Advertisement
ಇದೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ಮೌಖೀಕ ವಾದ-ಪ್ರತಿವಾದಗಳಿಗೆ ಲಿಖೀತ ರೂಪ ನೀಡುವ ವ್ಯವಸ್ಥೆಯ ಪರೀಕ್ಷೆಯನ್ನು ಸುಪ್ರೀಂ ಕೋರ್ಟ್ ಆರಂಭಿಸಿದೆ. ಸಿಜೆಐ ಡಿ.ವೈ.ಚಂದ್ರಚೂಡ್, “ನಾವೀಗ ಕೋರ್ಟ್‌ನ ವಾದ-ಪ್ರತಿವಾದಗಳ ನೇರ ಲಿಪ್ಯಂತರದ ಸಾಧ್ಯತೆ ಪರೀಕ್ಷಿಸುತ್ತಿದ್ದೇವೆ. ಕನಿಷ್ಠ ಪಕ್ಷ ಸಂವಿಧಾನ ಪೀಠದ ವಿಚಾರಣೆಗಳಲ್ಲಿ ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಪರೀಕ್ಷಿಸೋಣ ಎಂದರು.
ಪ್ರಾಯೋಗಿ ಕವಾಗಿ ಕೇರಳ ಹೈಕೋರ್ಟ್ ಮಲಯಾಳದಲ್ಲಿ ತೀರ್ಪುಗಳನ್ನು ಪ್ರಕಟಿಸಲು ಪ್ರಾರಂಭಿಸಿದೆ. ಈ ಮೂಲಕ ಪ್ರಾದೇಶಿಕ ಭಾಷೆಯಲ್ಲಿ ತೀರ್ಪು ಪ್ರಕಟಿಸಿದ ಮೊದಲ ಹೈಕೋರ್ಟ್ ಎಂಬ ಹೆಗ್ಗಳಿಕೆಗೆ ಕೇರಳ ಹೈಕೋರ್ಟ್ ಪಾತ್ರವಾ ಗಿದೆ. ಕೇರಳ ಸಿ.ಜೆ. ಎಸ್.ಮಣಿಕುಮಾರ್ ಮತ್ತು ನ್ಯಾ| ಶಾಜಿ ಪಿ. ಚಾಲಿ ಅವರಿದ್ದ ವಿಭಾಗೀಯ ಪೀಠ ನೀಡಿರುವ ಎರಡು ತೀರ್ಪುಗಳು ಮಲಯಾಳ ಭಾಷೆಯಲ್ಲಿ ಲಭ್ಯವಿವೆ.