Advertisement

Suraj ರೇವಣ್ಣಗೆ ಶೀಘ್ರದಲ್ಲೇ ಪುರುಷತ್ವ ಪರೀಕ್ಷೆ?

10:31 PM Jun 25, 2024 | Team Udayavani |

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ತಮ್ಮ ಪ್ರಜ್ವಲ್‌ ರೇವಣ್ಣಗೆ ಮಾಡಿಸಿದ್ದ ಪುರುಷತ್ವ ಪರೀಕ್ಷೆ ಮಾದರಿಯಲ್ಲೇ ಅಣ್ಣ ಸೂರಜ್‌ ರೇವಣ್ಣಗೂ ಕೆಲವೊಂದು ಮೆಡಿಕಲ್‌ ಟೆಸ್ಟ್‌ ಮಾಡಲು ಸಿಐಡಿ ಸಿದ್ಧತೆ ನಡೆಸಿದೆ ಎಂದು ತಿಳಿದು ಬಂದಿದೆ.

Advertisement

ಸೂರಜ್‌ ರೇವಣ್ಣ ವಿರುದ್ಧ ದಾಖಲಾಗಿರುವ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ, ಶೀಘ್ರದಲ್ಲೇ ಅವರನ್ನು ಬೌರಿಂಗ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲು ಸಿಐಡಿ ಮುಂದಾಗಿದೆ. ಈಗಾಗಲೇ ಸಂತ್ರಸ್ತನ ವಿಚಾರಣೆ ಹಾಗೂ ವೈದ್ಯಕೀಯ ಪರೀಕ್ಷೆಯನ್ನು ಪೊಲೀಸರು ನಡೆಸಿ ಅದಕ್ಕೆ ಸಂಬಂಧಿಸಿದ ಕೆಲವು ವರದಿಯನ್ನೂ ಪಡೆದಿದ್ದಾರೆ. ಸೂರಜ್‌ ವಿರುದ್ಧ ಸಲಿಂಗಕಾಮ ಆರೋಪ ಬಂದಿರುವುದರಿಂದ, ಆರೋಪಿಗೆ ಸಲಿಂಗಕಾಮ ಸಹಜವಾದುದೇ, ಸಂತ್ರಸ್ತನ ಮೇಲೆ ಲೈಂಗಿಕ ಆಕ್ರಮಣ ನಡೆಸಿರುವ ಸಾಧ್ಯತೆಗಳಿವೆಯೇ, ಆರೋಪಿ ಸೂರಜ್‌ ರೇವಣ್ಣ, ಪುರುಷರ ಜತೆಗೆ ಲೈಂಗಿಕ ಕ್ರಿಯೆ ನಡೆಸಬಲ್ಲನೇ ಎಂಬಿತ್ಯಾದಿ ಅಂಶಗಳನ್ನು ಈ ಪರೀಕ್ಷೆಗಳ ಮೂಲಕ ಸಾಕ್ಷ್ಯ ಸಮೇತ ಪತ್ತೆ ಹಚ್ಚಲಾಗುತ್ತದೆ. ಇಲ್ಲಿ ಸಂತ್ರಸ್ತ ಹಾಗೂ ಆರೋಪಿ ಇಬ್ಬರ ವೈದ್ಯಕೀಯ ಪರೀಕ್ಷೆಯ ವರದಿಯೂ ಪ್ರಕರಣದ ಮುಂದಿನ ತನಿಖಾ ದೃಷ್ಟಿಯಿಂದ ಪ್ರಮುಖ ಪಾತ್ರ ಪಡೆಯುತ್ತದೆ.

ಸೂರಜ್‌ಗೆ ಪ್ರಶ್ನೆಗಳ ಮೇಲೆ ಪ್ರಶ್ನೆ:
ಸೂರಜ್‌ ರೇವಣ್ಣ ವಿರುದ್ಧ ದಾಖಲಾದ ಎಫ್ಐಆರ್‌ನಲ್ಲಿದ್ದ ಅಂಶಗಳನ್ನು ಉಲ್ಲೇಖೀಸಿ ಸಿಐಡಿ ಪೊಲೀಸರು ಅವರಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಸೂಕ್ತ ರೀತಿಯಲ್ಲಿ ಉತ್ತರಿಸಲಾಗದೇ ಸೂರಜ್‌ ರೇವಣ್ಣ ಗೊಂದಲದ ಹೇಳಿಕೆ ನೀಡಿದ್ದಾರೆ. ಮುಂದೆ ಇನ್ನಷ್ಟು ಕೂಲಂಕಷವಾಗಿ ವಿಚಾರಣೆ ನಡೆಸಿ ರಹಸ್ಯ ಕೆದಕಲು ಸಿಐಡಿ ಸಿದ್ಧತೆ ನಡೆಸಿದ್ದು ಇದಕ್ಕೆ ಸಂಬಂಧಿಸಿದ ಕೆಲ ಸಾಕ್ಷ್ಯ ಕಲೆ ಹಾಕಲಾಗುತ್ತಿದೆ.

ಒಂದೇ ಕಟ್ಟಡದಲ್ಲಿ ಅಣ್ತಮ್ಮ ವಿಚಾರಣೆ
ತಮ್ಮ ಪ್ರಜ್ವಲ್‌ ರೇವಣ್ಣನನ್ನು ಎಸ್‌ಐಟಿ ಪೊಲೀಸರು ಸಿಐಡಿ ಕಚೇರಿಯ ಆವರಣದಲ್ಲಿರುವ ತಮ್ಮ ಕಚೇರಿಗೆ ಕರೆ ತಂದು ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಅಣ್ಣ ಸೂರಜ್‌ ರೇವಣ್ಣ ಸಹ ಇದೇ ಕಚೇರಿಯಲ್ಲಿ ಸಿಐಡಿಯಿಂದ ವಿಚಾರಣೆ ಎದುರಿಸುತ್ತಿದ್ದಾರೆ. ಇಬ್ಬರೂ ಸಿಐಡಿ ಕಚೇರಿಯ ಒಂದೇ ಕಟ್ಟಡದಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಸಿಬ್ಬಂದಿ ಕೊಟ್ಟ ಆಹಾರ ಸೇವಿಸಿ ಮಂಗಳವಾರ ನಿದ್ದೆಗೆ ಜಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next