Advertisement

Surathkal: ಟೋಲ್ ಗೇಟ್ ಗೆ ಟ್ರಕ್ ಡಿಕ್ಕಿ

10:03 AM Dec 10, 2023 | Team Udayavani |

ಸುರತ್ಕಲ್ : ಶನಿವಾರ ರಾತ್ರಿ ಮಳೆಗೆ ಸುರತ್ಕಲ್ ನಲ್ಲಿರುವ ನಿರುಪಯುಕ್ತ ಟೋಲ್ ಗೇಟ್ ಗೆ ಟ್ರಕ್ ವೊಂದು ಡಿಕ್ಕಿ ಹೊಡೆದ ಘಟನೆ ನಡೆದಿದೆ.

Advertisement

ಟೋಲ್ ಸಂಗ್ರಹ ನಿಂತ ಬಳಿಕ ಅಲ್ಲಿನ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದ್ದು, ಕತ್ತಲಲ್ಲಿ ದಿಢೀರ್ ಎದುರಾಗುವ ಟೋಲ್ ಕಂಬಗಳು ಅಪಘಾತದ ಸ್ಪಾಟ್ ಆಗಿ ಬದಲಾಗಿದೆ.

ಅಪಘಾತದ ಪರಿಣಾಮ ಕಂಬಗಳು ಜಾರಿ ಕುಸಿಯುವ ಭೀತಿ ಮೂಡಿಸಿದೆ.

ಅಪಘಾತದಿಂದ ಹಲವಾರು ವಾಹನಗಳು ಹಾನಿಗೀಡಾಗುತ್ತಿದ್ದು, ಹೆದ್ದಾರಿ ಇಲಾಖೆ ಇದಕ್ಕೆಲ್ಲ ಕಾರಣವಾಗುತ್ತಿದೆ ಎಂಬುದು ವಾಹನ ಸವಾರರ ಆರೋಪ. ತಕ್ಷಣ ಈ ಟೋಲ್ ಬೂತ್ ತೆರವಿಗೆ ಒತ್ತಾಯಿಸಲಾಗುತ್ತಿದೆ.

ಬೆಂಗಳೂರಿನಿಂದ ಉಡುಪಿ ಕಡೆಗೆ ತರಕಾರಿ ಸಾಗಿಸುತ್ತಿದ್ದ ಟ್ರಕ್‌ ಸುಮಾರು 1.30ಕ್ಕೆ ಸುರತ್ಕಲ್ ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ.

Advertisement

ಚಾಲಕನ ಅತೀ ವೇಗ ಹಾಗೂ ನಿರ್ಲಕ್ಷ್ಯತನದ ಚಾಲನೆಯಿಂದ ಸುರತ್ಕಲ್ ಎನ್.ಐ.ಟಿ.ಕೆ ಸಮೀಪದಲ್ಲಿರುವ ಹಳೆಯ ಟೋಲ್ ಗೇಟ್ ನ ವಿಭಜಕದ ಮೇಲೇರಿ ಟೋಲ್ ಬೂತ್ ಗೆ ಡಿಕ್ಕಿಯಾಗಿದೆ.

ಅಪಘಾತದ ಪರಿಣಾಮ ಲಾರಿ ಪಲ್ಟಿಯಾಗಿ ಬಿದ್ದಿದ್ದು, ಈ ಘಟನೆಯಿಂದ  ಚಾಲಕನಿಗೆ ಸಾಮಾನ್ಯ ಗುದ್ದಿದ ಗಾಯವಾಗಿದೆ. ಟೋಲ್ ಗೇಟ್ ನ ಒಂದು ಟೋಲ್ ಬೂತ್ ಹಾಗೂ ಕಬ್ಬಿಣದ ಪಿಲ್ಲರ್ ಸಂಪೂರ್ಣ ಜಖಂಗೊಂಡಿದೆ.

ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next