ನವ ದೆಹಲಿ : ಸುಪ್ರೀಂ ಕೋರ್ಟ್ ಸೋಮವಾರ (ಫೆಬ್ರವರಿ 15) ಫೇಸ್‌ಬುಕ್ ಮತ್ತು ವಾಟ್ಸಾಪ್‌ಗೆ ನೋಟಿಸ್ ಜಾರಿಗೊಳಿಸಿದೆ. ವಾಟ್ಸ್ಯಾಪ್ ನ ಇತ್ತೀಚಿನ ಗೌಪ್ಯತೆ ನೀತಿಯನ್ನು ಪ್ರಶ್ನಿಸಿ ಸಲ್ಲಿಸಿದ ಮನವಿಯಲ್ಲಿ ಸಂಸ್ಥೆಗಳ ಪ್ರತಿಕ್ರಿಯೆಯನ್ನು ಕೋರಿದೆ. ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ನ್ಯಾಯ ಪೀಠವು ಬಳಕೆದಾರರ ಡೇಟಾವನ್ನು ಇತರ ಕಂಪನಿಗಳೊಂದಿಗೆ ಹಂಚಿಕೊಳ್ಳುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜನರ ಗೌಪ್ಯತೆಯನ್ನು ಕಾಪಾಡಬೇಕು ಎಂದು ಅಭಿಪ್ರಾಯಪಟ್ಟಿದೆ.
ಓದಿ : ‘Post valentine day’…ಅಭಿಮಾನಿಗಳಿಗೆ ‘ಪ್ರೀತಿ’ ಬಗ್ಗೆ ನಟಿ ಹರಿಪ್ರಿಯಾ ಸಂದೇಶ
“ವಾಟ್ಸ್ಯಾಪ್ ನಿಂದ ಸಂದೇಶಗಳ ಸರ್ಕ್ಯೂಟ್ ಬಹಿರಂಗಗೊಳ್ಳುತ್ತದೆ ಎಂಬ ಆತಂಕವಿದೆ”. ಡೇಟಾ ಮತ್ತು ಚಾಟ್ ಗಳನ್ನು ಇತರರೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ನಾಗರಿಕರು ಭಾವಿಸುತ್ತಾರೆ. “ತಮ್ಮ ಗೌಪ್ಯತೆಯನ್ನು ಕಳೆದುಕೊಳ್ಳುವ ಬಗ್ಗೆ ನಾಗರಿಕರು ಹೆಚ್ಚಿನ ಆತಂಕವನ್ನು ಹೊಂದಿದ್ದಾರೆ” ಎಂದು ನ್ಯಾಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ನಿಮ್ಮದು ಎರಡು ಅಥವಾ ಮೂರು ಟ್ರಿಲಿಯನ್ ಸಂಸ್ಥೆಯಾಗಿರಬಹದು. ಆದರೇ, ಜನರು ತಮ್ಮ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಬಯಸುತ್ತಾರೆ. ಗೌಪ್ಯತೆಯನ್ನು ಜನರು ಹಣಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ನೋಡುತ್ತಾರೆ. ವಾಟ್ಸ್ಯಾಪ್ ನಲ್ಲಿ ಕಳುಹಿಸಿದ ಸಂದೇಶ ಫೇಸ್ಬುಕ್ ನಲ್ಲಿ ಬಹಿರಂಗವಾಗುತ್ತದೆ ಎಂದು ಆತಂಕ ಪಡುತ್ತಾರೆ. ಹಾಗಾಗಿ ಗೌಪ್ಯತೆಯನ್ನು ಕಾಪಾಡುವುದು ನಮ್ಮ ಕರ್ತವ್ಯ ಎಂದು ಬೊಬ್ಡೆ ವ್ಯಾಟ್ಸ್ಯಾಪ್ ಹಾಗೂ ಫೇಸ್ ಬುಕ್ ಗೆ ಸಲಹೆ ನೀಡಿದ್ದಾರೆ.
ಓದಿ : ಕಿಸಾನ್ ಸಮ್ಮಾನ್ ಲಾಭಕ್ಕಾಗಿ ವಂಚಕರ ಯತ್ನ : ನಕಲಿ ಖಾತೆಗಳನ್ನು ಪತ್ತೆ ಹಚ್ಚಿದ ಕೃಷಿ ಇಲಾಖೆ