Advertisement

“ಕೂಲಂಕಷ ವಿಚಾರಣೆ ನಂತರವಷ್ಟೇ ಜಾಮೀನು ನೀಡಿ’

10:38 PM Oct 10, 2021 | Team Udayavani |

ನವದೆಹಲಿ: ವ್ಯಕ್ತಿಗೆ ನಿರೀಕ್ಷಣಾ ಜಾಮೀನು ನೀಡುವಾಗ, ಆತ ಒಳಗೊಂಡಿರುವ ಪ್ರಕರಣದ ಗಂಭೀರತೆ ಹಾಗೂ ಆತನ ಮೇಲಿನ ಆರೋಪಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದ ನಂತರವಷ್ಟೇ ಜಾಮೀನು ನೀಡುವ ಕುರಿತಂತೆ ನಿರ್ಧರಿಸಬೇಕು. ಹೀಗೆಂದು ಕೆಳ ಹಂತದ ಕೋರ್ಟ್‌ಗಳಿಗೆ ಸುಪ್ರೀಂ ಕೋರ್ಟ್‌ ಕಿವಿಮಾತು ಹೇಳಿದೆ.

Advertisement

ಇತ್ತೀಚೆಗೆ, ಮಧ್ಯಪ್ರದೇಶ ಹೈಕೋರ್ಟ್‌ ಕೊಲೆ ಪ್ರಕರಣವೊಂದರಲ್ಲಿ ಇಬ್ಬರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡಿತ್ತು. ಈ ಆದೇಶವನ್ನು ರದ್ದುಗೊಳಿಸಿದ ನ್ಯಾ.ಡಿ.ವೈ. ಚಂದ್ರಚೂಡ್‌ ಹಾಗೂ ನ್ಯಾ.ಬಿ.ವಿ. ನಾಗರತ್ನ ಅವರುಳ್ಳ ಪೀಠ, ಈ ನಿರ್ದೇಶನ ನೀಡಿದೆ.

“ಇದೊಂದು ಕೊಲೆ ಪ್ರಕರಣವಾಗಿರುವುದರಿಂದ ಗಂಭೀರವೆಂದು ಪರಿಗಣಿಸಬೇಕು. ಎಫ್ಐಆರ್‌ನಲ್ಲಿ ಈ ಪ್ರಕರಣದಲ್ಲಿ ಆರೋಪಿಗಳ ಪಾತ್ರವೇನೆಂಬುದು ಸ್ಪಷ್ಟವಾಗಿದೆ. ಇವೆಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಿದ ನಂತರವೇ ಜಾಮೀನಿನ ಬಗ್ಗೆ ನಿರ್ಧರಿಸಬೇಕು” ಎಂದು ನ್ಯಾಯಪೀಠ ಹೇಳಿದೆ.

ಇದನ್ನೂ ಓದಿ:ಪ್ರತಿ ಜಿಲ್ಲೆಯಲ್ಲಿ ಮಾದರಿ ಕೋವಿಡ್‌ಫೀಲ್ಡ್‌ ಆಸ್ಪತ್ರೆ ತೆರೆಯಲು ಸರ್ಕಾರ ಸಿದ್ಧವಿದೆ

 

Advertisement
Advertisement

Udayavani is now on Telegram. Click here to join our channel and stay updated with the latest news.

Next