ನವದೆಹಲಿ: ಕಾನೂನಿನ ಕೈ ತುಂಬಾ ನೀಳವಾಗಿದ್ದು, ಅದು ಯಾರನ್ನೂ ಬಿಡದು ಎಂಬ ಮಾತು ಅಪ್ಪಟ ಸತ್ಯವೆಂಬುದು ಸಾಬೀತಾಗಿದ್ದು, ಈಗ ಅದೇ ಕಾನೂನಿನ ಕೈ ಕೈಲಾಸೇಶ್ವರನ ಕಡೆಗೂ ಚಾಚಿ ಹೋಗಿದೆ! ಪರಿಣಾಮ, ಐತಿಹಾಸಿಕ ದೇಗುಲವಾದ ಉಜ್ಜಯಿನಿಯ ಮಹಾಕಾಲ ದೇಗುಲದ ಶಿವನೂ ಇನ್ನು ಕಾನೂನಿನ ಚೌಕಟ್ಟಿನಲ್ಲೇ ಪೂಜೆ ಪಡೆಯಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾನೆ!
ಮಹಾಕಾಲ ದೇಗುಲದ ಶಿವಲಿಂಗವು ಅತಿಯಾದ ಅಲಂಕಾರ, ಸೇವೆಗಳಿಂದಾಗಿ ಸಂಕುಚಿತಗೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯ, ಅಲ್ಲಿನ ಪೂಜೆ, ಅಲಂಕಾರಗಳಿಗೆ ಕೆಲ ಮಿತಿಗಳನ್ನು ಹೇರಿದೆ.
ತೀರ್ಪು ಪ್ರಕಟಿಸಿರುವ ಸುಪ್ರೀಂ ಕೋರ್ಟ್, ನಿತ್ಯ ಅಭಿಷೇಕಕ್ಕೆ ಅರ್ಧ ಲೀ. ಆರ್.ಒ. (ರಿವರ್ಸ್ ಆಸ್ಮೋಸಿಸ್)ಯುಕ್ತ ನೀರು ಹಾಗೂ ಕಾಲು ಲೀ. ಹಾಲು ಮಾತ್ರ ಬಳಸಲು ಸೂಚಿಸಿದೆ. ಬೆಣ್ಣೆ, ತುಪ್ಪ, ಜೇನು ತುಪ್ಪ ಬಳಕೆ ನಿಷೇಧಿಸಿದೆ.
ಏನಿದರ ಹಿನ್ನೆಲೆ?: ಶತಮಾನಗಳಿಂದ ಮಹಾಕಾಲದ ದೇಗುಲದ ಶಿವಲಿಂಗಕ್ಕೆ ಭಾಂಗ್ ಅಲಂ ಕಾರ್, ಪಂಚಾಮೃತ ಸೇವೆಗಳನ್ನು ನಡೆಸುತ್ತಾ ಬರಲಾಗಿದ್ದು, ಇತ್ತೀಚೆಗೆ, ಉಜ್ಜಯಿನಿಯ ಚಿಂತಕರ ಚಾವಡಿಯಾದ “ಉಜ್ಜಯಿನಿ ವಿದ್ವತ್ ಪರಿಷದ್’, ಅತಿಯಾದ ಭಾಂಗ್ ಅಲಂಕಾರ ಹಾಗೂ ಪಂಚಾ ಮೃತ ಅಭಿಷೇಕಗಳಿಂದ ಶಿವಲಿಂಗ ಸಂಕುಚಿತ ಗೊಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿತ್ತು. ಇದು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.
ಈ ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ದ್ದರಿಂದ, ನ್ಯಾಯಾಲಯ ನಿಜ ಸ್ಥಿತಿ ಅವಲೋಕನ ಕ್ಕಾಗಿ ಭಾರತೀಯ ಪ್ರಾಚ್ಯವಸ್ತು ಸಂಶೋಧನಾ ಇಲಾ ಖೆಯ ತಜ್ಞರುಳ್ಳ ಸಮಿತಿಯೊಂದನ್ನು ರಚಿಸಿತ್ತು. ತಜ್ಞರ ವರದಿಯಲ್ಲಿ, ವಿದ್ವತ್ ಪರಿಷದ್ ಎತ್ತಿರುವ ತಕರಾರುಗಳಲ್ಲಿ ಕೆಲವನ್ನು ತಳ್ಳಿಹಾಕಲಾಗಿದ್ದರೂ, ಶಿವಲಿಂಗ ಸಂಕುಚಿತಗೊಳ್ಳುತ್ತಿರುವುದನ್ನು ಒಪ್ಪಿಕೊಳ್ಳ ಲಾಗಿತ್ತು. ಭಾಂಗ್ ಪೂಜೆಯಿಂದ ಮಾತ್ರವಲ್ಲದೆ, ಮಿತಿಮೀರಿದ ಇತರ ಪೂಜಾ ಕ್ರಮಗಳಿಂದಲೂ ಶಿವಲಿಂಗಕ್ಕೆ ತೊಂದರೆಯಾಗುತ್ತಿದೆ ಎನ್ನಲಾಗಿತ್ತು.