Advertisement

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

09:03 PM Nov 02, 2024 | Team Udayavani |

ಗದಗ: ಬೆಟಗೇರಿ ಬಡಾವಣೆ ಠಾಣೆ ವ್ಯಾಪ್ತಿಯ ಎಪಿಎಂಸಿ ವರ್ತಕರಿಂದ ಒಣಮೆಣಸಿನಕಾಯಿ ಖರೀದಿಸಿ ಮೆಣಸಿನಕಾಯಿ ಚೀಲಗಳನ್ನು ತೆಗೆದುಕೊಂಡು ಹೋಗಿ ಹಣ ಕೊಡದೇ ಮೋಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಗಳನ್ನು ವಶಕ್ಕೆ ಪಡೆದು ಸೂರತ್ ನಲ್ಲಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ರೂ. ಮೌಲ್ಯದ 226 ಒಣಮೆಣಸಿನಕಾಯಿ ಚೀಲಗಳನ್ನು ಪತ್ತೆ ಮಾಡಲಾಗಿದೆ.

Advertisement

ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಖರೀದಿಸಿದಂತೆ ಮಾಡಿ ಮೆಣಸಿನಕಾಯಿ ಚೀಲಗಳನ್ನು ತೆಗೆದುಕೊಂಡು ಹೋಗಿ ಹಣ ಕೊಡದೇ ಮೋಸ ಮಾಡಿದ ಬಗ್ಗೆ  ಪ್ರಕರಣ ದಾಖಲಾಗಿತ್ತು. ಮೋಸ ಮಾಡಿ ತೆಗೆದುಕೊಂಡು ಹೋದ ಒಣಮೆಣಸಿನಕಾಯಿ ಚೀಲಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಕೈಕೊಂಡಿದ್ದರು.

ಮೋಸ ಮಾಡಿ ತೆಗೆದುಕೊಂಡು ಹೋದ ಒಣಮೆಣಸಿನಕಾಯಿ ಚೀಲಗಳ  ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ‌ ಬಿ.ಎಸ್. ನೇಮಗೌಡ ಅವರು ಒಂದು ವಿಶೇಷ ತಂಡ ರಚನೆ ಮಾಡಿದ್ದರು.

ಹೆಚ್ವುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಡಿವೈಎಸ್ಪಿ ಜಿ.ಎಚ್.‌ ಇನಾಮದಾರ ಅವರ ಮಾರ್ಗದರ್ಶನದಲ್ಲಿ ಸಿಪಿಐ ಧೀರಜ್.ಬಿ. ಸಿಂಧೆ, ಪಿಎಸ್ಐ ಮಾರುತಿ ಜೋಗದಂಡಕರ ನೇತೃತ್ವದ ಅಧಿಕಾರಿಗಳ ತಂಡ ಗುಜರಾತ ರಾಜ್ಯದ ಸೂರತ್‌ನ ಉಮಾ ಕೋಲ್ಡ್ ಸ್ಟೋರೆಜ್ ದಲ್ಲಿ ಸಂಗ್ರಹಿಸಿಟ್ಟಿದ್ದ ₹6 ಲಕ್ಷ ಮೌಲ್ಯದ 226 ಒಣಮೆಣಸಿನಕಾಯಿ ಚೀಲಗಳನ್ನು ವಶಪಡಿಸಿಕೊಂಡು ತನಿಖಾ ಕಾರ್ಯ ಮುಂದುವರಿಸಿದ್ದಾರೆ.

Advertisement

ಘಟನೆ ಹಿನ್ನೆಲೆ: 2024ರ ಮೇ ತಿಂಗಳಿನಲ್ಲಿ ಗದಗ ಎಪಿಎಂಸಿಯ ನಾಜೀರಾ ಸಾದಿಕಸಹ್ಮದ್ ಖಾಜಿ ಎಂಬ ವರ್ತಕರಿಂದ ಗುಜರಾತ್ ರಾಜ್ಯದ ಬಾಬರಿ ಆನಂದ ಜಯಂತಿಲಾಲ್ ಹಾಗೂ ಬಾವಿನ್ ರೂಪರೆಲ್ಲಾ ಎಂಬುವವರು 6 ಲಕ್ಷ ಮೌಲ್ಯದ 226 ಚೀಲಗಳ ಒಣಮೆಣಸಿಕಾಯಿ ಖರೀದಿಸಿ ಹಣ ಕೊಡದೆ ನಾಪತ್ತೆಯಾಗಿದ್ದರು. ಈ ಕುರಿತು ಎಪಿಎಂಸಿ ವರ್ತರಕರಾದ ನಾಜೀರಾ ಅವರು ಬೆಟಗೇರಿ ಬಡಾವಣೆ ಠಾಣೆಯಲ್ಲಿ ದೂರು ದಾಖಲಿಸಿದದ್ದರು. ಒಣಮೆಣಸಿನಕಾಯಿ ಖರೀಸಿದ್ದ ಗುಜರಾತ್ ಮೂಲದ ವರ್ತಕರು ಸೂರತ್‌ನ ಉಮಾ ಕೋಲ್ಡ್ ಸ್ಟೋರೆಜ್ ನಲ್ಲಿ ಸಂಗ್ರಹಿಸಿಟ್ಟಿದ್ದರು. ಮಾಹಿತಿಯನ್ನು ಅರಿತ ಪೊಲೀಸರು ಸ್ಟೋರೇಜ್ ನಲ್ಲಿ ಸಂಗ್ರಹಿಸಿಟ್ಟಿದ್ದ ಒಣಮೆಣಸಿನಕಾಯಿಯನ್ನು ವಶಕ್ಕೆ ಪಡೆದು ಮರಳಿ ಗದಗನ ಗೋದಾಮಿನಲ್ಲಿ ಸಂರಕ್ಷಿಸಿಟ್ಟಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದು ಪತ್ತೆ ಕಾರ್ಯ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next