Advertisement

ಪ್ರಗತಿಪರ ಸಾಮೂಹಿಕ ಸಂಘಟನೆಗಳ ವೇದಿಕೆ ಧರಣಿ

03:16 PM Jul 31, 2019 | Team Udayavani |

ಸುರಪುರ: ಹಸನಾಪುರ ಬಸ್‌ ಘಟಕದಲ್ಲಿ ಚಾಲಕ ಕಂ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ದಲಿತ ನೌಕರರ ಅನಗತ್ಯ ವರ್ಗಾವಣೆಯನ್ನು ರದ್ದುಪಡಿಸಬೇಕು. ಅವರ ಮೇಲೆ ದಾಖಲಿಸಿರುವ ಸುಳ್ಳು ಪ್ರಕರಣ ಹಿಂಪಡೆದು ಕಿರುಕುಳ ನೀಡುತ್ತಿದ್ದ ಸಂಚಾರಿ ನಿರೀಕ್ಷಕರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಒತ್ತಾಯಿಸಿ ಪ್ರತಿಪರ ಸಾಮೂಹಿಕ ದಲಿತ ಸಂಘಟನೆಗಳ ವೇದಿಕೆ ಇಲ್ಲಿಯ ಬಸ್‌ ಘಟಕದ ಎದುರು ಪ್ರತಿಭಟಿಸಿತು.

Advertisement

ದಲಿತ ಮುಖಂಡ ನಿಂಗಣ್ಣ ಗೋನಾಲ ಮಾತನಾಡಿ, ಬಸ್‌ ಘಟಕದಲ್ಲಿ ಚಾಲಕ ಕಂ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದ ಬಾಬೂ ರಾಠೊಡ ಮತ್ತು ಸಂತೋಷಕುಮಾರ ಎಂಬ ದಲಿತ ನೌಕರರ ಮೇಲೆ ಯಾವದೇ ದೂರುಗಳಿಲ್ಲದೆ ಅನಗತ್ಯವಾಗಿ ವರ್ಗಾವಣೆ ಮಾಡಿರುವುದು ಖಂಡನೀಯ ಎಂದರು.

ದಲಿತ ಮುಖಂಡ ಭೀಮರಾಯ ಸಿಂಧಗೇರಿ ಮಾತನಾಡಿ, ಟ್ರಾಫಿಕ್‌ ಇನ್ಸೆಪೆಕ್ಟರ್‌ ಗಿರೀಶ ಕಮಠuಳಿ ಅವರು ಡಿ ಗ್ರೂಪ್‌ ನೌಕರರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದ. ನೌಕರರ ನಡುವೆ ಪರಸ್ಪರ ಎತ್ತಿ ಕಟ್ಟಿ ಜಾತಿ ತಾರತಮ್ಯ ಅನುಸರಿಸುತ್ತಿದ್ದ, ಈ ಕುರಿತು ನೌಕರರು ಹಲವಾರು ಬಾರಿ ವ್ಯವಸ್ಥಾಪಕರಿಗೆ ತಿಳಿಸಿದ್ದರೂ ಮೇಲಧಿಕಾರಿಗಳು ನಿರೀಕ್ಷರ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ ಎಂದು ದೂರಿದರು.

ಚಂದ್ರಶೇಖರ ಜಡಿಮರಳ ಮಾತನಾಡಿ, ಘಟಕ ವ್ಯವಸ್ಥಾಪಕ, ವಿಭಾಗೀಯ ನಿಯಂತ್ರಣಾಧಿಕಾರಿ ಮತ್ತು ಟ್ರಾಫಿಕ್‌ ಇನ್ಸೆಪೆಕ್ಟರ್‌ ಈ ಮೂವರು ಸೇರಿ ದಲಿತ ನೌಕರರಿಗೆ ದಿನನಿತ್ಯ ಮಾನಸಿಕ ಹಿಂಸೆ ಕೊಟ್ಟಿದ್ದಾರೆ. ಇವರಿಗೆ ಇನ್ನಷ್ಟು ಕಿರುಕುಳ ಕೊಡುವ ದುರುದ್ದೇಶದಿಂದ ಸುಳ್ಳು ಕೇಸ್‌ ದಾಖಲಿಸಿದ್ದಾರೆ. ಇದಕ್ಕೆ ಬಗ್ಗದೆ ಇದ್ದಾಗ ಕೊನೆಗೆ ಒಬ್ಬರನ್ನು ಬಳ್ಳಾರಿಗೆ ಮತ್ತು ಇನ್ನೊಬ್ಬರನ್ನು ಹೊಸಪೇಟೆಗೆ ವರ್ಗಾವಣೆ ಮಾಡಿದ್ದಾರೆ. ಈ ಪ್ರವೃತಿ ಕೈ ಬಿಡಬೇಕು. ದಲಿತ ನೌಕರರು ನೆಮ್ಮಂದಿಯಿಂದ ಕೆಲಸ ಮಾಡುವ ವಾತಾವರಣ ನಿರ್ಮಿಸಬೇಕು ಎಂದು ಆಗ್ರಹಿಸಿದರು.

ಚಾಲಕ ಕಂ ನಿರ್ವಾಹಕರ ಮೇಲಿನ ಸುಳ್ಳು ಪ್ರಕರಣ ಹಿಂಪಡೆಯಬೇಕು ಮತ್ತು ವರ್ಗಾವಣೆ ಆದೇಶವನ್ನು ಕೂಡಲೇ ರದ್ದುಗೊಳಿಸಿ ಹಸನಾಪುರ ಘಟಕದಲ್ಲಿಯೇ ಮುಂದುವರಿಸಬೇಕು ಎಂದು ಒತ್ತಾಯಿಸಿದರು. ನಿರ್ಲಕ್ಷ್ಯ ವಹಿಸಿದ್ದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

Advertisement

ಸಾರಿಗೆ ಇಲಾಖೆ ವ್ಯವಸ್ಥಾಪಕ ನಿರ್ದೇಶಕರಿಗೆ ಬರೆದ ಮನವಿಯನ್ನು ಜಿಲಾ ಸಂಚಾರಿ ನಿರೀಕ್ಷಕ ಬೈಲಪ್ಪ ಬಿರೇದಾರ ಅವರಿಗೆ ಸಲ್ಲಿಸಿದರು.

ವಿವಿಧ ಸಂಘಟನೆಗಳ ಮುಖಂಡರಾದ ವೆಂಕೋಬ ದೊರೆ, ದೆವೀಂದ್ರಪ್ಪ ಪತ್ತಾರ, ಭೀಮಾಶಂಕರ ಬಿಲ್ಲವ್‌, ರಾಹುಲ ಹುಲಿಮನಿ, ಸೋಮಶೇಖರ ಸಜ್ಜನ್‌, ಶೇಖರ ನಾಯ್ಕ, ಹಣಮಂತ ಕಟ್ಟಿಮನಿ, ಮಲ್ಕಯ್ಯ ತೇಲ್ಕರ್‌, ಮಾನಪ್ಪ ಝಂಡದಕೇರಾ, ಧಾನಪ್ಪ ಕಡಿಮನಿ, ಭೀಮಣ್ಣ ಬಲಶೆಟ್ಟಿಹಾಳ, ಬಸವರಾಜ ಮಂಜಲಾಪುರ, ಶಿವಣ್ಣ ನಾಗರಾಳ, ರಮೇಶ ನಂಬಾ, ತಾಯಪ್ಪ ಕನ್ನೆಳ್ಳಿ, ಪರಮಣ್ಣ ಹಂದ್ರಾಳ, ನಾಗರಾಜ ಗೋಗಿಕೇರಿ, ವಿಜಯಕುಮಾರ ಕರಡಕಲ್ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next