Advertisement

ರೈನಾ, ಅಮಿತ್‌ ಮಿಶ್ರಾ ಫಿಟ್‌ನೆಸ್‌ ಟೆಸ್ಟ್‌ನಲ್ಲಿ ಫೇಲ್‌

06:35 AM Oct 03, 2017 | Team Udayavani |

ಹೊಸದಿಲ್ಲಿ: ಟೀಮ್‌ ಇಂಡಿಯಾದಿಂದ ಬೇರ್ಪಟ್ಟಿರುವ ಎಡಗೈ ಬ್ಯಾಟ್ಸ್‌ಮನ್‌ ಸುರೇಶ್‌ ರೈನಾ ಹಾಗೂ ಲೆಗ್‌ಸ್ಪಿನ್ನರ್‌ ಅಮಿತ್‌ ಮಿಶ್ರಾ ನ್ಯೂಜಿಲ್ಯಾಂಡ್‌ “ಎ’ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗುವಲ್ಲೂ ವಿಫ‌ಲರಾಗಿದ್ದಾರೆ. ಫಿಟ್‌ನೆಸ್‌ ಪರೀಕ್ಷೆಯಲ್ಲಿ ಇವರಿಬ್ಬರೂ ಅನುತ್ತೀರ್ಣರಾದುದೇ ಇದಕ್ಕೆ ಕಾರಣ. 

Advertisement

ತಮಿಳುನಾಡಿನ ಆಲ್‌ರೌಂಡರ್‌ ವಾಷಿಂಗ್ಟನ್‌ ಸುಂದರ್‌ ಕೂಡ ಫಿಟ್‌ನೆಸ್‌ ಸಮಸ್ಯೆಯಿಂದಲೇ “ಎ’ ತಂಡದಲ್ಲಿ ಸ್ಥಾನ ಪಡೆಯದೇ ಹೋದರು. 

ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯ ತರಬೇತುದಾರರ ಸಮ್ಮುಖದಲ್ಲಿ ಇವರ ಫಿಟ್‌ನೆಸ್‌ ಟೆಸ್ಟ್‌ ನಡೆದಿತ್ತು. ಆದರೆ ಯಾರೂ ತೇರ್ಗಡೆಯಾಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next