Advertisement

ಬಿಸಿಸಿಐ ಸಂವಿಧಾನ ತಿದ್ದುಪಡಿಗೆ ಸುಪ್ರೀಂ ಕೋರ್ಟ್‌ ಅಸ್ತು

12:43 AM Sep 15, 2022 | Team Udayavani |

ಹೊಸದಿಲ್ಲಿ: ಮಂಡಳಿ ಅಧಿಕಾರಿಗಳ ಅವಧಿ ವಿಸ್ತರಣೆಗೆ ಸಂಬಂಧಿಸಿದ ಹಳೆಯ ನಿಯಮಗಳನ್ನು ಸಡಿಸಲಿಸಿ ತನ್ನ ಸಂವಿಧಾನವನ್ನು ತಿದ್ದುಪಡಿಗೊಳಿಸಲು ಬಿಸಿಸಿಐಗೆ ಬುಧವಾರ ಸುಪ್ರೀಂ ಕೋರ್ಟ್‌ ಅನುಮತಿ ನೀಡಿದೆ.

Advertisement

ಇದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಹಾಗೂ ಕಾರ್ಯದರ್ಶಿ ಜೈ ಶಾ ಅವರಿಗೆ ಭಾರೀ ಅನುಕೂಲವಾಗಿ ಪರಿಣಮಿಸಿದೆ. ಇಬ್ಬರಿಗೂ ಮುಂದಿನ 3 ವರ್ಷಗಳ ಕಾಲ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಅಧಿಕಾರದಲ್ಲಿ ಉಳಿಯಲು ದಾರಿ ಸುಗಮಗೊಂಡಿದೆ.

ಕ್ರಿಕೆಟ್‌ ಮಂಡಳಿಯ ಸಂವಿಧಾನ ಬದಲಾವಣೆ ಕುರಿತು ಬಿಸಿಸಿಐ 3 ವರ್ಷಗಳ ಹಿಂದೆ ಮೇಲ್ಮನವಿ ಸಲ್ಲಿಸಿತ್ತು. ಇದಕ್ಕೆ ಸಂಬಂಧಿಸಿದ ಮಹತ್ವದ ತೀರ್ಪು ಬುಧವಾರ ಪ್ರಕಟಗೊಂಡಿತು.

ಈ ತೀರ್ಪಿನಂತೆ ಸೌರವ್‌ ಗಂಗೂಲಿ ಮತ್ತು ಜೈ ಶಾ ಅವರನ್ನು ತತ್‌ಕ್ಷಣವೇ ಜಾರಿಗೆ ಬರುವಂತೆ ತಮ್ಮ ಹುದ್ದೆಗಳಲ್ಲಿ ಮುಂದಿನ 3 ವರ್ಷ ಮುಂದುವರಿಯಲು ನಿರ್ಧರಿಸಲಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next