Advertisement

ಗಡಿ ಧ್ವಂಸ ಪ್ರಕರಣದ ಮಾಹಿತಿ ಕೇಳಿ ಸುಪ್ರೀಂ ಆದೇಶ

06:40 AM Dec 07, 2017 | Team Udayavani |

ಬಳ್ಳಾರಿ: ಅಕ್ರಮ ಗಣಿಗಾರಿಕೆಯಿಂದ ಧ್ವಂಸಗೊಂಡಿದ್ದರೂ ಇದುವರೆಗೂ ಇತ್ಯರ್ಥವಾಗದ ಕರ್ನಾಟಕ-ಆಂಧ್ರಪ್ರದೇಶ ಗಡಿ ಗುರುತಿಸುವಿಕೆ ಕಾರ್ಯಕ್ಕೆ ಇರುವ ಅಡ್ಡಿ ಆತಂಕಗಳೇನು? ವಿವಾದ ಬಗೆಹರಿಸುವ ತಡವಾಗುತ್ತಿರುವ ಬಗ್ಗೆ ತಿಳಿಸುವಂತೆ ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠ ಸರ್ವೇ ಆಫ್‌ ಇಂಡಿಯಾಗೆ ಆದೇಶಿಸಿದೆ.

Advertisement

ಗಡಿ ಸಮಸ್ಯೆ ಕುರಿತಂತೆ ಆಂಧ್ರ ಸರ್ಕಾರ ಹಾಗೂ ಓಬಳಾಪುರಂ ಗಣಿ ಕಂಪನಿಗಳ ನಡುವೆ ಇರುವ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾ.ಮದನ್‌ ಬಿ.ಲೋಕೂರ್‌, ನ್ಯಾ. ದೀಪಕ್‌ ಗುಪ್ತಾ ಅವರಿದ್ದ ವಿಭಾಗೀಯ ಪೀಠ ಕಳೆದ ನ.14ರಂದು ಈ ಕುರಿತು ವಿಚಾರಣೆ ನಡೆಸಿ ಈ ಮಹತ್ವದ ಆದೇಶ ಹೊರಡಿಸಿದೆ.

ಆದೇಶದಲ್ಲೇನಿದೆ?: ಅಕ್ರಮ ಗಣಿಗಾರಿಕೆ ಕುರಿತ ಪ್ರಕರಣದಲ್ಲಿ ಕರ್ನಾಟಕ-ಆಂಧ್ರ ರಾಜ್ಯಗಳ ನಡುವಿನ ಗಡಿ ಗುರುತಿಸುವಿಕೆ ಇತ್ಯರ್ಥವಾಗದೆ ಉಳಿದಿದೆ. ಈ ಕುರಿತಂತೆ ಸರ್ವೇ ಆಫ್‌ ಇಂಡಿಯಾದ ಉನ್ನತ ಅಧಿಕಾರಿಗಳು ವಿಚಾರಣೆಗೆ ಹಾಜರಾಗಬೇಕಿದೆ. ಜೊತೆಗೆ, ಗಡಿ ಗುರುತಿಸುವಿಕೆ ಕುರಿತಂತೆ ಯಾವಾಗ ಈ ಪ್ರಕರಣವನ್ನು ಇತ್ಯರ್ಥಗೊಳಿಸಲಾಗುವುದು ಎನ್ನುವುದನ್ನು ತಿಳಿಸಬೇಕು ಹಾಗೂ ಈ ಕುರಿತಂತೆ ಇರಬಹುದಾದ ಅಡ್ಡಿ ಗಳೇನಾದರೂ ಇದ್ದರೆ ಡಿ. 8ರೊಳಗೆ ಸಮಗ್ರ ಮಾಹಿತಿ ಸಲ್ಲಿಸುವಂತೆ ವೀಭಾಗೀಯ ಪೀಠ ಸೂಚಿಸಿದೆ.

ಪ್ರಕರಣದ ಹಿನ್ನೆಲೆ: ಬಳ್ಳಾರಿ ಜಿಲ್ಲೆಯಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದ 32 ಕಿ.ಮೀ. ಉದ್ದದ ಗಡಿ ಭಾಗವಿದ್ದು, ಇದರಲ್ಲಿ ಸಮೃದ್ಧ ಕಬ್ಬಿಣದ ಅದಿರಿನ ನಿಕ್ಷೇಪಗಳಿವೆ. 2004ರಲ್ಲಿ ಆಂಧ್ರದಲ್ಲಿ ಗಣಿಗಾರಿಕೆ ನಡೆಸಲು ಪರವಾನಗಿ ಪಡೆದ ಓಬಳಾಪುರಂ ಮೈನಿಂಗ್‌ ಕಂಪನಿ ಈ ಗಡಿ ಭಾಗದಲ್ಲಿರುವ ಅನಂತಪುರಂ ಜಿಲ್ಲೆಯ ಮಲಪನಗುಡಿ, ಸಿದ್ದಾಪುರ ಹಾಗೂ ಬಳ್ಳಾರಿ ಜಿಲ್ಲೆಯ ತುಮಟಿ, ವಿಟuಲಾಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಸುಮಾರು 1000 ಮೀ. ಉದ್ದ, 500 ಮೀ. ಅಗಲ ಗಡಿ ಪ್ರದೇಶವನ್ನು ಧ್ವಂಸಗೊಳಿಸಿತ್ತು ಎಂದು ಆರೋಪಿಸಲಾಗಿತ್ತು.

ಇನ್ನೊಂದು ಕಡೆ ಕರ್ನಾಟಕದ ಬೆಳಗಲ್ಲು, ಹಲಕುಂದಿ, ಹೊನ್ನಳ್ಳಿ-ಆಂಧ್ರಪ್ರದೇಶದ ಓಬಳಾಪುರಂ, ಸಿದ್ದಾಪುರ
ಗಡಿ ಪ್ರದೇಶದಲ್ಲಿಯೂ 1000 ಮೀ., ಉದ್ದ 500ಮೀ., ಅಗಲದ ಗಡಿ ಭಾಗವನ್ನು ಧ್ವಂಸಗೊಳಿಸಿತ್ತು ಎಂಬ ಆರೋಪವಿದೆ.

Advertisement

ಈ ಕುರಿತಂತೆ ಅಕ್ರಮ ಗಣಿಗಾರಿಕೆ ಪ್ರಕರಣ ದಾಖಲಿಸಿರುವ ಸಮಾಜ ಪರಿವರ್ತನಾ ಸಮುದಾಯಗಳ ಜೊತೆಗೆ, ಆಂಧ್ರಪ್ರದೇಶ ಸರ್ಕಾರ, ದಿ|ಎಸ್‌.ಕೆ. ಮೋದಿ ಒಡೆತನದ ವಿಜಿಎಂ ಮೈನಿಂಗ್‌ ಕಂಪನಿ ಮುಂತಾದವು ಸುಪ್ರೀಂ ಕೋರ್ಟಿನಲ್ಲಿ ಪ್ರಕರಣ ದಾಖಲಿಸಿದ್ದವು.

ಬಗೆ ಹರಿಯದ ವಿವಾದ: ಸುಪ್ರೀಂ ಕೋರ್ಟ್‌ 2013ರಲ್ಲಿ ಸರ್ವೇ ಆಫ್‌ ಇಂಡಿಯಾ(ಎಸ್‌ಒಐ)ಗೆ ಆದೇಶ ನೀಡಿ ಉಭಯ ರಾಜ್ಯಗಳ ಗಡಿ ಗುರುತಿಸಿ ಸಮಸ್ಯೆ ಇತ್ಯರ್ಥಗೊಳಿಸುವಂತೆ ಸೂಚಿಸಿತ್ತು. ಅದೇ ವರ್ಷಎಸ್‌ಒಐ ಉನ್ನತಾಧಿಕಾರಿ ಸ್ವರ್ಣ ಸುಬ್ಟಾರಾವ್‌ ನೇತೃತ್ವದ ಸಮಿತಿ ರಚಿಸಲಾಗಿತ್ತು. ಆದರೆ, ಬೆದರಿಕೆ ಹಿನ್ನೆಲೆಯಲ್ಲಿ ಅವರು ಸಮೀಕ್ಷೆಗೆ ಆಗಮಿಸಲಿಲ್ಲ. ನಂತರ ಮತ್ತೂಬ್ಬ ಅಧಿಕಾರಿ ಎ.ಕೆ. ಪಾದ ನೇತೃತ್ವದ ಸಮಿತಿ ಸಮೀಕ್ಷೆಗೆ ಆಗಮಿಸಿತ್ತು. ಬಳಿಕ ಸಮಸ್ಯೆ ಇತ್ಯರ್ಥಕ್ಕೆ ಕರ್ನಾಟಕ-ಆಂಧ್ರಪ್ರದೇಶಗಳ ಜಂಟಿ ಸಮಿತಿಯನ್ನು ರಚಿಸಲಾಗಿತ್ತು. ಆದರೂ ಈ ಕುರಿತು ಹೊಸ ಬೆಳವಣಿಗೆಗಳು ಆಗದ ಹಿನ್ನೆಲೆಯಲ್ಲಿ ಸ್ವರ್ಣ ಸುಬ್ಟಾರಾವ್‌ ನೇತೃತ್ವದ ಮತ್ತೂಂದು ತಂಡ ಆಗಮಿಸಿ ಸಮೀಕ್ಷೆ ನಡೆಸಿ ಸುಪ್ರೀಂ ಕೋರ್ಟಿಗೆ ವರದಿ ಸಲ್ಲಿಸಿತ್ತು. ವರದಿ ಸಲ್ಲಿಕೆಯಾದ ನಂತರವೂ ಈ ವಿವಾದ ಬಗೆಹರಿದಿಲ್ಲ. ಹೀಗಾಗಿ ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠ ಮತ್ತೂಮ್ಮೆ ವಿವಾದ ಬಗೆಹರಿಸಲು ಆಗಿರುವ ಅಡ್ಡಿಗಳ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿದೆ.

ಗಡಿ ಭಾಗ ಧ್ವಂಸ ಪ್ರಕರಣ ಇತ್ಯರ್ಥಗೊಳಿಸಲು ಕರ್ನಾಟಕ ಸರ್ಕಾರಕ್ಕೆ ಇಚ್ಛಾ ಶಕ್ತಿ ಇಲ್ಲ. ಈ ಕುರಿತು ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ್ದೇನೆ. ಸುಪ್ರೀಂ ಕೋರ್ಟಿನ ಈ ಮಹತ್ವದ ಆದೇಶ ಗಮನಿಸಿದರೆ, ಸರ್ವೇ ಆಫ್‌ ಇಂಡಿ ಯಾದ ಅಧಿಕಾರಿಗಳು ಗಡಿ ಸಮಸ್ಯೆ ಪರಿಶೀಲಿಸಿದರೂ ಸುಪ್ರೀಂ ಕೋರ್ಟಿಗೆ ಈ ಕುರಿತು ವರದಿ ಸಲ್ಲಿಸಿಲ್ಲ ಎನಿಸುತ್ತಿದೆ. ಈ ಆದೇಶದಿಂದ ನಿಷ್ಕ್ರಿಯವಾಗಿದ್ದ ಕ್ರಮ ಗಣಿಗಾರಿಕೆ ಪ್ರಕರಣದ ವಿಚಾರಣೆಗೆ ಕೋರ್ಟ್‌ ಚುರುಕು ಮೂಡಿಸಿದೆ ಎಂಬ ಭಾವನೆ ಮೂಡಿದೆ.
– ಟಪಾಲ್‌ ಗಣೇಶ್‌, ಗಣಿ ಉದ್ಯಮಿ

– ಎಂ.ಮುರಳಿಕೃಷ್ಣ

Advertisement

Udayavani is now on Telegram. Click here to join our channel and stay updated with the latest news.

Next