ನವದೆಹಲಿ: ಸುಪ್ರೀಂ ಕೋರ್ಟ್ ಕುರಿತ ಮಾಹಿತಿ ಪಡೆಯಲು ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಆರ್‌ಟಿಐ ಅರ್ಜಿಗಳನ್ನು ಸಲ್ಲಿಸುವ ಆನ್‌ಲೈನ್ ಪೋರ್ಟಲ್ ಗುರುವಾರ ಕಾರ್ಯಾರಂಭ ಮಾಡಿದೆ.
ಸುಪ್ರೀಂ ಕೋರ್ಟ್‌ನಲ್ಲಿ ಆನ್‌ಲೈನ್‌ನಲ್ಲಿ ಆರ್‌ಟಿಐ ಅರ್ಜಿಗಳನ್ನು ಸಲ್ಲಿಸಲು ಕಾರ್ಯವಿಧಾನವನ್ನು ಕೋರಿ ಕಾನೂನು ವಿದ್ಯಾರ್ಥಿಗಳಿಬ್ಬರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಈ ಮಾಹಿತಿ ನೀಡಿತು.
“ಆರ್‌ಟಿಐ ಪೋರ್ಟಲ್ ಆರಂಭವಾಗಿದೆ. ಏನಾದರೂ ತಾಂತ್ರಿಕ ತೊಂದರೆ ಇದ್ದರೆ ಸಹಿಸಿಕೊಳ್ಳಿ. ಏನೇ ಸಮಸ್ಯೆ ಇದ್ದರೆ ಖುದ್ದು ನನಗೆ ತಿಳಿಸಿ. ಈ ಬಗ್ಗೆ ಗಮನಹರಿಸಲು ನಾನು ಉತ್ಸುಕನಾಗಿದ್ದೇನೆ,’ ಎಂದು ಸಿಜೆಐ ಹೇಳಿದರು.
ಮಾಹಿತಿ ಹಕ್ಕು ಕಾಯಿದೆಯಡಿ ಸುಪ್ರೀಂ ಕೋರ್ಟ್‌ಗೆ ಸಂಬಂಧಿಸಿದ ಮಾಹಿತಿಯನ್ನು ಆನ್‌ಲೈನ್ ಪೋರ್ಟಲ್ ಒದಗಿಸಲಿದೆ. ಈ ಮೊದಲು ಪೋಸ್ಟ್ ಮೂಲಕ ಮಾತ್ರ ಸುಪ್ರೀಂ ಕೋರ್ಟ್‌ಗೆ ಸಂಬಂಧಿಸಿದ ಆರ್‌ಟಿಐ ಅರ್ಜಿಗಳನ್ನು ಸಲ್ಲಿಸಲಾಗುತ್ತಿತ್ತು.