Advertisement
ಲೋಕೇಶ್ ಕುಲಾಲ್ ಅವರು ತನ್ನ ಆಮ್ನಿ ಕಾರಿನಲ್ಲಿ ಕೆಲಸದ ನಿಮಿತ್ತ ಹೊನ್ನಕಟ್ಟೆ ಹೆದ್ದಾರಿ ಬಳಿ ಇರುವ ಅಂಗಡಿಗೆ ಬಂದಿದ್ದರು. ಇನ್ನೇನು ಹೆದ್ದಾರಿಯಿಂದ ಪಕ್ಕಕ್ಕೆ ತಿರುವು ತೆಗೆದುಕೊಳ್ಳಬೇಕು ಎನ್ನುವಷ್ಟರಲ್ಲಿ ಮಂಗಳೂರು ಕಡೆಯಿಂದ ಬರುತ್ತಿದ್ದ ಲಾರಿ ಹಠಾತ್ತನೆ ಕಂಬಕ್ಕೆ ಢಿಕ್ಕಿಯಾಗಿ ಕಾರಿನ ಮೇಲೆ ಮಗುಚಿ ಬಿದ್ದಿತ್ತು.
ಲಾರಿ ಚಾಲಕ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಲಾರಿಯು ನಿಯಂತ್ರಣ ತಪ್ಪಿದ್ದು, ಮೊದಲಿಗೆ ಪಕ್ಕದಲ್ಲಿದ್ದ ಸಿಗ್ನಲ್ ಲೈಟ್ ಕಂಬಕ್ಕೆ ಢಿಕ್ಕಿ ಹೊಡೆದು ಅನಂತರ ಆಮ್ನಿಯ ಮೇಲೆ ಮಗುಚಿ ಬಿದ್ದಿದೆ. ಆಮ್ನಿಯ ಪಕ್ಕದಲ್ಲೇ ಸ್ಕೂಟರ್ ಕೂಡ ಇತ್ತು. ಸ್ಕೂಟರ್‌ನಲ್ಲಿದ್ದವರು ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕ್ರೇನ್‌ಗಳ ಮೂಲಕ ಲಾರಿಯನ್ನು ಮೇಲೆತ್ತಿ ಅದರಡಿಯಲ್ಲಿ ಅಪ್ಪಚ್ಚಿಯಾಗಿದ್ದ ಆಮ್ನಿ ಕಾರಿನಿಂದ ಗಂಭೀರ ಗಾಯಗೊಂಡಿದ್ದ ಲೋಕೇಶ್ ಅವರನ್ನು ಹೊರತೆಗೆದು ಮಂಗಳೂ ರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಯಿತು.
ಸುಮಾರು ಅರ್ಧ ಗಂಟೆ ಕಾರ್ಯಾಚರಣೆ ನಡೆಸಿ ಗಾಯಾಳುವನ್ನು ಹೊರತೆಗೆಯ ಲಾಗಿತ್ತು. ಲಾರಿ ಚಾಲಕ ಕೂಡ ಗಾಯಗೊಂಡಿದ್ದಾರೆ. ಮಂಗಳೂರು ಉತ್ತರ ಸಂಚಾರಿ ಠಾಣೆಯ ನಿರೀಕ್ಷಕ ಸುರೇಶ್ ಕುಮಾರ್, ಎಸ್ಸೆ„ ಯೋಗೀಶ್ ಕುಮಾರ್ ಹಾಗೂ ಸಿಬಂದಿ ಸ್ಥಳಕ್ಕೆ ಬಂದಿದ್ದು, ಹೆದ್ದಾರಿಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸ್ಥಳೀಯರು ಸಹಕರಿಸಿದರು. ಪೊಲೀ ಸರು ಲಾರಿ ಚಾಲಕನ ಮೇಲೆ ಕೇಸು ದಾಖಲಿಸಿಕೊಂಡಿದ್ದಾರೆ.
Related Articles
Advertisement
ಇಬ್ಬರು ಪುಟ್ಟ ಮಕ್ಕಳುಯುವ ಗುತ್ತಿಗೆದಾರರಾಗಿದ್ದ ಲೋಕೇಶ್ ಕುಲಾಲ್ ಅವರು ಗೋಕುಲನಗರ ಬಡಾವಣೆ ಹಾಗೂ ಸ್ನೇಹಿತ ವಲಯದಲ್ಲಿ ಉತ್ತಮ ವ್ಯಕ್ತಿತ್ವ ಹೊಂದಿದ ವರಾಗಿದ್ದರು. ಸಾಮಾಜಿಕ, ಕ್ರೀಡಾ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದರು. ಹಲವಾರು ಬಾಡಿ ಬಿಲ್ಡಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿದ್ದರು. ಹಳೆಯಂಗಡಿಯ ಪವಿತ್ರಾ ಅವರನ್ನು ವಿವಾಹವಾಗಿರುವ ಅವರಿಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ.