Advertisement
ಡಿ. 22ರಂದು ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ನಡೆದ ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಘಟಕದ 10ನೇ ವಾರ್ಷಿಕ ಮಹಾಸಭೆಯಲ್ಲಿ ಅವರನ್ನು ಸರ್ವಾನುಮತದಿಂದ ಅವಿರೋಧವಾಗಿ ಮರು ನೇಮಿಸಲಾಯಿತು. ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸುರೇಂದ್ರ ಕುಮಾರ್ ಹೆಗ್ಡೆ ಅವರು, ಇಲ್ಲಿ ನೆಲೆಸಿರುವ ಕನ್ನಡಿಗ ಕಲಾವಿದರು ಯಾವುದೇ ಸಂಘ-ಸಂಸ್ಥೆಗಳಲ್ಲಿ ಕಲಾಸೇವೆ ಮಾಡುತ್ತಿದ್ದರೂ ಕೂಡಾ, ಪರಿಷತ್‌ನಲ್ಲಿ ಎಲ್ಲರೂ ಒಂದಾಗಿ ಈ ಸಂಸ್ಥೆಯನ್ನು ಬಲಗೊಳಿಸಲು ಸಹಕಾರ ನೀಡಬೇಕು. ಇದು ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಹುಟ್ಟಿಕೊಂಡ ಸಂಸ್ಥೆಯಾಗಿದ್ದು, ಕಲಾವಿದರಿಗಾಗಿ ಅನೇಕ ಯೋಚನೆ-ಯೋಜನೆಗಳು ನಮ್ಮಲ್ಲಿದ್ದು ಎಲ್ಲರ ಸಹಕಾರದ ನಿರೀಕ್ಷೆಯಲ್ಲಿ ನಾವಿದ್ದೇವೆ. ಎಲ್ಲರೂ ಒಗ್ಗಟ್ಟಿನಿಂದ ಇದರಲ್ಲಿ ತೊಡಗಿಸಿಕೊಂಡರೆ, ಯೋಜನೆಗಳು ಸಾಕಾರಗೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ನುಡಿದು, ಈ ಸಂಸ್ಥೆಗೆ ಒಂದು ಸ್ವಂತ ಕಚೇರಿಯ ಅಗತ್ಯವಿದ್ದು, ಆ ಬಗ್ಗೆ ನಾವೆಲ್ಲರೂ ಶ್ರಮಿಸಬೇಕಾದ ಅಗತ್ಯವಿದೆ ಎಂದು ನುಡಿದರು.
Related Articles
Advertisement
ಸಭಿಕರ ಪರವಾಗಿ ಸ್ಥಾಪಕಾಧ್ಯಕ್ಷ ಎಸ್. ಟಿ. ವಿಜಯ ಕುಮಾರ್, ಜಿ. ಎಸ್. ನಾೖಕ್, ನಿತ್ಯಾನಂದ ಡಿ. ಕೋಟ್ಯಾನ್, ವಾಸುದೇವ ಮಾರ್ನಾಡ್, ದಾಮೋದರ ಶೆಟ್ಟಿ ಇರುವೈಲು, ಅರವಿಂದ ಕೊಜಕ್ಕೊಳಿ, ಬಾಬಾ ಪ್ರಸಾದ್ ಅರಸ, ದಯಾ ಸಾಗರ್ ಚೌಟ, ಕೆ. ಕೆ. ಶೆಟ್ಟಿ ಮೊದಲಾದವರು ಸಂದಭೋìಚಿತವಾಗಿ ಮಾತನಾಡಿ ಸಲಹೆ-ಸೂಚನೆಗಳನ್ನು ನೀಡಿದರು.
ಜತೆ ಕೋಶಾಧಿಕಾರಿ ನವೀನ್ ಶೆಟ್ಟಿ ಇನ್ನಬಾಳಿಕೆ ವಂದಿಸಿದರು. ಮಹಾಸಭೆಯ ಅನಂತರ ಸುರೇಂದ್ರ ಕುಮಾರ್ ಹೆಗ್ಡೆ, ಅರವಿಂದ ಶೆಟ್ಟಿ ಕೊಜಕ್ಕೊಳಿ, ಜೂಲಿಯೆಟ್ ಪೆರೇರಾ ಅವರ ಪ್ರಾಯೋಜಕತ್ವದಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಸಂಸ್ಥೆಯ ಸದಸ್ಯ ಬಾಂಧವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.