Advertisement

ಸುರತ್ಕಲ್‌: ಲಾರಿ ಢಿಕ್ಕಿ ಹೊಡೆದು ಔಷಧ ಮಾರಾಟ ಏಜೆಂಟ್ ಸಾವು

08:30 PM Dec 03, 2022 | Team Udayavani |

ಸುರತ್ಕಲ್‌: ಪಣಂಬೂರಿನ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಔಷಧ ಮಾರಾಟ ಏಜೆಂಟ್ ಆಗಿದ್ದ ಅಂಬರೀಷ್‌ (61) ಲಾರಿ ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

Advertisement

ಗಂಭೀರ ಗಾಯಗೊಂಡ ಅವರನ್ನು ತತ್‌ಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟರು. ಮೃತರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.

35 ವರ್ಷಗಳಿಂದ ಔಷಧ ಮಾರಾಟಗಾರರಾಗಿದ್ದ ಅವರು ಜನರಿಗೆ ಔಷಧಗಳ ಬಗ್ಗೆ ಮಾಹಿತಿ ಮತ್ತು ಆಸ್ಪತ್ರೆಯ ಚಿಕಿತ್ಸೆಗಳ ಬಗ್ಗೆ ಮಾರ್ಗದರ್ಶನ ನೀಡುತ್ತಿದ್ದರು. ಕೊರೊನಾ ತೀವ್ರವಾಗಿದ್ದ ಸಮಯದಲ್ಲಿ ಅಶಕ್ತರಿಗೆ ,ಅಗತ್ಯವಿದ್ದವರಿಗೆ ಔಷಧಗಳನ್ನು ಮನೆಗೆ ತಲುಪಿಸಿದ್ದರು. ಅವರು ಹೊಸಬೆಟ್ಟು ಪಾಂಡುರಂಗ ಭಜನಾ ಮಂಡಳಿಯ ಸಕ್ರಿಯ ಸದಸ್ಯರಾಗಿದ್ದರು.

ಇದನ್ನೂ ಓದಿ: ಟ್ರಾವೆಲ್‌ ಟೆಕ್‌ ಕಂಪನಿ ಓಯೋದಲ್ಲಿ ಶೇ.10ರಷ್ಟು ಉದ್ಯೋಗ ಕಡಿತ?

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next