Advertisement

ಸಿಬಿಐ ನಿರ್ದೇಶಕರಾಗಿ ಆಲೋಕ್‌ ವರ್ಮಾ ಮರು ನೇಮಕ ಮಾಡಿದ ಸುಪ್ರೀಂ

06:05 AM Jan 08, 2019 | udayavani editorial |

ಹೊಸದಿಲ್ಲಿ : ಸುಪ್ರೀಂ ಕೋರ್ಟ್‌ ಇಂದು ಮಂಗಳವಾರ ಕೇಂದ್ರ ಸರಕಾರದ ಅಕ್ಟೋಬರ್‌ 23ರ ಆದೇಶವನ್ನು ಅನೂರ್ಜಿತಗೊಳಿಸಿ ಸಿಬಿಐ ನಿರ್ದೇಶಕರನ್ನಾಗಿ ಆಲೋಕ್‌ ಕುಮಾರ್‌ ವರ್ಮಾ ಅವರನ್ನು ಹುದ್ದೆಯಲ್ಲಿ ಪುನಃಸ್ಥಾಪಿಸಿದೆ. 

Advertisement

ಕೇಂದ್ರ ಸರಕಾರ ಅ.23ರ ತನ್ನ ಆದೇಶದ ಮೂಲಕ ಆಲೋಕ್‌ ಕುಮಾರ್‌ ವರ್ಮಾ  ಅವರ ಅಧಿಕಾರವನ್ನು ಕಿತ್ತುಕೊಂಡು ಅವರನ್ನು ಕಡ್ಡಾಯ ರಜೆಯಲ್ಲಿ ಕಳುಹಿಸಿತ್ತು. 

ಸುಪ್ರೀಂ ಕೋರ್ಟ್‌ ಇಂದು ವರ್ಮಾ ಅವರು ಸಿಬಿಐ ನಿರ್ದೇಶಕರ ಹುದ್ದೆಯಲ್ಲಿ ಪುನಃಸ್ಥಾಪಿಸಿರುವ ಹೊರತಾಗಿಯೂ ಯಾವುದೇ ಪ್ರಮುಖ ನೀತಿ ನಿರ್ಧಾರ ಕೈಗೊಳ್ಳದಂತೆ ನಿರ್ಬಂಧಿಸಿದೆ.

ವರ್ಮಾ ವಿರುದ್ಧ  ಸಿವಿಸಿ ನಡೆಸುತ್ತಿರುವ ಅವರ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ತನಿಖೆಯನ್ನು ಮುಗಿಸುವ ತನಕ ಈ ನಿರ್ಬಂಧ ಜಾರಿಯಲ್ಲಿರುತ್ತದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next