Advertisement

ಸರಕಾರಿ ನೌಕರರ ಸಮಸ್ಯೆಗೆ ಸ್ಪಂದಿಸಿ

01:37 PM Jul 21, 2019 | Team Udayavani |

ಸುರಪುರ: ನೌಕರರ ಸಂಘದ ನೂತನ ಸದಸ್ಯರು ನೌಕರರ ಬೇಕು ಬೇಡಗಳಿಗೆ ಪೂರಕವಾಗಿ ಸ್ಪಂದಿಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ಆರ್‌.ವಿ. ನಾಯಕ ಹೇಳಿದರು.

Advertisement

ಇಲ್ಲಿಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಸರಕಾರಿ ನೌಕರರ ತಾಲೂಕು ಘಟಕದ ನೂತನ ಸದಸ್ಯರಿಗೆ ಪ್ರಮಾಣ ಪತ್ರ ವಿತರಣೆ ಮತ್ತು ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚೆಗೆ ಸರಕಾರಿ ನೌಕರಿ ಮಾಡುವುದೆ ಕಷ್ಟ ಎನ್ನುವ ವಾತಾವರಣ ಸೃಷ್ಟಿಯಾಗಿದೆ. ಪ್ರತಿ ಹಂತದಲ್ಲಿ ಕೆಳ ಹಂತದ ನೌಕರರನ್ನೆ ಗುರಿಯಾಗಿಸಲಾಗುತ್ತಿದೆ. ಮೇಲಧಿಕಾರಿಗಳಿಂದ ಹಿಡಿದು ಸಾರ್ವಜನಿಕರವರೆಗೆ ಶೋಷಣೆ ನಡೆಯುತ್ತಿದೆ, ಇದನ್ನು ಸಮರ್ಥವಾಗಿ ಎದುರಿಸಲು ನೂತನ ಸದಸ್ಯರು ಆಯಾ ಸಂದರ್ಭಕ್ಕೆ ತಕ್ಕಂತೆ ಸೂಕ್ತ ನಿರ್ಧಾರ ತೆಗೆದುಕೊಂಡು ನೌಕರರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಸಲಹೆ ನೀಡಿದರು.

ಕೆಲ ಬಾರಿ ನೌಕರರ ಮೇಲೆ ವೈಯಕ್ತಿಕ ಆರೋಪಗಳು ಇರುವ ಸಾಧ್ಯತೆ ಇರುತ್ತವೆ. ಅಂತಹ ಸಂದರ್ಭದಲ್ಲಿ ಸಮಸ್ಯೆಯನ್ನು ಕೂಲಕುಂಶವಾಗಿ ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕು. ದುಡುಕಿನ ತೀರ್ಮಾನ ಸಂಘದ ಕಳಂಕಕ್ಕೆ ಕಾರಣವಾಗದಂತೆ ಎಚ್ಚರಿಕೆ ವಹಿಸಿ ಹೆಜ್ಜೆ ಇಡಬೇಕು. ಸದಸ್ಯರು ಉತ್ತಮವಾಗಿ ಕಾರ್ಯನಿರ್ವಹಿಸುವುದರ ಜತೆಯಲ್ಲಿಯೇ ಸಂಘದ ಏಳ್ಗಿಗೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ ರಾಜ್ಯ ಸರಕಾರಿ ನೌಕರರ ತಾಲೂಕು ಘಟಕದ ಅಧ್ಯಕ್ಷ ಸಂಜೀವ ದರಬಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಬಲವರ್ಧನೆಗೆ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಎಲ್ಲ ಸರಕಾರಿ ನೌಕರರ ಸಮಸ್ಯೆಗಳಿಗೆ ಹಗಲಿರುಳು ಸ್ಪಂದಿಸುವುದಾಗಿ ಭರವಸೆ ನೀಡಿದರು. ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಅಮರೇಶ ಕುಂಬಾರ, ಸಹಾಯಕ ಕೃಷಿ ನಿರ್ದೇಶಕ ದಾನಪ್ಪ ಕದ್ನಳ್ಳಿ, ತಾಪಂ ಯೋಜನಾಧಿಕಾರಿ ಕುಮಲಯ್ಯ, ಚುನಾವಣಾಧಿಕಾರಿ ಸಿದ್ದನಗೌಡ ಹೊಸಗೌಡ್ರು, ಕ.ರಾ.ಸ.ನೌ.ಸಂ. ರಾಜ್ಯ ಪರಿಷತ್‌ ಸದಸ್ಯ ಸಿದ್ದನಗೌಡ ಚೌದ್ರಿ, ವಿಜಯರಡ್ಡಿ, ಚಂದ್ರಶೇಖರ ವಕ್ರಾಣಿ ವೇದಿಕೆಯಲಿದ್ದರು.

Advertisement

ಇದೇ ವೇಳೆ ತಾಲೂಕು ಘಟಕಕ್ಕೆ ನೂತನವಾಗಿ ಆಯ್ಕೆಯಾದ ಸದಸ್ಯರನ್ನು ಸನ್ಮಾನಿಸಿ ಪ್ರಮಾಣ ಪತ್ರ ನೀಡಲಾಯಿತು. ಸಂಘದ ಸದಸ್ಯರು, ವಿವಿಧ ಇಲಾಖೆಯ ಸರಕಾರಿ ನೌಕರರು ಇದ್ದರು. ಬಸನಗೌಡ ಪೊಲೀಸ್‌ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ನಾಗರಾಜ ಮ್ಯಾಗೇರಿ ನಿರೂಪಿಸಿದರು. ಸಿದ್ದಪ್ಪ ಸಾಲಿ ಸ್ವಾಗತಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next