ನವದೆಹಲಿ: ಒಂದು ಶ್ರೇಣಿ, ಒಂದು ಪಿಂಚಣಿ(ಒಆರ್‌ಒಪಿ) ಅಡಿಯಲ್ಲಿ ನಿವೃತ್ತ ಸೈನಿಕರಿಗೆ ಬಾಕಿ ಇರುವ ಪಿಂಚಣಿಯನ್ನು ಮಾ.15ರೊಳಗಾಗಿ ಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಜತೆಗೆ, ಇದರಲ್ಲಿ ಇನ್ನು ವಿಳಂಬ ಮಾಡುವಂತಿಲ್ಲ ಎಂದು ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಕೇಂದ್ರಕ್ಕೆ ತಾಕೀತು ಮಾಡಿತು.
ಒಆರ್‌ಒಪಿ ಅಡಿಯಲ್ಲಿ ಬಾಕಿ ಪಿಂಚಣಿ ಪಾವತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಯಾವುದೇ ಕ್ರಮದಿಂದ ನೊಂದಿದ್ದರೆ, ಅರ್ಜಿ ಸಲ್ಲಿಸಲು ಮಾಜಿ ಸೈನಿಕರ ಸಂಘಕ್ಕೆ ಸ್ವಾತಂತ್ರ್ಯವಿದೆ ಎಂದೂ ನ್ಯಾಯಪೀಠ ಹೇಳಿತು.
“ರಕ್ಷಣಾ ಪಡೆಗಳ ಲೆಕ್ಕಪತ್ರ
ಮಹಾನಿಯಂತ್ರಕರು(ಸಿಜಿಡಿಎ) ಪ್ರಕ್ರಿಯೆ ಪೂರ್ಣಗೊಳಿಸಿದೆ. ಮಾ.15ರೊಳಗೆ ಎÇÉಾ 25 ಲಕ್ಷ ಪಿಂಚಣಿದಾರರ ಖಾತೆಗಳಿಗೆ ಪಿಂಚಣಿ ಪಾವತಿಸಲಾಗುವುದು,’ ಎಂದು ಅಟಾರ್ನಿ ಜನರಲ್ ಆರ್.ವೆಂಕಟರಮಣಿ ತಿಳಿಸಿದರು.