ಹೊಸದಿಲ್ಲಿ: ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವ ವಿಷಯದ ಕುರಿತು ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ ಬಾಕಿ ಉಳಿದಿರುವ ಎಲ್ಲ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವರ್ಗಾಯಿಸಿಕೊಂಡಿದೆ.
Advertisement
ಜತೆಗೆ ಫೆ. 15ರೊಳಗೆ ಎಲ್ಲ ಅರ್ಜಿಗಳಿಗೆ ಜಂಟಿ ಉತ್ತರವನ್ನು ಸಲ್ಲಿಸುವಂತೆ ಕೇಂದ್ರ ಸರಕಾರಕ್ಕೆ ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಸೂಚಿಸಿದೆ.
ಎಲ್ಲ ಅರ್ಜಿಗಳನ್ನು ಮಾರ್ಚ್‌ನಲ್ಲಿ ವಿಚಾರಣೆಗೆ ಪರಿಗಣಿಸುವುದಾಗಿಯೂ ತಿಳಿಸಿದೆ.