Advertisement

ಲೈಂಗಿಕ ದೌರ್ಜನ್ಯ ; ಕೆಟ್ಟ ಆಲೋಚನೆಯೇ ಪ್ರಧಾನ ಅಂಶ : ಸುಪ್ರೀಂಕೋರ್ಟ್‌

07:37 PM Nov 18, 2021 | Team Udayavani |

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕಾಯ್ದೆಯಡಿ (ಪೋಕ್ಸೋ) ಉಲ್ಲೇಖೀಸಲಾಗಿರುವ ಲೈಂಗಿಕ ಕಿರುಕುಳದ ವ್ಯಾಖ್ಯಾನವನ್ನು ಸುಪ್ರೀಂಕೋರ್ಟ್‌, ಮಾರ್ಪಾಟು ಮಾಡಿದೆ. ನೇರವಾಗಿ ದೈಹಿಕ ಸ್ಪರ್ಶವಾಗದೇ ನಡೆದಿರುವ ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ಆರೋಪಿಯ ಕೆಟ್ಟ ಆಲೋಚನೆಯನ್ನೇ ಪ್ರಧಾನವಾಗಿ ಪರಿಗಣಿಸಬೇಕು ಎಂದು ಸುಪ್ರೀಂಕೋರ್ಟ್‌ ಹೇಳಿದೆ.

Advertisement

ಈ ಮಾರ್ಪಾಡಿಗೆ ಪ್ರೇರಣೆಯಾಗಿದ್ದು ಬಾಂಬೆ ಹೈಕೋರ್ಟ್‌ನಿಂದ ಹೊರಬಿದ್ದಿದ್ದ ತೀರ್ಪು. 2016ರಲ್ಲಿ ನಡೆದಿದ್ದ ಪ್ರಕರಣವೊಂದರಲ್ಲಿ, 12 ವರ್ಷದ ಬಾಲಕಿಯೊಬ್ಬಳ ಖಾಸಗಿ ಅಂಗಗಳನ್ನು ಆಕೆಯ ಬಟ್ಟೆಯ ಮೇಲೆಯೇ ಸ್ಪರ್ಶಿಸಿದ್ದ ಎಂಬ ಆರೋಪವನ್ನು ಸತೀಶ್‌ (32) ಎಂಬಾತ ಹೊತ್ತಿದ್ದ. ಈ ಪ್ರಕರಣದಲ್ಲಿ ಆರೋಪಿಯು, ಸಂತ್ರಸ್ತೆಯ ಬಟ್ಟೆ ಕಳಚಿ ದೇಹವನ್ನು ಸ್ಪರ್ಶಿಸಿಲ್ಲವಾದ್ದರಿಂದ ಇದು ಲೈಂಗಿಕ ದೌರ್ಜನ್ಯವೆಂದು ಪರಿಗಣಿಸಲಾಗದು ಎಂದು ಹೇಳಿದ್ದ ಬಾಂಬೆ ಹೈಕೋರ್ಟ್‌, ಆರೋಪಿಯನ್ನು ಖುಲಾಸೆಗೊಳಿಸಿತ್ತು.

ಆದರೆ, ಹೈಕೋರ್ಟ್‌ ತೀರ್ಪನ್ನು ಅಲ್ಲಗಳೆದ ಸುಪ್ರೀಂಕೋರ್ಟ್‌ ನ್ಯಾಯಪೀಠ, ನಗ್ನಗೊಳಿಸಿ ಮುಟ್ಟದಿದ್ದರೂ ಆರೋ ಪಿಯು ತನ್ನ ವಾಂಛೆಗಳನ್ನು ಈಡೇರಿಸಿಕೊಳ್ಳಲು ಈ ಕೃತ್ಯ ವೆ ಸ ಗಿ ದ್ದಾನೆ. ಆತನ ಈ ಉದ್ದೇ ಶ ವನ್ನೇ ಪ್ರಧಾನವಾಗಿ ಪರಿಗಣಿಸಬೇಕು ಎಂದು ಹೇಳಿತಲ್ಲದೆ, ಖುಲಾಸೆಗೊಂಡಿದ್ದ ಸತೀಶ್‌ಗೆ 3 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.

ಇದನ್ನೂ ಓದಿ : ಪ್ರಕಾಶ್ ಪಡುಕೋಣೆಗೆ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಜೀವಮಾನ ಸಾಧನೆ ಪ್ರಶಸ್ತಿ

Advertisement

Udayavani is now on Telegram. Click here to join our channel and stay updated with the latest news.

Next