Advertisement
ನಗರದ ಸುತ್ತಮುತ್ತ ಆಲಿವ್ ರಿಡ್ಲೆ ಅಮೆಗಳು ಬಂದು ಮೊಟ್ಟೆ ಇರಿಸಿ ಹೋಗಿರುವುದನ್ನು ಅರಣ್ಯ ಇಲಾಖೆ ಸಿಬಂದಿ ಪತ್ತೆ ಮಾಡಿದ್ದರು. ಮುನ್ನೆಚ್ಚರಿಕೆ ವಹಿಸಿ ಕಡಲ ತೀರದಲ್ಲಿ ಮೂರು ಪ್ಯಾಟ್ರೊಲ್ ತಂಡಗಳನ್ನು ರಚಿಸಿದ್ದರು. ಕಣ್ಗಾವಲು ತಂಡಗಳು ರಾತ್ರಿ ಹೆಚ್ಚಾಗಿ ಕಡಲ ತೀರಗಳಿಗೆ ಭೇಟಿ ನೀಡಿ ಕಾವಲು ನಡೆಸುತ್ತಿದ್ದರು. ಮಾನವ ಚಟುವಟಿಕೆ ಮೇಲೆ ನಿಯಂತ್ರಣ ಇದ್ದ ಕೆಲವು ಕಡೆಗಳಲ್ಲಿ ಮೊಟ್ಟೆ ಇರಿಸಿರುವುದು ಪತ್ತೆಯಾಗಿತ್ತು. ಅವುಗಳಲ್ಲಿ ಉಬ್ಬರದಲೆಗಳು ಬಡಿಯುವ ಕೆಲವು ಕಡೆಗಳಲ್ಲಿ ಅವುಗಳನ್ನು ಅಲ್ಲಿಂದ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿತ್ತು.
ಸಸಿಹಿತ್ಲುವಿನ 12 ಕಡೆ, ಬೆಂಗರೆಯ 2 ಕಡೆ ಮತ್ತು ಇಡ್ಯಾದ 1 ಕಡೆಗಳಲ್ಲಿ ಮೊಟ್ಟೆ ಇಟ್ಟದ್ದನ್ನು ಗುರುತಿಸಲಾಗಿದೆ. ಒಂದೊಂದು ಕಡೆ ಸುಮಾರು 100 ಮೊಟ್ಟೆ ಇಡುತ್ತದೆ. ಒಂದು ಬಾರಿ ಮೊಟ್ಟ ಇಟ್ಟ ಬಳಿಕ 53 ದಿನಗಳಲ್ಲಿ ಮೊಟ್ಟೆ ಒಡೆದು ಮರು ಹೊರ ಬರುತ್ತದೆ. ಅದರಂತೆ ಮೊದಲನೆಯದಾಗಿ ಸಸಹಿತ್ಲು ಕಡಲ ತೀರದಲ್ಲಿ ಈ ಪ್ರಕ್ರಿಯೆ ಬುಧವಾರ ಸಾಗಿತ್ತು ಎನ್ನುತ್ತಾರೆ ಮಂಗಳೂರಿನ ಡಿಸಿಎಫ್ ಆ್ಯಂಟನಿ ಮರಿಯಪ್ಪ. ದ.ಕ.ದಲ್ಲಿ ಇದೇ ಮೊದಲು
ವಿಶೇಷ ವರದಿ ಮಾಡಿದ್ದ ಉದಯವಾಣಿ
ಆಲಿವ್ ರಿಡ್ಲೆ ಕಡಲಾಮೆ ಕುಂದಾಪುರ- ಉಡುಪಿ ಭಾಗದ ಕಡಲ ತೀರದಲ್ಲಿ ಹಲವು ವರ್ಷಗಳಿಂದ ಮೊಟ್ಟೆ ಇರಿಸುತ್ತಿದ್ದರೂ ದಕ್ಷಿಣ ಕನ್ನಡದ ಬೀಚ್‌ಗಳಲ್ಲಿ ಮೊಟ್ಟೆ ಇರಿಸಿದ್ದು ಇದೇ ಮೊದಲ ಬಾರಿ. ಸಸಿಹಿತ್ಲು ಭಾಗದಲ್ಲಿ ಕಡಲಾಮೆ ಇದೇ ಮೊದಲ ಬಾರಿಗೆ ಮೊಟ್ಟೆ ಇರಿಸಿರುವ ಬಗ್ಗೆ “ಉದಯವಾಣಿ’ ವಿಶೇಷ ವರದಿ ಪ್ರಕಟಿಸುವ ಮೂಲಕ ಗಮನ ಸೆಳೆದು ಜಾಗೃತಿ ಮೂಡಿಸಿತ್ತು. ಈಗ ಈ ಮೊಟ್ಟೆಗಳು ಒಡೆದು ಮರಿಗಳಾಗಿವೆ.
Related Articles
Advertisement