ಸುರಪುರ: ತಾಲೂಕಿನ ಗೆದ್ದಲಮರಿ ಹಾಗೂ ಹೆಬ್ಟಾಳ ಬಿ. ಎರಡು ತಾಪಂ ಕ್ಷೇತ್ರಗಳಿಗೆ ಚುನಾವಣೆ ನಿಗಯಾಗಿದ್ದು, ಎರಡು ಕ್ಷೇತ್ರಗಳಿಗೆ ಒಟ್ಟು 11 ಜನ ಅಭ್ಯರ್ಥಿಗಳಿಂದ 15 ನಾಮ ಪತ್ರ ಸಲಿಕೆಯಾಗಿವೆ ಎಂದು ತಹಶೀಲ್ದಾರ್ ಸುರೇಶ ಅಂಕಲಗಿ ತಿಳಿಸಿದರು.
ಇತ್ತೀಚೆಗೆ ಎರಡು ಕ್ಷೇತ್ರಗಳ ಸದಸ್ಯರ ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ತೆರವಾಗಿದ್ದ ಪರಿಶಿಷ್ಟ ಪಂಗಡಕ್ಕೆ (ಎಸ್ಟಿ) ಮೀಸಲಾಗಿದ್ದ ಗೆದ್ದಲಮರಿ ಹಾಗೂ ಪರಿಶಿಷ್ಟ ಜಾತಿಗೆ (ಎಸ್ಸಿ) ಮೀಸಲಾಗಿದ್ದ ಹೆಬ್ಟಾಳ ಬಿ. ಎರಡು ಕ್ಷೇತ್ರಗಳಿಗೆ ಸರ್ಕಾರ ಅಧಿಸೂಚನೆ ಹೊರಡಿಸಿ ಚುನಾವಣೆ ನಡೆಸುವಂತೆ ಆದೇಶಿಸಿತ್ತು.
ಕಳೆದ 13ರಿಂದ ನಾಮ ಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿತ್ತು. ಮೂರು ದಿನಗಳಿಂದ ಯಾವುದೇ ನಾಮ ಪತ್ರ ಸಲ್ಲಿಕೆಯಾಗಿರಲ್ಲಿಲ್ಲ. ಆದರೆ ನಾಮ ಪತ್ರ ಸಲ್ಲಿಕೆಗೆ ಕಡೆ ದಿನವಾದ ಗುರುವಾರ ಗೆದ್ದಲಮರಿ ಕ್ಷೇತ್ರಕ್ಕೆ 4 ಮತ್ತು ಹೆಬ್ಟಾಳ ಕ್ಷೇತ್ರಕ್ಕೆ 11 ಸೇರಿ ಎರಡು ಕ್ಷೇತ್ರಗಳಿಗೆ ಒಟ್ಟು 15 ನಾಮಪತ್ರ ಸಲ್ಲಿಕೆಯಾಗಿವೆ.
ಎಸ್ಟಿ ಗೆದ್ದಲಮರಿ ಕ್ಷೇತ್ರ: ಬಿಜೆಪಿಯಿಂದ ದುರ್ಗಪ್ಪ ಸಗರೆಪ್ಪ, ಬಸನಗೌಡ ಪರಮಣ್ಣ, ಕಾಂಗ್ರೆಸ್‌ನಿಂದ ಬಸನಗೌಡ ನರಸಪಗೌಡ, ಯಂಕೋಬ ಬಸವರಾಜ ನಾಮ ಪತ್ರ ಸಲ್ಲಿಸಿದರೆ, ಎಸ್ಸಿ ಹೆಬ್ಟಾಳ ಬಿ. ಕ್ಷೇತ್ರಕ್ಕೆ ಬಿಜೆಪಿಯಿಂದ ಲಲಿತಾ ರವಿಕುಮಾರ, ರವಿಕುಮಾರ ಗಣಪತಿ ನಾಯಕ. ಕಾಂಗ್ರೆಸ್‌ನಿಂದ ಉಮಾಭಾಯಿ ತಿರುಪತಿ ನಾಯಕ, ಭೀಮಾನಾಯಕ ಗೋವಿಂದ ನಾಯಕ, ಸಿದ್ದ ನಾಯಕ ತಿರುಪತಿ ನಾಯಕ, ಶಾಂತಾಬಾಯಿ ಭೀಮಾನಾಯಕ, ಬಿಎಸ್‌ಪಿಯಿಂದ ಮೂರ್ತೆಪ್ಪ ಹೊಸ್ಮನಿ ನಾಮಪತ್ರ ಸಲ್ಲಿಸಿದರು.
ಮೇ 17ರಂದು ಮಾನಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂತೆಗೆಯಲು ಮೇ 20 ಕೊನೆ ದಿನವಾಗಿದ್ದು, 29ರಂದು ಮತದಾನ ನಡೆಯಲಿದೆ. 31ರಂದು ತಹಶೀಲ್ದಾರ್ ಕಚೇರಿಯಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾಧಿಕಾರಿ ತಹಶೀಲ್ದಾರ್ ಸುರೇಶ ಅಂಕಲಗಿ ತಿಳಿಸಿದರು. ಸಹಾಯಕ ಚುನಾವಣಾಧಿಕಾರಿ ಅಶೋಕ ಸುರಪುರಕರ ಮತ್ತು ವಿಶ್ವನಾಥ ಯಾದಗಿರಿಕರ್ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದರು.