Advertisement

ಬಿಹಾರ ಕ್ರಿಕೆಟ್‌ ಸಂಸ್ಥೆಗೆ ಸುಪ್ರೀಂ ಮಾನ್ಯತೆ: ಕ್ರಿಕೆಟಿಗರಿಗೆ ಶಾಪಮ

09:01 AM Jan 05, 2018 | |

ನವದೆಹಲಿ: ದೀರ್ಘ‌ಕಾಲದಿಂದ ಅಮಾನ್ಯಗೊಂಡಿದ್ದ ಬಿಹಾರ ಕ್ರಿಕೆಟ್‌ ಸಂಸ್ಥೆಗೆ ಸಂತೋಷದ ಸುದ್ದಿ ಸಿಕ್ಕಿದೆ. ಮಹತ್ವದ ತೀರ್ಪು ನೀಡಿರುವ ಸರ್ವೋಚ್ಚ ನ್ಯಾಯಾಲಯ ಬಿಹಾರ ಕ್ರಿಕೆಟ್‌ ಸಂಸ್ಥೆಗೆ ಮಾನ್ಯತೆ ನೀಡುವಂತೆ ಬಿಸಿಸಿಐಗೆ ಆದೇಶ ನೀಡಿದೆ. ಇನ್ನು ಮುಂದೆ ರಣಜಿ ಸೇರಿದಂತೆ ದೇಶದ ಎಲ್ಲ ಪ್ರಮುಖ ಕೂಟಗಳಲ್ಲಿ ಬಿಹಾರವೂ ಪಾಲ್ಗೊಳ್ಳಲು ಸಾಧ್ಯವಾಗಲಿದೆ.

Advertisement

ಈ ಬಗ್ಗೆ ದೀರ್ಘ‌ಕಾಲದಿಂದ ಹೋರಾಟ ನಡೆಸಿದ್ದ ಆದಿತ್ಯ ವರ್ಮಗೆ (ಕ್ರಿಕೆಟ್‌ ಅಸೋಸಿಯೇಷನ್‌ ಆಫ್ ಬಿಹಾರದ ಕಾರ್ಯದರ್ಶಿ) ನಿರಾಸೆಯಾಗಿದೆ. ಬಿಸಿಸಿಐನಲ್ಲಿರುವ ಭ್ರಷ್ಟಾಚಾರದ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದೇ ಅವರಾದರೂ ಅವರ ಬಣಕ್ಕೆ ಅಧಿಕಾರ ಸಿಗದಿರುವುದು ಅವರಿಗೆ ಅನಿರೀಕ್ಷಿತವಾಗಿದೆ.

ನಿಷೇಧಗೊಂಡಿದ್ದು ಯಾಕೆ?: ಬಿಹಾರ ಕ್ರಿಕೆಟ್‌ ಸಂಸ್ಥೆಗೆ ಲಾಲು ಪ್ರಸಾದ್‌ ಯಾದವ್‌ ಅಧ್ಯಕ್ಷರಾಗಿದ್ದರು. ಅವರ ಅವಧಿಯಲ್ಲಿ ಕ್ರಿಕೆಟ್‌
ಅಧಃಪತನದತ್ತ ಮುನ್ನುಗ್ಗಿದೆ ಎಂದು ಆರೋಪಿಸಿ ಕೀರ್ತಿ ಆಜಾದ್‌ (ಸದ್ಯ ಬಿಜೆಪಿ ಸಂಸದ) 2009ರಲ್ಲಿ ಪ್ರತ್ಯೇಕ ಕ್ರಿಕೆಟ್‌ ಸಂಸ್ಥೆಯನ್ನು ಶುರು ಮಾಡಿದರು. ಇದರ ಬೆನ್ನಲ್ಲೇ ಶೇಖರ್‌ ಸಿನ್ಹಾ, ಆದಿತ್ಯ ವರ್ಮ ಮತ್ತೂಂದು ಸಂಸ್ಥೆ ಸ್ಥಾಪಿಸಿದರು. ಈ ಇಷ್ಟರಲ್ಲಿ ಯಾವುದಕ್ಕೆ ಮಾನ್ಯತೆ ನೀಡಬೇಕು ಎಂಬ ಗೊಂದಲದ ಹಿನ್ನೆಲೆಯಲ್ಲಿ ಬಿಹಾರ ಕ್ರಿಕೆಟ್‌ ಸಂಸ್ಥೆಯೇ ಮಾನ್ಯತೆ ಕಳೆದುಕೊಂಡಿತು. ಬಹುತೇಕ 2010ರಿಂದೀಚೆಗೆ ಬಿಹಾರದಲ್ಲಿ ಕ್ರಿಕೆಟ್‌ ಚಟುವಟಿಕೆಗಳು ನಿಂತು ಹೋಗಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next