಜೆಯ ಅನಂತರ ಸರ್ಫಿಂಗ್‌ಗೆ ಸ್ಥಿತಿ ಪೂರಕವಾಗಿತ್ತು. ಆದರೆ ನಿರೀಕ್ಷೆ ಗಿಂತ ಸ್ವಲ್ಪ ಮುಂಚಿತವಾಗಿ ಗಾಳಿ, ತುಂತುರು ಮಳೆ ಕಂಡ ಕಾರಣ ಬೇಗನೆ ಮುಕ್ತಾಯ ಕಂಡಿತು.
ಸ್ಪರ್ಧಾಳುಗಳು, ಆಯೋಜಕರು, ಸ್ಪರ್ಧಾಳು ಗಳ ನಿಕಟವರ್ತಿಗಳು, ಸ್ಥಳೀಯರು ಸ್ಪರ್ಧೆಯನ್ನು ವೀಕ್ಷಿಸಿದರು. ಹೊರರಾಜ್ಯ ದಿಂದ ಬಂದಿರುವ ಸಫìರ್‌ಗಳು ಬೀಚ್‌ನ ಸುತ್ತಮುತ್ತ ಸಂಭ್ರಮಿಸಿದರು.
ಇದು ನನ್ನ ಅತ್ಯುತ್ತಮ ಪ್ರದರ್ಶನವಾಗಿಲ್ಲ. ಯಾಕೆಂದರೆ ನಾನು ಚೆನ್ನೈಗಿಂತ ಇಲ್ಲಿ ಅಲೆಗಳ ಏರಿಳಿತ ಭಿನ್ನವಾಗಿತ್ತು. ಇಂತಹ ಪರಿಸ್ಥಿತಿ ತುಂಬಾ ಸವಾಲಿನಿಂದ ಕೂಡಿರುತ್ತದೆ. ಇದಕ್ಕಿಂತ ಉತ್ತಮ ಅಂಕ ಗಳಿಸುವ ವಿಶ್ವಾಸವಿದೆ. ಶುಕ್ರವಾ ರದ ಪರಿಸ್ಥಿತಿ ನನಗೆ ಅನುಕೂಲವಾಗಿರ ಬಹುದು ಎಂದು ಭಾವಿಸಿದ್ದೇನೆ.
– ಕಿಶೋರ್ ಕುಮಾರ್
ಮೂಲ್ಕಿಯ ಸೋದರರಿಬ್ಬರ ಸ್ಪರ್ಧೆ
ಮೂಲ್ಕಿಯ ಸರ್ಫಿಂಗ್ ಸ್ವಾಮಿ ಪ್ರತಿಷ್ಠಾನದ ನೆರವಿನಲ್ಲಿ ಮಂತ್ರ ಸರ್ಫಿಂಗ್ ಕ್ಲಬ್‌ನಲ್ಲಿ ತರಬೇತಿ ಪಡೆಯುತ್ತಿರುವ ಸೋದರರಿಬ್ಬರು ಈ ಬಾರಿಯ ಸರ್ಫಿಂಗ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದಾರೆ. ಮೂಲ್ಕಿಯ ಮೆಡಲಿನ್ ಶಾಲೆ 10ನೇ ತರಗತಿಯ ವಿದ್ಯಾರ್ಥಿ ರಾಜು ಹಾಗೂ 8ನೇ ತರಗತಿ ವಿದ್ಯಾರ್ಥಿ ಪ್ರದೀಪ್ ಇಬ್ಬರೂ ಅಂಡರ್ 16 ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.