Advertisement

ಸಮರ್ಪಕ ಪಡಿತರ ವಿತರಣೆಗೆ ಸಹಕರಿಸಿ: ದತ್ತಪ್ಪ

11:03 AM Jul 29, 2019 | Team Udayavani |

ಸುರಪುರ: ನ್ಯಾಯಬೆಲೆ ಅಂಗಡಿಗಳ ಎಲ್ಲಾ ಡೀಲರಗಳು ಸಮರ್ಪಕ ಪಡಿತರ ವಿತರಣೆಗೆ ಸಹಕರಿಸಬೇಕು. ಇಲಾಖೆ ಕಾಲ ಕಾಲಕ್ಕೆ ನೀಡುವ ಪ್ರತಿ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಆಹಾರ ಇಲಾಖೆ ಉಪನಿರ್ದೇಶಕ ದತ್ತಪ್ಪ ಕಲ್ಲೂರ ಹೇಳಿದರು.

Advertisement

ಇಲ್ಲಿಯ ತಹಶೀಲ್ದಾರ್‌ ಕಚೇರಿಯಲ್ಲಿ ನಡೆದ ನ್ಯಾಯಾಬೆಲೆ ಅಂಗಡಿ ಡೀಲರಗಳ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆ ಸಮರ್ಪಕ ಅನುಷ್ಠಾನ ಕುರಿತು ಕೇಂದ್ರ ತನಿಖಾ ತಂಡ ಇತ್ತೀಚೆಗೆ ಜಿಲ್ಲೆಯ ವಿವಿಧೆಡೆ ಭೇಟಿ ನೀಡಿತ್ತು. ಆ ಸಮಯದಲ್ಲಿ ಕೆಲ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾಗ ಕೆಲ ಲೋಪದೋಷ ಕಂಡು ಬಂದಿವೆ. ಈ ಹಿನ್ನೆಲೆಯಲ್ಲಿ ತನಿಖಾ ತಂಡದವರು ಪಡಿತರ ವ್ಯವಸ್ಥೆಯನ್ನು ಇನ್ನಷ್ಟು ಬಲವರ್ಧ ನೆಗೊಳಿಸಲು ಮತ್ತು ಪಾರದರ್ಶಕ ಹಂಚಿಕೆಗೆ ಕೆಲ ನಿರ್ದೇಶನಗಳನ್ನು ನೀಡಿದ್ದಾರೆ. ಕಾರಣ ಡೀಲರಗಳು ತನಿಖಾ ತಂಡ ನೀಡಿರುವ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿದರು.

ಪ್ರತಿ ನ್ಯಾಯಬೆಲೆ ಅಂಗಡಿಯಲ್ಲಿ ನಾಮಫಲಕ, ಜಾಗೃತ ಸಮಿತಿ ಸದಸ್ಯರ ನಾಮ ಫಲಕ, ದೂರವಾಣಿ ಸಂಖ್ಯೆ, ದಾಸ್ತಾನು, ದರಪಟ್ಟಿ, ಹಂಚಿಕೆ ಪ್ರಮಾಣ ಸೇರಿದಂತೆ ಎಲ್ಲಾ ನಾಮ ಫಲಕಗಳನ್ನು ಅಳವಡಿಸಬೇಕು. ಎತ್ತುವಳಿ, ಮಾರಾಟ, ದಾಸ್ತಾನು ಕುರಿತು ನಾಮಫಲಕದಲ್ಲಿ ನಮೂದು ಮಾಡಬೇಕು. ಈ ಕುರಿತು ದಾಸ್ತಾನು ರಜಿಸ್ಟಾರನಲ್ಲಿಯೂ ನಮೂದಿಸಬೇಕು. ವಿದ್ಯುನ್ಮಾನ ತೂಕ ಯಂತ್ರದ ಮೂಲಕ ಪಡಿತರ ಹಂಚಿಕೆ ಮಾಡಬೇಕು ಎಂದು ತಿಳಿಸಿದರು.

ರಾಜ್ಯ ಮಟ್ಟದ ತನಿಖಾ ತಂಡ ಜಿಲ್ಲೆಗೆ ಮತ್ತೂಮ್ಮೆ ಭೇಟಿ ಕೊಡುವ ಸಾಧ್ಯತೆ ಇದೆ. ಆದ್ದರಿಂದ ಡೀಲರಗಳು ಈ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು. ತಪಾಸಣೆ ವೇಳೆ ಈ ನಿಯಮ ಪಾಲನೆ ಕಂಡು ಬರದಿದ್ದಲ್ಲಿ ಅಂತಹ ವಿತರಕರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ತಹಶೀಲ್ದಾರ್‌ ಸುರೇಶ ಅಂಕಲಗಿ, ಶಿರಸ್ತೇದಾರ ರವಿಕುಮಾರ, ಆಹಾರ ನಿರೀಕ್ಷಕ ಅಮರೇಶ ಕಲ್ಮನಿ, ಸೀನಿಯರ್‌ ಪ್ರೋಗ್ರಾಮರ್‌ ಮಲ್ಲೇಶಿ ಗುಡ್ಯಾಳ. ಮಹೇಶ ಯಾದಗಿರಿ, ಡೀಲರ ಸಂಘದ ತಾಲೂಕು ಅಧ್ಯಕ್ಷ ತಿರುಪತಿಗೌಡ ಚಿಗರಿಹಾಳ, ಸಂಗಣ್ಣ ಎಕ್ಕೆಳ್ಳಿ, ಶಿವರಾಯ ಕಾಡ್ಲೂರ, ರಮೇಶ ದೊರೆ, ರಾಜು ಬನ್ನಿಗಿಡ, ಕೃಷ್ಣಪ್ಪ ಜೇವರ್ಗಿ, ಮೋಹನ ರಫುಗಾರ, ಬಸವರಾಪ್ಪ ತಂಬಾಕೆ, ಪ್ರಕಾಶ ಮಹೇಂದ್ರಕರ, ಈಶ್ವರ ಸತ್ಯಂಪೇಟ, ದೇವಪ್ಪಗೌಡ ದೇವಿಕೇರಿ, ಬಸವರಾಜ ಚಿಕನಳ್ಳಿ, ನಿಂಗಣ್ಣ ಜಕಾತಿ, ಸಂಜಿವರಾವು ಕುಲಕರ್ಣಿ, ನಿಂಗಣ್ಣ ಖಾನಾಪುರ, ಬಸವರಾಜ ದೇವಾಪುರ ಸೇರಿದಂತೆ ಇತರೆ ಡೀಲರಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next