ದಾಳಿಯಿಂದ ತಪ್ಪಿಸಿಕೊಳ್ಳಲು ಹೆಣ್ಣು ಕಡವೆಯೊಂದು ಸಮುದ್ರಕ್ಕೆ ಜಿಗಿದು ಕೆಲ ಸಮಯ ಕಡಲಲ್ಲಿ ಈಜಿತು. ಈ ವೇಳೆ ಮೀನುಗಾರರು ದೋಣಿಯಲ್ಲಿ ತೆರಳಿ ಕಡವೆ ಸಮುದ್ರದ ಆಳಕ್ಕೆ ಹೋಗದಂತೆ ತಡೆದು ರಕ್ಷಿಸಿ ದಡಕ್ಕೆ ತಂದರು.
Advertisement
ಫೋಟೋಗ್ರಾಫರ್ ಪಾಂಡುರಂಗ ಹರಿಕಂತ್ರ ಕಡವೆ ರಕ್ಷಣೆಗಾಗಿ ಸಮುದ್ರಕ್ಕೆ ಜಿಗಿದಾಗ ಕಡವೆ ಕಾಲುತಾಗಿ ಅವರ ತಲೆಗೆ ಗಾಯವಾಗಿದ್ದು, ತಕ್ಷಣ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಕಡವೆಗೆ ಪಶು ವೈದ್ಯಾಧಿಕಾರಿಗಳಿಂದ ಚಿಕಿತ್ಸೆ ಕೊಡಿಸಿದರು. ಕಾರವಾರ ಡಿಎಫ್‌ಒ ಕಚೇರಿ ಬಳಿಯ ನರ್ಸರಿಗೆ ಕಡವೆಯನ್ನು ಕೊಂಡೊಯ್ದು ವಿಶ್ರಾಂತಿಗೆ ಬಿಡಲಾಯಿತು. ನಂತರ ಅಧಿಕಾರಿಗಳ ಸಮ್ಮುಖದಲ್ಲಿ ಕಾರವಾರ-ಗೋವಾ ನಡುವಿನ ಮೈಂಗಿಣಿ ಅರಣ್ಯ ಪ್ರದೇಶದಲ್ಲಿ ಹಳ್ಳದ ನೀರಿನ ಸೌಲಭ್ಯವಿದ್ದು, ಅಲ್ಲಿ ಕಡವೆ ಬಿಡಲು ನಿರ್ಧರಿಸಲಾಯಿತು.