ನವದೆಹಲಿ: ಪ್ರಾದೇಶಿಕ ಭಾಷೆಗಳಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಪ್ರಕಟಿಸುವ ಅಗತ್ಯತೆ ಕುರಿತು ಸಿಜೆಐ ಡಿ.ವೈ.ಚಂದ್ರಚೂಡ್ ಅವರ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿ ಸಿದ್ದಾರೆ.
ಮುಂಬೈನಲ್ಲಿನಲ್ಲಿ ಮಾತನಾಡಿದ್ದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಈ ಬಗ್ಗೆ ಮಾತನಾಡಿದ್ದರು. ಮುಖ್ಯ ನ್ಯಾಯಮೂರ್ತಿ ಅವರ ಪ್ರಸ್ತಾವನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ ಪ್ರಧಾನಿ “ಪ್ರಾದೇಶಿಕ ಭಾಷೆಗಳಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಪ್ರಕಟಿಸುವ ಅಗತ್ಯತೆ ಬಗ್ಗೆ ಆಗಬೇಕಾದ ಕಾರ್ಯಗಳ ಕುರಿತು ಸಿಜೆಐ ಡಿ.ವೈ.ಚಂದ್ರಚೂಡ್ ಒತ್ತಿ ಹೇಳಿದ್ದರು. ಇದಕ್ಕಾಗಿ ಬಳಸಬೇಕಾದ ತಂತ್ರಜ್ಞಾನ ಕುರಿತು ಸಹ ಸಲಹೆ ನೀಡಿದ್ದರು. ಇವರ ಈ ಯೋಚನೆ ಶ್ಲಾಘನೀಯವಾದದು. ಇದರಿಂದ ಅನೇಕ ಜನರಿಗೆ, ವಿಶೇಷವಾಗಿ ಯುವಜನಾಂಗಕ್ಕೆ ಸಹಕಾರಿಯಾಗಲಿದೆ,’ ಎಂದು ತಿಳಿಸಿದ್ದಾರೆ.