Advertisement

2012ರ ರೇಪ್ ಆ್ಯಂಡ್ ಮರ್ಡರ್ ಆರೋಪಿಗಳನ್ನು ಖುಲಾಸೆ ಮಾಡಿದ ಸುಪ್ರೀಂ!

03:41 PM Nov 07, 2022 | Team Udayavani |

ಹೊಸದಿಲ್ಲಿ: 2012 ರಲ್ಲಿ ನಿರ್ಭಯಾ ಪ್ರಕರಣ ನಡೆಯುವ ಒಂದು ತಿಂಗಳ ಮೊದಲು ದೆಹಲಿಯಲ್ಲಿ 19 ವರ್ಷದ ಯುವತಿಯನ್ನು ಅತ್ಯಾಚಾರ ಮತ್ತು ಚಿತ್ರಹಿಂಸೆ ನೀಡಿ ಕೊಲೆಗೈದ ಮೂವರು ಅಪರಾಧಿಗಳನ್ನು ಸುಪ್ರೀಂ ಕೋರ್ಟ್ ಇಂದು ಬಿಡುಗಡೆ ಮಾಡಿದೆ. ಆ ಮೂವರನ್ನು ಬೇಟೆಗಾಗಿ ಬೀದಿಗಿಳಿಯುವ ಭಕ್ಷಕರು ಎಂದು ದೆಹಲಿ ಹೈಕೋರ್ಟ್ ಬಣ್ಣಿಸಿ, ಮರಣ ದಂಡನೆ ವಿಧಿಸಿತ್ತು.

Advertisement

2012 ರಲ್ಲಿ ಹರಿಯಾಣದ ರೇವಾರಿ ಜಿಲ್ಲೆಯ ಹೊಲವೊಂದರಲ್ಲಿ 19 ವರ್ಷದ ಯುವತಿಯು ನಾಪತ್ತೆಯಾದ ಮರುದಿನ ವಿರೂಪಗೊಂಡ ಮತ್ತು ದೇಹವು ಸುಟ್ಟ ರೀತಿಯಲ್ಲಿ ಪತ್ತೆಯಾಗಿತ್ತು. ಕಾರಿನ ಟೂಲ್ಸ್ ಗಳಿಂದ ಹೊಡೆದು ಆಕೆಯ ಮೇಲೆ ಹಲ್ಲೆ ಮಾಡಲಾಗಿತ್ತು.

ದೆಹಲಿಯ ನಜಾಫ್‌ಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಯುವತಿಯನ್ನು ಅಪಹರಿಸಿ, ಅತ್ಯಾಚಾರ ಮಾಡಿ ಕೊಲೆ ಮಾಡಿ, ಶವವನ್ನು ರೇವಾರಿ ಗದ್ದೆಯಲ್ಲಿ ಎಸೆದಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿತ್ತು.

2014ರ ಫೆಬ್ರವರಿಯಲ್ಲಿ ಅಪಹರಣ, ಅತ್ಯಾಚಾರ, ಕೊಲೆ ಸೇರಿ ಹಲವು ಆರೋಪಗಳಡಿಯಲ್ಲಿ ರವಿ ಕುಮಾರ್, ರಾಹುಲ್ ಮತ್ತು ವಿನೋದ್ ಎಂಬ ಮೂವರು ಆರೋಪಿಗಳ ದೋಷಿ ಎಂದು ದಿಲ್ಲಿ ಕೋರ್ಟ್ ತೀರ್ಪು ನೀಡಿತ್ತು. ಅಲ್ಲದೆ ಮೂವರಿಗೂ ಮರಣ ದಂಡನೆ ವಿಧಿಸಲಾಗಿತ್ತು.

ಇದನ್ನೂ ಓದಿ:ಇರಾನ್ ಮಾದರಿ: ಕೇರಳದಲ್ಲಿ ಹಿಜಾಬ್ ಸುಟ್ಟು ಮುಸ್ಲಿಂ ಮಹಿಳೆಯರ ಪ್ರತಿಭಟನೆ

Advertisement

ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದರೂ, ಅಲ್ಲೂ ಮರಣದಂಡನೆ ಶಿಕ್ಷೆಯನ್ನು ಎತ್ತಿಹಿಡಿಯಲಾಗಿತ್ತು. ಅಲ್ಲದೆ ಅಪರಾಧಿಗಳು ಬೇಟೆಗಾಗಿ ಬೀದಿಗಿಳಿಯುವ ಭಕ್ಷಕರು ಎಂದು ಅವರನ್ನು ಕರೆದಿತ್ತು.

ಹೈಕೋರ್ಟ್ ಆದೇಶವನ್ನು ಮೂವರು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದ್ದರು. ಶಿಕ್ಷೆ ಪ್ರಮಾಣವನ್ನು ಕಡಿಮೆ ಮಾಡಬೇಕು ಎಂದು ಕೋರಿದ್ದರು. ಆದರೆ ಇದಕ್ಕೆ ದೆಹಲಿ ಪೊಲೀಸರು ವಿರೋಧ ವ್ಯಕ್ತಪಡಿಸಿದ್ದರು. ಇವರುಗಳು ಅಪರಾಧ ಮಾಡಿರುವುದು ಸಂತ್ರಸ್ತರ ವಿರುದ್ಧ ಮಾತ್ರವಲ್ಲ, ಸಮಾಜದ ವಿರುದ್ಧ ಎಂದು ಪೊಲೀಸರು ಹೇಳಿದ್ದರು. ಪೊಲೀಸರು ಅಪರಾಧದ ಹೇಯ ಸ್ವರೂಪವನ್ನು ಉಲ್ಲೇಖಿಸಿ ಅಪರಾಧಿಗಳಿಗೆ ಯಾವುದೇ ರಿಯಾಯಿತಿಯ ನೀಡಬಾರದು ಎಂದು ವಾದಿಸಿದರು.

ಆದರೆ ಅಪರಾಧಿಗಳ ಪರವಾಗಿ ವಾದಿಸಿದ್ದ ಡಿಫೆನ್ಸ್ ಕೌನ್ಸಿಲ್, ಮೂವರು ಪ್ರಾಯ, ಕೌಟುಂಬಿಕ ಹಿನ್ನೆಲೆಯನ್ನು ಪರಿಗಣಿಸಿ ಶಿಕ್ಷೆ ಕಡಿಮೆಗೊಳಿಸಲು ವಾದಿಸಿದ್ದರು.

ಇದೀಗ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ಮತ್ತು ನ್ಯಾಯಮೂರ್ತಿಗಳಾದ ಎಸ್ ರವೀಂದ್ರ ಭಟ್ ಮತ್ತು ಬೇಲಾ ಎಂ ತ್ರಿವೇದಿ ಅವರ ಪೀಠವು ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿ, ಮೂವರನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next