ಹೊಸದಿಲ್ಲಿ: ಕೊರೊನಾ ಅವಧಿಯಲ್ಲಿ ಬಿಡುಗಡೆಯಾಗಿದ್ದ ಎಲ್ಲ ಅಪರಾಧಿಗಳು ಮತ್ತು ವಿಚಾರಣಾಧೀನ ಕೈದಿಗಳು 15 ದಿನಗಳ ಒಳಗಾಗಿ ಶರಣಾಗುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ.
ಸಾಂಕ್ರಾಮಿಕದ ಸಮಯದಲ್ಲಿ ತುರ್ತು ಜಾಮೀನಿನ ಮೇರೆಗೆ ಬಿಡುಗಡೆಯಾಗಿದ್ದ ಎಲ್ಲರೂ ಮೊದಲು ಶರಣಾಗಬೇಕು. ಅನಂತರ ಸಂಬಂಧಪಟ್ಟ ಕೋರ್ಟ್‌ಗಳಿಗೆ ಸಾಮಾನ್ಯ ಜಾಮೀನು ಕೋರಿ ಅರ್ಜಿ ಸಲ್ಲಿಸಬಹುದು ಎಂದು ನ್ಯಾ|ಎಂ.ಆರ್.ಶಾ ಮತ್ತು ನ್ಯಾ.ಸಿ.ಟಿ. ರವಿಕುಮಾರ್ ನೇತೃತ್ವದ ನ್ಯಾಯಪೀಠ ಸೂಚಿಸಿದೆ.
ಘೋರ ಅಪರಾಧವಲ್ಲದ ಕೃತ್ಯಗಳನ್ನು ನಡೆಸಿ ಜೈಲುಪಾಲಾಗಿದ್ದವರು ಮತ್ತು ಕೆಲವು ವಿಚಾರಣಾಧೀನ ಕೈದಿಗಳನ್ನು ಕೊರೊನಾ ಸೋಂಕು ಹೆಚ್ಚಳವಾಗುತ್ತಿದ್ದಾಗ ಜೈಲಲ್ಲಿರುವ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಬಿಡುಗಡೆ ಮಾಡಲಾಗಿತ್ತು.
ಸುಪ್ರೀಂ ಕೋರ್ಟ್ ನಿರ್ದೇ ಶನದ ಅನ್ವಯ ನೇಮಕ ಮಾಡಲಾಗಿದ್ದ ಉನ್ನತ ಮಟ್ಟದ ಸಮಿತಿಯ ಶಿಫಾರಸಿನ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಅಂಥ ಕೈದಿಗಳಿಗೆ ಈಗ ಶರಣಾಗಲು ಆದೇಶಿಸಲಾಗಿದೆ.