Advertisement

ಲಾಕ್‌ಡೌನ್‌ ವೇಳೆ ಸುಪ್ರೀಂಕೋರ್ಟ್‌ 593 ಅರ್ಜಿ ವಿಚಾರಣೆ

11:32 AM Apr 27, 2020 | sudhir |

ಹೊಸದಿಲ್ಲಿ: ಕೋವಿಡ್ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್‌ ಜಾರಿಯಾದ ಬಳಿಕ ಸುಪ್ರೀಂಕೋರ್ಟ್‌ ಒಟ್ಟು 593 ಅರ್ಜಿಗಳ ವಿಚಾರಣೆ ನಡೆಸಿ, 215 ಪ್ರಕರಣಗಳಲ್ಲಿ ತೀರ್ಪು ನೀಡಿದೆ. ವಿಶೇಷವೆಂದರೆ, ಈ ಎಲ್ಲ ಅರ್ಜಿಗಳ ವಿಚಾರಣೆ ನಡೆದಿರುವುದು ವಿಡಿಯೋ ಕಾನ್ಫರೆನ್ಸ್‌ ಮೂಲಕ.

Advertisement

ಸೋಂಕು ವ್ಯಾಪಕವಾದ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಜಾರಿಯಾಗುವ ಎರಡು ದಿನ ಮುನ್ನ ಅಂದರೆ, ಮಾ.23ರಂದು ಸುಪ್ರೀಂಕೋರ್ಟ್‌ ಅನ್ನು ತಾತ್ಕಾಲಿಕವಾಗಿ ಮುಚ್ಚಲಾಯಿತು.

ಎ.24ರವರೆಗೆ ಒಟ್ಟು 17 ದಿನಗಳ ಕಾಲ ವಿಡಿಯೋ ಕಾನ್ಫರೆನ್ಸ್‌ ಕೋರ್ಟ್‌ ಕಾರ್ಯನಿರ್ವಹಿಸಿದೆ. ಕೋರ್ಟ್‌ ಬಾಗಿಲು ಮುಚ್ಚಿದ ಹೊರತಾಗಿಯೂ ಇಷ್ಟೊಂದು ಅರ್ಜಿಗಳ ವಿಚಾರಣೆ ನಡೆಸಿರುವುದು ಉತ್ತಮ ಬೆಳವಣಿಗೆ. ಆದರೆ, ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಈ ಸಂಖ್ಯೆ ತೀರಾ ಕಡಿಮೆ. ಸಾಮಾನ್ಯ ಪರಿಸ್ಥಿತಿಯಲ್ಲಿ 17 ದಿನಗಳ ಅವಧಿಯಲ್ಲಿ ಅದು 3,500 ಅರ್ಜಿಗಳ ವಿಚಾರಣೆ ನಡೆಸುತ್ತಿತ್ತು. ಲಾಕ್‌ಡೌನ್‌ ವೇಳೆ ತುರ್ತು ಅರ್ಜಿಗಳನ್ನಷ್ಟೇ ಕೋರ್ಟ್‌ ಕೈಗೆತ್ತಿಕೊಳ್ಳುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next