ವಾಷಿಂಗ್ಟನ್: ಮಹತ್ವದ ಬೆಳವಣಿಗೆಯೊಂದರಲ್ಲಿ, ನ್ಯೂಯಾರ್ಕ್ ಸ್ಥಳೀಯಾಡಳಿತ ಜಾರಿಗೊಳಿಸಿರುವ ನೂತನ ಶಸ್ತ್ರಾಸ್ತ್ರ ಲೈಸನ್ಸ್ ಕಾನೂನನ್ನು ಅಮೆರಿಕದ ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ತಾವು ಶಸ್ತ್ರಾಸ್ತ್ರ ಹೊಂದಲು ಸೂಕ್ತವಾದ ಕಾರಣ ನೀಡಿ, ಪರವಾನಗಿ ಪಡೆಯುವುದನ್ನು ಹೊಸ ಕಾನೂನಿನಲ್ಲಿ ಕಡ್ಡಾಯಗೊಳಿಸಲಾಗಿತ್ತು. ಆದರೆ, ಈ ಅಂಶವನ್ನು ನ್ಯಾಯಪೀಠ ಮಾನ್ಯ ಮಾಡಿಲ್ಲ.
ಅಮೆರಿಕದ ಪ್ರತಿಯೊಬ್ಬ ನಾಗರಿಕನು ತನ್ನ ಸಂರಕ್ಷಣೆಗಾಗಿ ಶಸ್ತ್ರಾಸ್ತ್ರಗಳನ್ನು ಖರೀದಿಸುವುದು ಆತನಿಗೆ ಸಂವಿಧಾನವೇ ನೀಡಿರುವ ಹಕ್ಕು. ಹಾಗಾಗಿ, ಅದನ್ನು ಉಲ್ಲಂ ಸುವಂಥ ಕಾನೂನನ್ನು ಪ್ರೋತ್ಸಾಹಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಅಮೆರಿಕದಲ್ಲಿ ಹಲವಾರು ಕಡೆ ಶೂಟೌಟ್ ನಡೆದ ಹಿನ್ನೆಲೆಯಲ್ಲಿ ಅಮೆರಿಕ ಸಂಸತ್ತು, ನಾಗರಿಕ ಶಸ್ತ್ರಾಸ್ತ್ರ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ಇದರ ನಡುವೆಯೇ, ಸುಪ್ರೀಂಕೋರ್ಟ್ ಈ ರೀತಿ ಆದೇಶ ನೀಡಿರುವುದು ಅಮೆರಿಕ ಸಂಸತ್ತಿನ ಪ್ರಯತ್ನಕ್ಕೆ ಹಿನ್ನಡೆ ತರಲಿದೆಯೇ ಎಂಬುದರ ಬಗ್ಗೆ ಕುತೂಹಲ ಮೂಡಿಸಿದೆ.