ಹೊಸದಿಲ್ಲಿ : ಗುಜರಾತ್‌ನ ಸೂರತ್‌ನಲ್ಲಿನ ಬಿಲಿಯಾಧಿಪತಿ ವಜ್ರೋದ್ಯಮಿ ಸಾವಜಿ ಧೋಲಕಿಯಾ ಅವರು ಈ ಬಾರಿಯ ದೀಪಾವಳಿಗೆ ತಮ್ಮ 600 ನೌಕರರಿಗೆ ಕಾರು ಉಡುಗೊರೆ ನೀಡಲಿದ್ದಾರೆ.
ಧೋಲಕಿಯಾ ಅವರು ಹರೇ ಕೃಷ್ಣ ಎಕ್ಸ್‌ಪೋರ್ಟರ್‌ಸ್ ಕಂಪೆನಿಯ ಮಾಲಕರು. ಇವರು ತಮ್ಮ ಕಂಪೆನಿಯ ಇತರ ಕೆಲವು ನೌಕರರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಈ ಬಾರಿ
ಚಿನ್ನಾಭರಣಗಳನ್ನೂ ಫ್ಲ್ಯಾಟ್ ಗಳನ್ನೂ ನೀಡಲಿದ್ದಾರೆ ಎಂದು ಕೆಲವು ಮಾಧ್ಯಮ ವರದಿಗಳು ತಿಳಿಸಿವೆ.
ಈ ವರ್ಷ ಆಗಸ್ಟ್ ನಲ್ಲಿ ಧೋಲಕಿಯಾ ಅವರು ತಮ್ಮ ಕಂಪೆನಿಯಲ್ಲಿ 25 ವರ್ಷಗಳ ಸೇವೆ ಪೂರೈಸಿದ ಮೂವರು ನೌಕರರಿಗೆ ಸುಮಾರು 3 ಕೋಟಿ ರೂ. ಮೌಲ್ಯದ ಮರ್ಸೆಡಿಸ್ ಬೆಂಜ್ ಜಿಎಲ್‌ಎಸ್ 350 ಡಿ ಎಸ್‌ಯುವಿ ವಾಹನವನ್ನು ಉಡುಗೊರೆಯಾಗಿ ನೀಡಿದ್ದರು.
ನೌಕರರಿಗೆ ದೀಪಾವಳಿಯ ಸಂದರ್ಭದಲ್ಲಿ ಬಿಂದಾಸ್ ಉಡುಗೊರೆಗಳನ್ನು ಕೊಡುವ ದೇಶದ ಅತ್ಯಪರೂಪದ ಉದ್ಯಮಿಯಾಗಿ ಗುರುತಿಸಿಕೊಂಡಿರುವ ಧೋಲಕಿಯಾ ಅವರು ಈ ಹಿಂದೆಯೂ ತಮ್ಮ ಅತ್ಯುತ್ತಮ ಹಾಗೂ ದಕ್ಷ ನೌಕರರಿಗೆ ಸಾವಿರಾರು ಕಾರುಗಳನ್ನು ಉಡುಗೊರೆಯಾಗಿ ನೀಡಿ ಪ್ರಸಿದ್ಧಿಗೆ ಬಂದಿದ್ದರು.
ಬಿಲಿಯಾಧಿಪತಿ ವಜ್ರೋದ್ಯಮಿ ಧೋಲಕಿಯಾ ಅವರು ಸೌರಾಷ್ಟ್ರ ಪ್ರಾಂತ್ಯದ ಅಮ್ರೇಲಿ ಜಿಲ್ಲೆಯ ದುಧಾಲಾ ಗ್ರಾಮದವರಾಗಿದ್ದಾರೆ. ಇವರು ತಮ್ಮ ಚಿಕ್ಕಪ್ಪನಿಂದ ಸಾಲ ಪಡೆದು ಉದ್ಯಮ ಆರಂಭಿಸಿದ್ದರು. ಇವರು ತಮ್ಮ ಪುತ್ರ ದ್ರವ್ಯ ನನ್ನು ಕೇರಳಕ್ಕೆ ಅನಾಮಿಕನಾಗಿ ಕಳುಹಿಸಿ ಉದ್ಯೋಗ, ಉದ್ಯಮಗಳ ಕಷ್ಟ ಸುಖಗಳನ್ನು ಸ್ವಾನುಭವದಿಂದ ತಿಳಿದುಕೊಳ್ಳುವಂತೆ ಮಾಡಿದ್ದರು.