Advertisement

ಸುರತ್ಕಲ್: ಕತ್ತಿ ಬೀಸಿ ಇಬ್ಬರ ಮೇಲೆ ಹಲ್ಲೆ; ಆರೋಪಿ ವಶಕ್ಕೆ

02:15 PM Aug 19, 2022 | Team Udayavani |

ಸುರತ್ಕಲ್: ಇಲ್ಲಿನ ಕಾನಾ ಸಮೀಪ ವ್ಯಕ್ತಿಯೊಬ್ಬ ಕತ್ತಿಯಿಂದ ಇಬ್ಬರಿಗೆ ಗಾಯಗೊಳಿಸಿದ್ದಲ್ಲದೆ, ಬಸ್ಸಿಗೆ ಕಲ್ಲು ತೂರಾಟ ನಡೆಸಿದ ಘಟನೆ ಶುಕ್ರವಾರ ನಡೆದಿದೆ.

Advertisement

ಗಾಯಗೊಂಡವರನ್ನು ಹಾಗೂ ಕತ್ತಿ ಬೀಸಿದ ವ್ಯಕ್ತಿಗೂ ಗಾಯವಾಗಿದ್ದು, ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕತ್ತಿ ಬೀಸಿದ ವ್ಯಕ್ತಿ ಜಾರ್ಖಂಡ್‌ ಮೂಲದ ಅಟಲ್‌ ಕುಲ್ಲು, ಗಾಯಗೊಂಡ ವ್ಯಕ್ತಿ ಸುರತ್ಕಲ್‌ ನ ವೆಂಕಪ್ಪ ಎಂದು ತಿಳಿದು ಬಂದಿದೆ.

ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ, ತನಿಖೆ ಆರಂಭಿಸಿದ್ದು, ಆರೋಪಿಯು ಮೇಲ್ನೋಟಕ್ಕೆ ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದಾನೆ ಎಂದು ತಿಳಿದು ಬಂದಿದೆ. ಸುರತ್ಕಲ್ ಪೊಲೀಸ್ ಠಾಣೆಯ ಅಧಿಕಾರಿಗಳು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next