Advertisement

ನಮೀಬಿಯಾದಿಂದ ಭಾರತಕ್ಕೆ ಬರಲಿವೆ ಅಪರೂಪದ ‘ಚೀತಾ’!

09:50 AM Jan 29, 2020 | Hari Prasad |

ನವದೆಹಲಿ: ಅಳಿವಿನಂಚಿನಲ್ಲಿರುವ ಆಫ್ರಿಕಾದ ನಮೀಬಿಯಾ ದೇಶದಿಂದ ಚಿರತೆಗಳನ್ನು ಇಲ್ಲಿನ ನಿರ್ಧಿಷ್ಟ ಪ್ರದೇಶಗಳಲ್ಲಿ ತಂದು ಬಿಡಲು ಸುಪ್ರಿಂ ಕೋರ್ಟ್ ಇಂದು ಅನುಮತಿ ನೀಡಿದೆ. ಈ ನಿರ್ಧಿಷ್ಟ ತಳಿಯ ಚಿರತೆಯು ಅಳಿವಿನಂಚಿನಲ್ಲಿರುವುದರಿಂದ ಅದನ್ನು ಭಾರತದಲ್ಲಿ ತಂದು ಸಾಕಲು ಅನುಮತಿ ನೀಡಬೇಕೆಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಸಲ್ಲಿಸಿದ್ದ ಮನವಿಯ ಪರಿಶೀಲನೆಯ ಸಂದರ್ಭದಲ್ಲಿ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ಅವರ ನೇತೃತ್ವದ ನ್ಯಾಯಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

Advertisement

ಈ ಚಿರತೆಗಳ ಆಹಾರ ಕ್ರಮ, ಜೀವನ ಶೈಲಿಗಳನ್ನು ವಿವರವಾಗಿ ಅಧ್ಯಯನ ನಡೆಸಿದ ಬಳಿಕ ಇವುಗಳನ್ನು ಮಧ್ಯಪ್ರದೇಶದ ಕುನೋ ಉದ್ಯಾನದಲ್ಲಿ ಅಥವಾ ಅವುಗಳಿಗೆ ಸೂಕ್ತವೆಣಿಸುವ ದೇಶದ ಯಾವುದೇ ಭಾಗದಲ್ಲಿ ಇರಿಸಬಹುದಾಗಿದೆ ಎಂದು ನ್ಯಾಯಪೀಠವು ಸೂಚನೆ ನೀಡಿತು.

ಪ್ರಾಯೋಗಿಕ ನೆಲೆಯಲ್ಲಿ ಆಫ್ರಿಕಾದ ಚಿರತೆಗಳನ್ನು ಭಾರತಕ್ಕೆ ತರಿಸಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ತಜ್ಞರ ಸಮಿತಿಯಿಂದ ಪ್ರತೀ ನಾಲ್ಕ ತಿಂಗಳುಳಿಗೊಮ್ಮೆ ಪ್ರಗತಿ ವರದಿಯನ್ನು ತನಗೆ ಸಲ್ಲಿಸುವಂತೆಯೂ ನ್ಯಾಯಪೀಠ ಇದೇ ಸಂದರ್ಭದಲ್ಲಿ ಆದೇಶ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next