Advertisement

Surathkal: ಬಿದ್ದ ಹೊಂಡದಲ್ಲೇ ವಾಹನ ನಿಲ್ಲಿಸಿ ಪ್ರತಿಭಟಿಸಿದ ಗಾಯಾಳು!

10:47 AM Jun 26, 2024 | Team Udayavani |

ಸುರತ್ಕಲ್: ಅರೆಬರೆ ಕಾಂಕ್ರಿಟ್ ಹಾಕಿದ ಸುರತ್ಕಲ್ ಹೆದ್ದಾರಿ ಜಂಕ್ಷನ್ ನಲ್ಲಿ ಮಳೆಗೆ  ಮರಣ ಗುಂಡಿ ನಿರ್ಮಾಣವಾಗಿದ್ದು, ಜೂ.26ರ ಬುಧವಾರ ಸ್ಕೂಟರ್ ಸವಾರನೊಬ್ಬ ಆ ಗುಂಡಿಗೆ ಬಿದ್ದು ಗಾಯಗೊಂಡ ಘಟನೆ ನಡೆದಿದೆ.

Advertisement

ತಕ್ಷಣ ಆಕ್ರೋಶಗೊಂಡ ಸವಾರ ಗುಂಡಿಯಲ್ಲಿ ವಾಹನ ನಿಲ್ಲಿಸಿ ಪ್ರತಿಭಟನೆ ನಡೆಸಿದ್ದಾರೆ.

ಎಲ್ಲರೂ ಹೊಂಡ ನೋಡಿ ಹೋಗುವವರೇ ಹೆಚ್ಚು. ಆದರೆ ಈ ಗಾಯಾಳು ತಕ್ಷಣ ವಾಹನ ನಿಲ್ಲಿಸಿ ಪ್ರತಿಭಟಿಸಿದ್ದಲ್ಲದೇ ಇತರ ವಾಹನ ಸವಾರರನ್ನೂ ಎಚ್ಚರಿಸುವ ಕೆಲಸ ಮಾಡಿದ್ದಾರೆ.

ಸಮೀಪದಲ್ಲೇ ಇದ್ದ ಟ್ರಾಫಿಕ್ ಎಎಸ್ಐ ಮತ್ತು ಕಾನ್ಸ್ ಟೇಬಲ್ ಫೈನ್ ಹಾಕುವುದರಲ್ಲೇ  ನಿರತರಾಗಿದ್ದರು. ಹೀಗೂ ಉಂಟೇ…ಜಂಕ್ಷನ್ ಕಾಮಗಾರಿ ಪೂರ್ಣವಾಗುವುದು ಎಂದು ? ಜನರ ಹೆಣ ಬೀಳುವ ತನಕ ಎಚ್ಚರಗೊಳ್ಳುದಿಲ್ಲವೆ? ಉತ್ತರಿಸಿ…. ನಮ್ಮ ಜನಪ್ರತಿನಿಧಿಗಳೇ… ಎಂಬುದು ಸಾರ್ವಜನಿಕರ ಪ್ರಶ್ನೆ.

Advertisement

Udayavani is now on Telegram. Click here to join our channel and stay updated with the latest news.

Next