Advertisement

ನ್ಯಾಯಪೀಠಗಳ ನಡುವಿನ ತಿಕ್ಕಾಟ ಈಗ ಸಿಜೆಐ ಮುಂದೆ

10:38 AM Feb 23, 2018 | |

ಹೊಸದಿಲ್ಲಿ: ಭೂಸ್ವಾಧೀನ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಎರಡು ಪೀಠಗಳ ನಡುವೆ ಜಿದ್ದಾ ಜಿದ್ದಿ ಶುರುವಾಗಿದ್ದು, ಈ ವಿವಾದ ಇದೀಗ ಮುಖ್ಯ ನ್ಯಾಯಮೂರ್ತಿಗಳತ್ತ ರವಾನೆಯಾಗಿದೆ. 

Advertisement

2014ರಲ್ಲಿ ನ್ಯಾ| ಆ ರ್‌.ಎಂ.ಲೋಧಾ, ನ್ಯಾ| ಮದನ್‌ ಬಿ ಲೋಕುರ್‌ ಮತ್ತು ನ್ಯಾ| ಕುರಿ ಯನ್‌ ಜೊಸೆಫ್ ಅವರು ನೀಡಿದ್ದ ತೀರ್ಪನ್ನು ಅಸಿಂಧು ಎಂದು ಫೆ.8 ರಂದು ನ್ಯಾ| ಅರುಣ್‌ ಮಿಶ್ರಾ, ನ್ಯಾ| ಆದರ್ಶ್‌ ಕೆ.ಗೋ ಯಲ್‌ ಮತ್ತು ನ್ಯಾ| ಶಾಂತನು ಗೌಡರ್‌ ಅವರಿದ್ದ ಪೀಠ ಹೇಳಿತ್ತು. ಆದರೆ, ಫೆ.8ರ ತೀರ್ಪಿನ ಬಗ್ಗೆ ಫೆ.21ರಂದು ನ್ಯಾ| ಮದನ್‌ ಬಿ.ಲೋ ಕುರ್‌ ಅವರ ಪೀಠ ಆಕ್ಷೇಪ ವ್ಯಕ್ತ ಪ ಡಿ ಸಿತ್ತು. ಈ ಆಕ್ಷೇ ಪಕ್ಕೆ ಗುರು ವಾರ ವಿಚಾರಣೆ ನಡೆಸಿದ ನ್ಯಾ| ಅರುಣ್‌ ಮಿಶ್ರಾ ಮತ್ತು ನ್ಯಾ| ಅಮಿ ತಾವ್‌ ರಾಯ್‌ ಅವರುಳ್ಳ ಪೀಠವೂ ಬೇಸರ ವ್ಯಕ್ತ ಪಡಿಸಿದ್ದು, ಈ ವಿಚಾರವನ್ನು ಮುಖ್ಯ ನ್ಯಾಯ ಮೂರ್ತಿಗಳೇ ಇತ್ಯರ್ಥ ಮಾಡಲಿ ಎಂದು ಹೇಳಿದೆ. 

ಫೆ.8 ರಂದು ತೀರ್ಪು ನೀಡಿದ್ದ ನ್ಯಾ| ಅರುಣ್‌ ಮಿಶ್ರಾ ಅವರ ನೇತೃ ತ್ವದ ಪೀಠವು, ನ್ಯಾ| ಮದನ್‌ ಬಿ. ಲೋಕುರ್‌ ಅವರ ಪೀಠದ ಆಕ್ಷೇಪಕ್ಕೆ ಪ್ರತಿ ಕ್ರಿಯೆ ನೀಡಿದ್ದು, ಇವರು ತಮ್ಮ ಅಂದಿನ 200 ಪುಟ ಗಳ ತೀರ್ಪನ್ನು ಸಂಪೂರ್ಣವಾಗಿ ಓದಿಲ್ಲ. ಆದರೂ ಹೇಳಿಕೆ ನೀಡು ತ್ತಿ ದ್ದಾರೆ ಎಂದು ಬೇಸ ರ ವನ್ನೂ ವ್ಯಕ್ತ ಪಡಿಸಿದ್ದಾರೆ. ಹೀಗಾಗಿ ಈ ಪೀಠ ಗಳ ನಡು ವಿನ ತೀಪಿುìನ ಜಗಳ ಇದೀಗ ಮುಖ್ಯ ನ್ಯಾಯ ಮೂರ್ತಿಗಳ ಅಂಗಳಕ್ಕೆ ತಲುಪಿದೆ.

2014ರ ತೀರ್ಪೇನು ?
ಭೂಸ್ವಾಧೀನಪಡಿಸಿ ಕೊಂಡವರು 5 ವರ್ಷದೊಳಗೆ ಪರಿಹಾರ ನೀಡದಿದ್ದರೆ ಭೂಮಿ ಹಿಂದಿನ ಮಾಲಕ ರಿಗೆ ವಾಪಸ್‌ ಹೋಗುತ್ತದೆ ಎಂದು ತೀರ್ಪು ನೀಡಲಾಗಿತ್ತು. ಆದರೆ ಫೆ.8 ರಂದು ಈ ತೀರ್ಪು ಬದಲಾ ಯಿಸಿ ಪರಿಹಾರ ನೀಡುವಲ್ಲಿ  ತಡವಾದ ಮಾತ್ರಕ್ಕೆ ಭೂಮಿ ವಾಪಸ್‌ ಪಡೆಯುವಂತಿಲ್ಲ ಎಂದಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next