Advertisement

Supreme Court: ವೈವಾಹಿಕ ಅತ್ಯಾಚಾರ-ಮುಂದಿನ ತಿಂಗಳಿಂದ ಅರ್ಜಿಗಳ ವಿಚಾರಣೆ:CJI ಚಂದ್ರಚೂಡ್‌ 

10:00 PM Sep 22, 2023 | Team Udayavani |

ನವದೆಹಲಿ: ವೈವಾಹಿಕ ಅತ್ಯಾಚಾರ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಹಲವು ಅರ್ಜಿಗಳ ವಿಚಾರಣೆ ಮುಂದಿನ ತಿಂಗಳ ಮಧ್ಯಭಾಗದಿಂದ ಶುರುವಾಗಲಿದೆ.

Advertisement

ನ್ಯಾಯವಾದಿ ಕರುಣಾ ನಂದಿ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ನ್ಯಾ.ಜೆ.ಬಿ.ಪರ್ದಿವಾಲಾ, ನ್ಯಾ.ಮನೋಜ್‌ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠ ಮುಂದಿನ ತಿಂಗಳ ಮಧ್ಯಭಾಗದಿಂದ ವಿಚಾರಣೆ ನಡೆಸುವ ಬಗ್ಗೆ ಪ್ರಕರಣ ಲಿಸ್ಟ್‌ ಮಾಡುವ ಸೂಚನೆ ನೀಡಲಿದ್ದೇವೆ. ಸದ್ಯ ಸಾಂವಿಧಾನಿಕ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದೇವೆ ಎಂದು ಹೇಳಿತು.

ಪ್ರಾಪ್ತ ವಯಸ್ಕ ಪತ್ನಿಯ ಇಚ್ಛೆ ಇಲ್ಲದೇ ಇದ್ದರೂ ಪತಿ ಬಲವಂತಾಗಿ ಲೈಂಗಿಕ ಸಂಪರ್ಕ ಹೊಂದಿದರೆ ಅದು ಅತ್ಯಾಚಾರವಾಗುತ್ತದೆಯೇ ಎಂಬ ಅಂಶ ಬಗ್ಗೆ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಅರ್ಜಿಗಳ ವಿಚಾರಣೆ ನಡೆಸಲು ಎಷ್ಟು ದಿನಗಳು ಬೇಕಾಗುತ್ತವೆ ಎಂದು ನ್ಯಾಯಪೀಠ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಮತ್ತು ನ್ಯಾಯವಾದಿ ಕರುಣಾ ನಂದಿ ಅವರನ್ನು ಪ್ರಶ್ನಿಸಿದಾಗ “2 ದಿನಗಳು’ ಎಂದು ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next