ಹೊಸದಿಲ್ಲಿ: ಕಳೆದ ಅ. 10 ಹಾಗೂ ನ. 3ರಂದು ನೂತನ ಸಂವಿಧಾನ ಅಳವಡಿಕೆ ಮತ್ತು ಕಾರ್ಯಕಾರಿ ಸಮಿತಿ ರಚನೆ ಬಗ್ಗೆ ತಾನು ನೀಡಿದ್ದ ಆದೇಶವನ್ನು ಐಒಎ (ಭಾರತೀಯ ಒಲಿಂಪಿಕ್ ಸಂಸ್ಥೆ) ಚಾಚೂ ತಪ್ಪದೆ ಪಾಲಿಸಬೇಕೆಂದು ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದೆ.
ನಿವೃತ್ತ ನ್ಯಾಯಮೂರ್ತಿ ಎಲ್.ಎನ್. ರಾವ್ ಮಾಡಿರುವ ಸಂವಿಧಾನವನ್ನೇ ಅಳವಡಿಸಿಕೊಳ್ಳಬೇಕು. ಹಾಗೆಯೇ ಚುನಾವಣೆಯನ್ನು ಡಿ. 10ರಂದೇ ನಡೆಸಬೇಕು. ಇದರಲ್ಲಿ ಯಾವುದೇ ವ್ಯತ್ಯಾಸವಾದರೂ ಸ್ವೀಕಾರಾರ್ಹವಲ್ಲ ಎಂದು ಪೀಠ ಕಟುವಾಗಿ ಹೇಳಿದೆ.
ಇದೇ ವೇಳೆ ಐಒಎ ನ್ಯಾಯಾಂಗ ನಿಂದನೆ ಮಾಡಿದೆ ಎಂಬ ರಾಹುಲ್ ಮೆಹ್ರಾ ಅರ್ಜಿಯನ್ನೂ ನ್ಯಾಯಪೀಠ ಮುಗಿಸಿದೆ.
ನ. 10ರ ಐಒಎ ಸರ್ವಸದಸ್ಯರ ಸಭೆಯಲ್ಲಿ ಎಲ್.ಎನ್. ರಾವ್ ರಚಿಸಿದ ಸಂವಿಧಾನವನ್ನು ಅಳವಡಿಸಿಕೊಂಡಿಲ್ಲ, ಅದರಲ್ಲಿ ತಿದ್ದುಪಡಿ ಮಾಡಲಾಗಿದೆ ಮೆಹ್ರಾ ಆರೋಪಿಸಿದ್ದರು.