ನವ ದೆಹಲಿ : ದೇಶದಲ್ಲಿ ಗಣನೀಯವಾಗಿ ಹೆಚ್ಚುತ್ತಿರು ಕೋವಿಡ್ ರೂಪಾಂತರಿ ಅಲೆಯ ಬಗ್ಗೆ ಸುಪ್ರೀಂ ಕೋರ್ಟ್ ಗಂಭೀರ ನಿಲುವು ತಳೆದಿದ್ದು, ಕೋವಿಡ್ ಸೋಂಕಿತರಿಗೆ ನೀಡುತ್ತಿರುವ ಚಿಕಿತ್ಸೆ ಬಗ್ಗೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬ್ಡೆ ಹಾಗೂ ನ್ಯಾಯಾಧೀಶರಾದ ಎಲ್ ನಾಗೇಶ್ವರ ರಾವ್, ಎಸ್ ರವಿಂದ್ರ ಭಟ್ ಅವರಿದ್ದ ನ್ಯಾಯಪಿಠ ಕೇಂದ್ರ ಸರ್ಕಾರಕ್ಕೆ ಈ ಕುರಿತು ನೋಟಿಸ್ ಜಾರಿ ಮಾಡಿದೆ.
ಓದಿ : ಇರಬೇಕು ಅಮ್ಮ, ಮಗು ಕೃಷ್ಣ ಯಶೋದೆಯರಂತೆ..! ‘ಪಕ್ಕಾ ಫಾರಿನ್ ಕಲ್ಚರ್’ ಅನ್ನಿಸುವಂತಲ್ಲ..!
ವೈದ್ಯಕೀಯ ಆಮ್ಲಜನಕದ ಪೂರೈಕೆ, ಅಗತ್ಯ ಔಷಧಗಳ ಪೂರೈಕೆ, ಲಸಿಕೆ ವಿತರಣೆಯ ವಿಧಾನ ಹಾಗೂ ಬಗೆ, ಲಾಕ್ ಡೌನ್ ಘೋಷಣೆ ಮಾಡುವಲ್ಲಿ ರಾಜ್ಯ ಸರ್ಕಾರದ ಅಧಿಕಾರ, ಎಂಬ ನಾಲ್ಕು ವಿಚಾರಗಳ ಬಗ್ಗೆ ದೇಶ ಒಂದು ವಿಧಾನದಲ್ಲಿ ನಡೆಯಬೇಕಿದೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬ್ಡೆ ತಿಳಿಸಿದ್ದಾರೆ.
Related Articles
ಇನ್ನು, ನಾಳೆ ಈ ಕುರಿತಾಗಿ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ನಡೆಯಲಿದ್ದು, ಸುಪ್ರೀಂ ಕೋರ್ಟಿಗೆ ಕೇಂದ್ರ ಸರ್ಕಾರ ಉತ್ತರಿಸಬೇಕಿದೆ.
ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ ಮಾರಣಾಂತಿಕ ಕೋವಿಡ್ 2ನೇ ಅಲೆ ದಾಖಲೆಯ 3.14 ಲಕ್ಷ ಪ್ರಕರಣ ಪತ್ತೆಯಾಗಿದ್ದು, ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 1.59 ಕೋಟಿಗೆ ಏರಿಕೆಯಾಗಿದೆ. ಒಂದೇ ದಿನದಲ್ಲಿ 2,104 ಮಂದಿ ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ(ಏಪ್ರಿಲ್ 22) ಬಿಡುಗಡೆ ಮಾಡಿರುವ ಅಂಕಿಅಂಶದಲ್ಲಿ ತಿಳಿಸಿದೆ.
ಓದಿ : ದಾವಣಗೆರೆ: ಅಕ್ರಮವಾಗಿ ರೆಮಿಡಿಸಿವರ್ ಇಂಜೆಕ್ಷನ್ ಮಾರುತ್ತಿದ್ದ ಇಬ್ಬರು ಪೊಲೀಸ್ ವಶಕ್ಕೆ