Advertisement

ವೋಟರ್‌ ಐಡಿ ಲಿಂಕ್‌: ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಗೆ ಸೂಚನೆ

07:38 PM Jul 25, 2022 | Team Udayavani |

ನವದೆಹಲಿ: ಮತದಾರರ ಗುರುತಿನ ಚೀಟಿಗಳನ್ನು ಆಧಾರ್‌ ಕಾರ್ಡ್‌ ಜೊತೆಗೆ ಕಡ್ಡಾಯವಾಗಿ ಲಿಂಕ್‌ ಮಾಡುವ ಸರ್ಕಾರದ ಉದ್ದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿರುವ ಕಾಂಗ್ರೆಸ್‌ ನಾಯಕ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರಿಗೆ ನ್ಯಾಯಪೀಠ, ನಿಮ್ಮ ವಾಸಸ್ಥಳಕ್ಕೆ ಸಂಬಂಧಿಸಿದ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿದೆ.

Advertisement

ನೀವು 2021ರ ಚುನಾವಣಾ ಕಾನೂನು ಕಾಯ್ದೆಯ 4 ಮತ್ತು 5ನೇ ಪರಿಚ್ಛೇದಗಳ ಪರಿಷ್ಕರಣೆಗೆ ಮನವಿ ಸಲ್ಲಿಸಿದ್ದೀರಿ. ಅದಕ್ಕಾಗಿ ನೀವು ಸುಪ್ರೀಂ ಕೋರ್ಟ್‌ಗೇ ಬರಬೇಕೆಂದೇನಿಲ್ಲ.

ದೆಹಲಿ ಹೈಕೋರ್ಟ್‌ನಲ್ಲೇ ಅರ್ಜಿ ಸಲ್ಲಿಸಬಹುದು ಎಂದು ನ್ಯಾ. ಡಿ.ವೈ. ಚಂದ್ರಚೂಡ್‌, ನ್ಯಾ. ಎ.ಎಸ್‌. ಬೋಪಣ್ಣ ಅವರುಳ್ಳ ಪೀಠ ನಿರ್ದೇಶನ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next