Advertisement

ಇ.ಡಿ.ನಿರ್ದೇಶಕರ ಸೇವೆ ವಿಸ್ತರಣೆ : ಅರ್ಜಿ ತಿರಸ್ಕರಿಸಿದ ಸುಪ್ರೀಂ

09:23 PM Sep 08, 2021 | Team Udayavani |

ನವದೆಹಲಿ: ಜಾರಿ ನಿರ್ದೇಶನಾಲಯ (ಇ.ಡಿ)ದ ನಿರ್ದೇಶಕರಾಗಿರುವ ಸಂಜಯ ಕುಮಾರ್‌ ಮಿಶ್ರಾ ಅವರ ಸೇವಾವಧಿಯನ್ನು 2020 ನ.13ರಿಂದ ಮೂರು ವರ್ಷಗಳ ಕಾಲ ವಿಸ್ತರಿಸಿದ ಕೇಂದ್ರ ಕ್ರಮಕ್ಕೆ ಸುಪ್ರೀಂಕೋರ್ಟ್‌ ಮಾನ್ಯತೆ ನೀಡಿದೆ.

Advertisement

ಆದರೆ, ಹಾಲಿ ಅವಧಿ ಮುಕ್ತಾಯದ ಬಳಿಕ ಮಿಶ್ರಾ ಸೇವಾವಧಿ ಮತ್ತೂಂದು ಬಾರಿ ವಿಸ್ತರಣೆ ಮಾಡಕೂಡದು ಎಂದು ನ್ಯಾ. ನಾಗೇಶ್ವರ ರಾವ್‌ ನೇತೃತ್ವದ ನ್ಯಾಯಪೀಠ ಆದೇಶ ನೀಡಿದೆ.

ಸದ್ಯ ನಡೆಯುತ್ತಿರುವ ಪ್ರಮುಖ ಪ್ರಕರಣಗಳ ತನಿಖೆ ಮುಕ್ತಾಯಗೊಳಿಸುವ ನಿಟ್ಟಿನಲ್ಲಿ ಕೇಂದ್ರದ ನಿರ್ಧಾರ ಸರಿಯಾಗಿಯೇ ಇದೆ ಎಂದು ನ್ಯಾಯಪೀಠ ಪ್ರತಿಪಾದಿಸಿತು. ನಿವೃತ್ತಿಯಾಗಲಿರುವ ಅಧಿಕಾರಿಗಳ ಸೇವಾವಧಿಯನ್ನು ಅತ್ಯಂತ ಅಪರೂಪ ಪ್ರಕರಣಗಳಲ್ಲಿ ಮಾತ್ರ ವಿಸ್ತರಿಸಬಹುದು ಎಂದು ಕೋರ್ಟ್‌ ಹೇಳಿದೆ.

ಇದನ್ನೂ ಓದಿ :ಉತ್ತರಾಖಂಡ ರಾಜ್ಯಪಾಲರ ರಾಜೀನಾಮೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next