Advertisement

ಕಾವೇರಿ ಸ್ಕೀಮ್‌ ಕರಡು ನಿಯಮಕ್ಕೆ ಸುಪ್ರೀಂ ಒಪ್ಪಿಗೆ

06:00 AM May 19, 2018 | |

ಹೊಸದಿಲ್ಲಿ: ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಮೇ 15ರಂದು ಸಲ್ಲಿಸಿದ್ದ ಕರಡು ನಿಯಮಕ್ಕೆ ಸುಪ್ರೀಂ ಕೋರ್ಟ್‌ ಒಪ್ಪಿಗೆ ಸೂಚಿಸಿದೆ. ಹೀಗಾಗಿ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ನಡುವೆ ನೀರು ಹಂಚಿಕೆ ಸುಗಮವಾಗಲಿದೆ. ಇದೇ ವೇಳೆ, ಕರ್ನಾಟಕ ಮತ್ತು ಕೇರಳ  ಸಲ್ಲಿ ಸಿದ್ದ ಸಲಹೆಗಳನ್ನು ಮುಖ್ಯ ನ್ಯಾಯ ಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ನ್ಯಾಯಪೀಠ ತಿರಸ್ಕರಿಸಿದೆ. ಜತೆಗೆ ಮುಂಗಾರು ಹಂಗಾಮಿನ ಮೊದಲೇ ಸ್ಕೀಮ್‌ ಜಾರಿ ಮಾಡುವಂತೆ ಸೂಚಿಸಿದೆ.

Advertisement

ಸ್ಕೀಮ್‌ ಮೂಲಕ ಕಾವೇರಿ ನ್ಯಾಯ ಮಂಡಳಿಯ ಆದೇಶ ಜಾರಿಗೊಳಿಸಿ ದಂತಾಗಿದೆ ಎಂದು ನ್ಯಾಯಪೀಠ ಶುಕ್ರವಾರ ಅಭಿಪ್ರಾಯಪಟ್ಟಿದೆ. ಇದೇ ವೇಳೆ ಕೇಂದ್ರ ಸರಕಾರದ ವಿರುದ್ಧ ತಮಿಳುನಾಡು ಸರಕಾರದ ಪರ ವಕೀಲ ಶೇಖರ ನಾಫೆ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.

ಕೇಂದ್ರ ಸರಕಾರ ಸಲ್ಲಿಸಿರುವ ಸ್ಕೀಮ್‌ನ ಕರಡು ನಿಯಮಗಳು ಫೆ.16ರಂದು ತಾನು ನೀಡಿರುವ ತೀರ್ಪು ಮತ್ತು ಅಂತಾರಾಜ್ಯ ನದಿ ನೀರು ಹಂಚಿಕೆ ಕಾಯ್ದೆ ಸೆಕ್ಷನ್‌ “6ಎ’ಗೆ ಅನ್ವಯವಾಗಿಯೇ ಇದೆ ಎಂದು ಸಿಜೆಐ ಮಿಶ್ರಾ ನೇತೃತ್ವದ ಪೀಠ ಹೇಳಿದೆ. ಹೀಗಾಗಿ ಅದನ್ನು ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಳ್ಳಬೇಕು ಎಂದು ನ್ಯಾಯಪೀಠ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next