Advertisement

ಸಿಬಿಎಸ್‌ಇ ಫ‌ಲಿತಾಂಶ: ಡಿ.6ಕ್ಕೆ ವಿದ್ಯಾರ್ಥಿಗಳ ಅರ್ಜಿ ವಿಚಾರಣೆ

07:05 PM Nov 22, 2021 | Team Udayavani |

ನವದೆಹಲಿ: ಆರಂಭಿಕ ಫ‌ಲಿತಾಂಶವನ್ನೇ ಪರಿಗಣಿಸುವಂತೆ ಸಿಬಿಎಸ್‌ಇಗೆ ನಿರ್ದೇಶಿಸಬೇಕೆಂದು ಕೋರಿ 12ನೇ ತರಗತಿಯ ಕೆಲವು ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿಯನ್ನು ಡಿ.6ರಂದು ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ.

Advertisement

30:30:40ರ ಅನುಪಾತದಲ್ಲಿ ಮೌಲ್ಯಮಾಪನ ಮಾಡಿ ಸಿಬಿಎಸ್‌ಇ 12ನೇ ತರಗತಿಯ ಆರಂಭಿಕ ಫ‌ಲಿತಾಂಶವನ್ನು ಪ್ರಕಟಿಸಿತ್ತು.

ಆದರೆ, ಈ ಫ‌ಲಿತಾಂಶದಲ್ಲಿ ಪಾಸ್‌ ಆಗಿದ್ದರೂ, ತೃಪ್ತರಾಗದ ಕೆಲವು ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಸುಧಾರಿಸುವ ಸಲುವಾಗಿ ಮತ್ತೂಮ್ಮೆ ಪರೀಕ್ಷೆ ಬರೆದಿದ್ದರು.

ಆದರೆ, ಅವರಲ್ಲಿ ಕೆಲವರು ಎರಡನೇ ಬಾರಿಯ ಪರೀಕ್ಷೆಯಲ್ಲಿ ಫೇಲ್‌ ಆಗಿದ್ದು, ಕೆಲವರು ಕಡಿಮೆ ಅಂಕ ಗಳಿಸಿದ್ದಾರೆ.

ಇದನ್ನೂ ಓದಿ:ತೀವ್ರ ವಿರೋಧಕ್ಕೆ ಮಣಿದ ಆಂಧ್ರಪ್ರದೇಶ ಸಿಎಂ; ವಿವಾದಿತ 3 ರಾಜಧಾನಿಗಳ ಮಸೂದೆ ವಾಪಸ್

Advertisement

ಈ ಹಿನ್ನೆಲೆಯಲ್ಲಿ ತಮ್ಮ ಆರಂಭಿಕ ಫ‌ಲಿತಾಂಶವನ್ನೇ ಪರಿಗಣಿಸಬೇಕು ಎಂದು ಕೋರಿ 11 ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next